ಬಳ್ಳಾರಿ ಮಾ 02: ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಕೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕಾಸಿಯಾ ಇವರು ಸಂಯುಕ್ತ ಆಶ್ರಯದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಜಾಗೃತಿ ಸಭೆಯನ್ನು ಹೋಟೆಲ್ ರಾಯಲ್ ಪೋರ್ಟ್, ಸಭಾಂಗಣದಲ್ಲಿ ಕಾರ್ಯಕ್ರಮ ಶುಕ್ರವಾರ ನಡೆಯಿತು. ಜಿಲ್ಲಾ ಪಂಚಾಯತ್ ಬಳ್ಳಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶರಣಪ್ಪ ಸಂಕನೂರ್ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಕಾರ್ಯಗಾರ ಉದ್ದೇಶಿಸಿ ಮಾತನಾಡಿ ಸೂಕ್ಷ್ಮ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಎಂಎಸ್ಎಂಇ ವಲಯವು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿದೆ
ಸಣ್ಣ ಕೈಗಾರಿಕೆಗಳು ಬೆಳವಣೆಗೆಯಾದರೆ ದೊಡ್ಡ ಕೈಗಾರಿಕೆಗಳು ಬೆಳೆವಣೆಗೆ ಸಾದ್ಯ ಆದಕಾರಣ ಇಂತಹ ಕಾರ್ಯಗಾರಕ್ಕೆ ಭಾಗವಹಿಸಿದರೆ ಎಂಎಸ್ಎಂಇ ಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ. ಮಹಾರುದ್ರ ಗೌಡ ಹಿರಿಯ ಉಪಾಧ್ಯಕ್ಷರಾದ ಶ್ರೀ ಯಶವಂತರಾಜ್ ನಾಗಿರೆಡ್ಡಿ, ಗೌರವ ಕಾರ್ಯದರ್ಶಿಗಳಾದ ಶ್ರೀ ಕೆ ಸಿ ಸುರೇಶ್ ಬಾಬು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ ಮಹಾರುದ್ರಗೌಡ ಕಾರ್ಯಾಗಾರವನ್ನು ಉದ್ದೇಶಿ ಮಾತನಾಡುತ್ತಾ ಸಿಡ್ಬಿ, ಕಾಸಿಯಾ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಸಂಕಷ್ಟದಲ್ಲಿ ಇರುವ ಅನೇಕ ಕೈಗಾರಿಕೆಗಳ ಪಾಲಿಗೆ ಸಂಜೀವಿನಿ ಆಗಲಿದೆ. ಎಂದು ತಿಳಿಸಿದರು.
ನಂತರ ಹಿರಿಯ ಉಪಾಧ್ಯಕ್ಷರಾದ ಶ್ರೀ ಯಶವಂತರಾಜ್ ನಾಗಿರೆಡ್ಡಿ ಇವರು ಮಾತನಾಡುತ್ತಾ, ಸಂಕಷ್ಟದಲ್ಲಿರುವ ಬಂಡವಾಳ ಹೂಡಿಕೆದಾರರು ಸರ್ಕಾರದಿಂದ ಪಡೆಯಬಹುದಾದ ಆರ್ಥಿಕ ನೆರವು, ತೆರಿಗೆ ವಿನಾಯಿತಿ, ಪಡೆದ ಸಾಲಕ್ಕೆ ಸಬ್ಸಿಡಿ, ರಫ್ತು ಘಟಕಗಳು ಪಡೆಯಬಹುದಾದ ನಾನಾ ರೀತಿಯ ರಿಯಾಯಿತಿಗಳು ಮಾಹಿತಿ ಈ ಕಾರ್ಯಾಗಾರ ದಿಂದ ಆರ್ಥಿಕ ಸದೃಢತೆಗೆ ನೆರವಾಗಲಿದೆ ಎಂದು ತಿಳಿಸಿದರು.
ಶೀ ಬಿ.ಸೋಮಶೇಖರ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಬರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು
ಶ್ರೀ ಮನ್ಸೂರ್, ಉಪ ನಿರ್ದೇಶಕರು, ವಿಟಿಪಿಸಿ ಬೆಂಗಳೂರು, ಇವರು ಮಾತನಾಡುತ್ತಾ ಇ-ಕಾಮರ್ಸ್ ರಪ್ತು ಎಂಎಸ್ಎAಇ ಗಳಿಗೆ ರಪ್ತು ಹೇಗೆ ರಪ್ತು ಮಾಡುವುದು ಮತ್ತು ಇದರ ಅನುಕೂಲಗಳು ಅನಾನುಕಲಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಶಶಿಧರ್ ಶೆಟ್ಟಿ, ಅಧ್ಯಕ್ಷರು, ಕಾಸಿಯಾ, ಬೆಂಗಳೂರು, ಇವರು ಮಾತನಾಡುತ್ತಾ ಹಣಕಾಸಿನ ನೆರವು ಎಲ್ಲಾ ಸಣ್ಣ ಪ್ರಮಾಣದ ವ್ಯವಹಾರಗಳು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಕ್ರೆಡಿಟ್ ಆಗಿದೆ ಎಂದು ತಿಳಿಸಿದರು, ಹಾಗೂ ತಾವೆಲ್ಲ ಹೆಚ್ಚಿನ ಮಟ್ಟದಲ್ಲಿ ಈ ಕಾರ್ಯಗಾರಕ್ಕೆ ಭಾಗವಹಿಸಿದಕ್ಕೆ ಕಾರ್ಯಕ್ರಮ ಯಶ್ವಸಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಕಮಟಿಗಳ ಚೇರ್ಮನ್ಗಳು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ರೈಸ್ಮಿಲ್ ಅಸೋಸಿಯೇಷನ್, ಕಾಟನ್ ಅಸೋಸಿಯೇಷನ್, ಎಪಿಎಂಸಿ ವರ್ತಕರು, ಇಂಡಸ್ಟ್ರಿಯಲ್ ಅಸೋಸಿಯೇಷನ್, ಸ್ಪಾಂಜ್ ಐರನ್ ಅಸೋಸಿಯೇಷನ್, ಗಾರ್ಮೆಂಟ್ಸ್ ಅಸೋಸಿಯೇಷನ್, ಕೋಲ್ಡ್ ಸ್ಟೊರೇಜ್ ಅಸೋಸಿಯೇಷನ್ನ ಹಾಗೂ ಇತರೆ ಸಂಘ-ಸAಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು.