ಶಿವಮೊಗ್ಗ, ಫೆಬ್ರವರಿ 18: ಬ್ಯಾಗ್ನಲ್ಲಿದ್ದ ವಸ್ತು ಸ್ಫೋಟಗೊಂಡು ಹಲವರಿಗೆ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪಳದಲ್ಲಿ ನಡೆದಿದೆ. ಬೆಡ್ಶೀಟ್ ಮಾರಲು ಬಂದಿದ್ದ ಆಂಥೋಣಿ ಎಂಬಾತ ಸೇರಿದಂತೆ ಇತರೆ ಬೆಡ್ಶೀಟ್ ವ್ಯಾಪಾರಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಮೇಶ್ ಎಂಬಾತ ಆಂಥೋಣಿ ಬಳಿ ಬ್ಯಾಗ್ ಇಟ್ಟು ಹೋಗಿದ್ದ. ಈ ವೇಳೆ ಬ್ಯಾಗ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಬ್ಯಾಗ್ನಲ್ಲಿ ಹಂದಿ ಬೇಟೆಗೆಂದು ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಡ್ ಶೀಟ್ ಮಾರಾಟಕ್ಕೆ ಬಂದಿದ್ದ ಅಂಥೋನಿ ಬಳಿ ಪರಿಚಯಸ್ಥರು ಬ್ಯಾಗ್ ಇಟ್ಟು ಹೋಗಿದ್ದರು. ಇದೇ ಬ್ಯಾಗ್ ಆಕಸ್ಮಿಕವಾಗಿ ಸ್ಪೋಟಗೊಂಡಿದೆ. ಉಮೇಶ್ ಎನ್ನುವ ವ್ಯಕ್ತಿ ಬ್ಯಾಗ್ ಇಟ್ಟು ಹೋಗಿದ್ದು ಎನ್ನಲಾಗುತ್ತಿದ್ದು, ಆತನ ಬಗ್ಗೆ ಪೋಲಿಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೆಲ ಹೊತ್ತು ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹಂದಿ ಹೊಡೆಯಲು ತಂದಿರುವ ಸಿಡಿಮದ್ದು ಸ್ಪೋಟವಾಗಿದೆ: ಎಪ್ಫಿ ಮಿಥುನ್ ಕುಮಾರ್
ಶಿವಮೊಗ್ಗ ಎಪ್ಫಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದು, ಹಂದಿ ಹೊಡೆಯಲು ಬಳಕೆಗೆ ತಂದಿರುವ ಸಿಡಿಮದ್ದು ಬ್ಯಾಗ್ನಲ್ಲಿತ್ತು. ಅದೇ ಆಕಸ್ಮಿಕವಾಗಿ ಸ್ಪೋಟಗೊಂಡಿದೆ. ಘಟನೆಯಲ್ಲಿ ಓರ್ವ ಬೆಡ್ ಶೀಟ್ ವ್ಯಾಪಾರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಆಗಿದ್ಥಾನೆ. ಆತನಿಗೆ ಸಣ್ಣ ಪುಟ್ಟ ಗಾಯ ಆಗಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಉಮೇಶ್ ಎನ್ನುವ ವ್ಯಕ್ತಿ ವ್ಯಾಪಾರಿ ಬಳಿ ಬ್ಯಾಗ್ ಇಟ್ಟು ಹೋಗಿರುವ ಮಾಹಿತಿ ಲಭ್ಯವಾಗಿದೆ. ಘಟನೆ ಕುರಿತು ಸ್ಥಳೀಯ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.