ಬಳ್ಳಾರಿ: ಜಿಲ್ಲೆಯ ಸಂಡೂರಿನ ಶ್ರೀ ಕುಮಾರಸ್ವಾಮಿ ಬೆಟ್ಟದ ಮುಖ್ಯ ರಸ್ತೆಯ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ವಾಹನ ಸವಾರರಿಗೆ ವ್ಯಾಪ್ತಿಯ ಜನರಲ್ಲಿ ಆತಂಕ ಮನೆ ಮಾಡಿದೆ. ವಾಹನ ಮೂಲಕ ಬೆಟ್ಟದ ಬಳಿ ತೆರಳುವಾಗ ಸವಾರರೋಬ್ಬರಿಗೆ ರಸ್ತೆ ಬದಿ ಚಿರತೆ ಕುಳಿತಿರುವುದು ಪ್ರತ್ಯಕ್ಷವಾಗಿದೆ, ಇದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಸವಾರರು ಅಂಗೈಲಿ ಜೀವ ಹಿಡಿದು ಕೆಲ ಕಾಲ ತೆಪ್ಪಗೆ ಕುಳಿತಿದ್ದಾರೆ. ನಂತರ ಚಿರತೆ ವಾಪಸ್ಸು ಕಾಡಿಗೆ ಹೋರಟಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಅರಣ್ಯ ಇಲಾಖೆ ಗಮನಹರಿಸಿ: ಇದು ಮೊದಲಲ್ಲ, ಈ ರೀತಿ ಶ್ರೀ ಕುಮಾರಸ್ವಾಮಿ ಬೆಟ್ಟದ ಮೇಲೆ ಆಗಾಗ್ಗೆ ಚಿರತೆ ಪ್ರತ್ಯಕ್ಷವಾಗುವುದು ಸಾಮಾನ್ಯವಾಗಿದೆ, ಸಂಭಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದು ಪ್ರಯಾಣಿಕರನ್ನು ಹಾಗೂ ವ್ಯಾಪ್ತಿಯ ಜನರನ್ನು ರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕುಮಾರಸ್ವಾಮಿ ಬೆಟ್ಟದಲ್ಲಿನ ಕಾಡು ಪ್ರಾಣಿಗಳು ಆಹಾರ ಅರೆಸಿ ನಾಡಿಗೆ ಬೇರುತ್ತಿದ್ದು, ಜನರ ಸುರಕ್ಷತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.