ಬಳ್ಳಾರಿ : ಐಪಿಎಸ್ ಅಧಿಕಾರಿ ಚಂದ್ರಶೇಖರ್ ಎಂಬುವರು ಹಲವಾರು ಭೂಗಳ್ಳರು, ವ್ಯಾಪಾರಸ್ಥರು, ಉದ್ಯಮಿಗಳು, ಸಮಾಜಘಾತಕರು ಹಾಗೂ ಮಾಫಿಯಾ ದೊಂದಿಗೆ ಒಡನಾಟ ಬೆಳೆಸಿಕೊಂಡು ಅವರ ಜೊತೆ ಶಾಮೀಲಾಗಿ ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ತಪ್ಪನ್ನು ಮುಚ್ಚಿಟ್ಟುಕೊಂಡು ಜಾತ್ಯತೀತ ಜನತಾದಳದ ರಾಜ್ಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಎಚ್ .ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಚಂದ್ರಶೇಖರ್ ಅವರನ್ನು ಹುದ್ದೆಯಿಂದ ವಜಗೊಳಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಮೀನಳ್ಳಿ ತಾಯಣ್ಣ ಸರ್ಕಾರವನ್ನು ಆಗ್ರಪಡಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಸರಣಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸಿರುವ ಈ ಭ್ರಷ್ಟಅಧಿಕಾರಿ ಆಗಿರುತ್ತಾರೆ, ಇವರ ವಿರುದ್ಧ ಶ್ರೀಧರ್ ಎನ್ನುವರು ಈಗಾಗಲೇ ಗೃಹ ಇಲಾಖೆಯ ಪ್ರಧಾನ ಕಾಯ್ದರ್ಶಿಯವರಾದ ರಜನೀಶ್ ಗೋಯಲ್ ಅವರಿಗೆ ದೂರುನೀಡಿದ್ದು ಎಂ. ಚಂದ್ರಶೇಖರ್ ರವರ ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಪಾತ್ರವಹಿಸಿ ಇಲಾಖೆಯ ಘನತೆ ಮತ್ತು ಗಾಂಭೀರ್ಯತೆಯನ್ನು ಕಳೆದಿರುತ್ತಾರೆ. ಶಿಸ್ತು ಸಿಪಾಯಿಗಳಾದಂತಹ ಕರ್ನಾಟಕ ಪೊಲೀಸ್ಇ ಲಾಖೆಯಲ್ಲಿ ಅಶಿಸ್ತು ಬೆಳೆಯಲು ಮುಖ್ಯ, ಕಾರಣಕರ್ತರಾಗಿರುತ್ತಾರೆ.ಕೇಂದ್ರ ಸಚಿವರು ಹಾಗೂ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಕ್ರಮಕೈಗೊಳ್ಳಲು ಭಾರತೀಯ ಆಡಳಿತ ಸೇವಾ ನಿಯಮಗಳ ಪ್ರಕಾರ (All India Service Rules-1958)
ರಂತ ಕೇಡರ್ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿರುತ್ತದೆ. ಆದರೆ ಎಂ.ಚಂದ್ರಶೇಖರ್
ರವರು ಭಾರತೀಯ ಆಡಳಿತ ಸೇವಾ ನಿಯಮಗಳ ವಿರುದ್ಧವಾಗಿ ತನ್ನ ಕೈಕೆಳಗಿನ ಅಧಿಕಾರಿಗಳಿಗೆ
ಕೇಂದ್ರ ಸಚಿವರು ಮತ್ತು ಚುನಾಯಿತ ಜನಪ್ರತಿನಿಧಿಗಳಾದ ಹೆಚ್. ಡಿ. ಕುಮಾರಸ್ವಾಮಿಯವರ
ವಿರುದ್ಧ ಅವಾಚ್ಯ ಮತ್ತು ಅಸಭ್ಯ ಪದಗಳನ್ನು ಬಳಸಿ ಪತ್ರವನ್ನು ಕಳುಹಿಸಿರುವುದು ಮತ್ತು ಈ
ಪತ್ರವನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಭಾರತೀಯ
ಆಡಳಿತ ಸೇವಾ ನಿಯಮಗಳ ಪ್ರಕಾರ ದುರ್ನಡತೆಯಾಗಿರುತ್ತದೆ, ಹಾಗೂ ಕಾನೂನು ಬಾಹಿರವಾಗಿರುತ್ತದೆ ಎಂದು ಅಧಿಕಾರಿ ಚಂದ್ರಶೇಖರ್ ಮೇಲೆ ಕಿಡಿಕಾರಿದರು. ಈ ಅಧಿಕಾರಿಯ ವಿರುದ್ಧ ಎಂ. ಚಂದ್ರಶೇಖರ್ ಮತ್ತು ರಾಜ್ಯದ ಪೊಲೀಸ್ ಅಧಿಕಾರಿಗಳ ವಿರುದ್ಧದಾಖಲಾಗಿರುವ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಭ್ರಷ್ಟತೆಗೆ ಉತ್ತೇಜನ ನೀಡಿರುತ್ತದೆ. ಇವರ ವಿರುದ್ಧ ಸೂಕ್ತ ತನಿಖೆಯನ್ನು ಮಾಡಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಅವರನ್ನು ಒತ್ತಾಯಿಸಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಹಿನ್ನಲೆಯಲ್ಲಿ ಎಂ. ಚಂದ್ರಶೇಖರ್ ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾರತೀಯ ಪೊಲೀಸ್ ಸೇವೆಯಿಂದ ಅಮಾನತ್ತುಗೊಳಿಸಿ ಇವರ ವಿರುದ್ಧಉನ್ನತ ಮಟ್ಟದ ತನಿಖೆ ನಡೆಸಲು ಅಗತ್ಯವಿರುವ ದಾಖಲಾತಿಗಳೊಂದಿಗೆ ಭಾರತೀಯ ಪೊಲೀಸ್ ಸೇವೆಗಳ ವೃಂದದ ಪ್ರಾಧಿಕಾರವಾಗಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಕಳುಹಿಸಬೇಕೆಂದು ಈ ಸಂದರ್ಭದಲ್ಲಿ ಅಗ್ರಹ ಪಡಿಸಿದರು.
ಸಂದರ್ಭದಲ್ಲಿ ಜೆಡಿಎಸ್ ನಗರ ಅಧ್ಯಕ್ಷರಾದ ಹೊನ್ನೂರಪ್ಪ (ವಂಡ್ರಿ,) ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ ಕಿರಣ್ ಕುಮಾರ್ ಪಕ್ಷದ ಕಾರ್ಯಕರ್ತರಾದ ಬಸವ, ರಾಮು, ಅಶೋಕ ,ಮಹಿಳಾ ಅಧ್ಯಕ್ಷರಾದ ಜಮೀಲಾ, ಕಚೇರಿ ಕಾರ್ಯದರ್ಶಿ ಬದ್ರಿನಾಥ್, ರೇಷ್ಮಾ, ನಾಗವೇಣಿ, ಶಬನಾ, ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.