ಬಳ್ಳಾರಿ, ಏ.04: ರಾಜ್ಯದ ಎಲ್ಲಾ ವರ್ಗದ ಸನ್ನದುದಾರರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸಂಬಂಧಪಟ್ಟು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿ ಎದುರು ಜಿಲ್ಲಾ ಸಂಘದ ನೇತೃತ್ವದಲ್ಲಿ ಎಲ್ಲಾ ವರ್ಗದ ಸನ್ನದುದಾರರು ‘ಸಾಂಕೇತಿಕ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.
ಅಂತೆಯೇ ನಮ್ಮ ಜಿಲ್ಲೆಯಲ್ಲೂ ಕೂಡಾ ನಾವು ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದು ಬಳ್ಳಾರಿ ಜಿಲ್ಲಾ ಮಧ್ಯ ಮಾರಾಟಗಾರ ಸಂಘದ ಅಧ್ಯಕ್ಷರಾದ ಎಸ್ ಸತೀಶ್ ಬಾಬು ತಿಳಿಸಿದರು.
ಅವರು ಇಂದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇಕಡ 20 ಲಾಭಾಂಶ ನೀಡಬೇಕು, ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು, ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಬಾರದು. ಮತ್ತು ಇತ್ತೀಚಿನ
ವರ್ಷಗಳಲ್ಲಿ ಸನ್ನದುಗಳ ಸಂಖ್ಯೆ ಮಾತ್ರ ಹೆಚ್ಚಳ ಆಗಿರುವುದು ಬಿಟ್ಟರೆ ಮದ್ಯ ಮಾರಾಟ ಗಣನೀಯವಾಗಿ ಹೆಚ್ಚಳ ಮಾಡಬೇಕು
ನೀಡಲು ಅವಕಾಶ ಕೆಲವೊಂದು ಸನ್ನದುಗಳನ್ನು ಏಲಂ ಮಾಡಲಾಗುವುದು ಎಂದು ಇಲಾಖೆ ಸರ್ಕಾರಕ್ಕೆ ನೀಡಿರುವ ಪ್ರಸ್ತಾವನೆಯಲ್ಲೂ ಕೂಡ ಇದೆ.
ದಯವಿಟ್ಟು ಯಾವುದೇ ಕಾರಣಕ್ಕೂ ಸನ್ನದುಗಳನ್ನು ಬಲವಂತವಾಗಿ ಏಳ ಮಾಡಬಾರದಾಗಿ, ಸಿ.ಎಲ್-2ಗಳಲ್ಲಿ ಪಾನೀಕರಿಗೆ ಮದ್ಯ ಸೇವಿಸಲು ಅವಕಾಶ ಮಾಡಿಕೊಡಬೇಕು ಸಿ.ಎಲ್-9, ಸಿಎಲ್-7 ಅಥವಾ ಇನ್ನಿತರ ದೊಡ್ಡ ಹೋಟೆಲುಗಳಿಗೆ ಹೋಗಿ ಮದ್ಯದೊಂದಿಗೆ ಆಹಾರಪದಾರ್ಥಗಳನ್ನು ತೆಗೆದುಕೊಂಡು ದುಬಾರಿ ಖರ್ಚು ಮಾಡಲು ಸಾಧ್ಯವಿಲ್ಲದ ಬಡ
ವರ್ಗದ ಗ್ರಾಹಕರಿಗೆ ಅನುಕೂಲವಾಗಲು ಸನ್ನದು ಷರತ್ತನ್ನು ಸಡಲಿಸುವ
ಅಗತ್ಯವಿದೆ. ಸನ್ನದು ಆವರಣದಲ್ಲಿ ನಿಗದಿಪಡಿಸಿದ ನಿರ್ಧಿಷ್ಟ ಸ್ಥಳ ಮತ್ತು ಮೊದಲೇ ತಯಾರಿಸಿದ ಆಹಾರಗಳನ್ನು
ಮಾಡಿಕೊಡುವುದರಿಂದ ಬಡ ವರ್ಗದ ಗ್ರಾಹಕರಿಗೆ ಸಹಾಯವಾಗುತ್ತದೆ ಮತ್ತು
ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಮಾಡುವುದನ್ನು ತಡೆಗಟ್ಟುವ ಸಾಧ್ಯತೆ ಇರುತ್ತದೆ. ಹಾಗೂ ಕಾಯ್ದೆ ಉಲ್ಲಂಘನೆ ತಡೆಯಬಹುದು.
ನೆರೆ ರಾಜ್ಯದಲ್ಲಿ ಈ ತೆರನಾದ ವ್ಯವಸ್ಥೆಇರುತ್ತದೆ ಹಾಗೂ ಹೆಚ್ಚುವರಿ ಶುಲ್ಕವನ್ನು ಅಳವಡಿಸುವುದರಿಂದ ಸರಕಾರಕ್ಕೆ ವರಮಾನ ಜಾಸ್ತಿ ಆಗುತ್ತದೆ. ನಿಗದಿತ ಸ್ಥಳಾವಕಾಶದಲ್ಲಿ ಆಹಾರ ತಯಾರಿಕೆಗೆ ಅವಕಾಶ ನೀಡದೆ,ಮದ್ಯವನ್ನು ಮಾತ್ರ ನಿಂತು ಕುಡಿಯಲು ಅವಕಾಶವನ್ನು ನೀಡುವಂತೆ ವಿನಂತಿಸುತ್ತಿದ್ದೇವೆ.
ಕಾನೂನು ಬಾಹಿರವಾಗಿ ವ್ಯವಹರಿಸದಂತೆ ಕಠಿಣ ಕಾನೂನು ರೂಪಿಸಬೇಕು. ಈ ವ್ಯವಸ್ಥೆ
ಬಯಸುವ ಸನ್ನದುದಾರರಿಗೆ ಹೆಚ್ಚುವರಿ ಶುಲ್ಕ ವಿಧಿಸುವುದರಿಂದ ಸರ್ಕಾರದ ವರಮಾನದ ಹೇಚ್ಚಳಕ್ಕೆ ಸಹಾಯವಾಗುತ್ತದೆ.
ಸಿ.ಎಲ್-9ಗಳಲ್ಲಿ ಮಾತ್ರ ಹೆಚ್ಚುವರಿ ಕೌಂಟಗಳನ್ನು ಶುಲ್ಕ ವಿಧಿಸಿ ನೀಡುವ ಕುರಿತು ಮಂಜೂರಾದ ಸನ್ನದು ಆವರಣದಲ್ಲಿ ಮೊದಲನೇ ಮಹಡಿ ಇದ್ದಲ್ಲಿ ಇದು ತುಂಬಾ ಸಹಕಾರಿ ಆಗುತ್ತದೆ. ಮತ್ತು ಹೆಚ್ಚುವರಿ ಶುಲ್ಕ ವಿಧಿಸಬಹುದು. ಸಿ.ಎಲ್-9ಗಳಲ್ಲಿ
ಮದ್ಯವನ್ನು ಪಾರ್ಸಲ್ ರೂಪದಲ್ಲಿ ಮಾರಾಟ ಮಾಡುವ ಕುರಿತು ಕಾನೂನು ತಿದ್ದುಪಡಿ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಬಳ್ಳಾರಿ ಮಧ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಸತೀಶ್ ಬಾಬು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಪಿ. ಗುರುನಾಥ, ಉಪಾಧ್ಯಕ್ಷರು ಕೆ.ಪಿ. ರಾಮಿರೆಡ್ಡಿ, ಕಾರ್ಯದರ್ಶಿ ಸಿ. ಹೆಚ್. ಬಸವಲಿಂಗಾರೆಡ್ಡಿ ಸಹ-ಕಾರ್ಯದಶಿ ಕೆ. ಸೂರ್ಯಕುಮಾರ ಶೆಟ್ಟಿ, ಪಿ. ಲಕ್ಷಾರೆಡ್ಡಿ, ಲಿಕ್ಕರ್ ವೇಣು, ಹಗರಿ ಶ್ರೀನಿವಾಸ್ಸೇರಿದಂತೆ ಇತರರಿದ್ದರು.