ಗ್ಯಾರೆಂಟಿ ಯೋಜನೆಗಳೆ ಕಾಂಗ್ರೆಸ್ಗೆ ದೊಡ್ಡ ಶಕ್ತಿ
ಬಳ್ಳಾರಿ,ಮಾ.೨೮: ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳ ಸಂಸತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ದೊಡ್ಡ ಶಕ್ತಿಯಾಗಲಿದೆಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ ಗ್ಯಾರೆಂಟಿ ಯೋಜನೆಗಳ ಸದುಪಯೋಗ ಹೆಚ್ಚಾಗಿ ಮಹಿಳೆಯರಿಗೆ ದೊರೆತಿದೆ. ಮಹಿಳಾ ಮತದಾರರಲ್ಲಿ ಈ ಯೋಜನೆಗಳು ಕಾಂಗ್ರೆಸ್ ಪರ ಒಲವು ಮೂಡಿಸಲು ನಮ್ಮ ರಾಜ್ಯದಲ್ಲಿ ಹೊಸ ಸಂಚಲನವೇ ಮಾಡಿದೆ ಎಂದರು.
ಗ್ಯಾರೆAಟಿ ಯೋಜನೆ ಕೆಲವರಿಗೆ ಕೆಲ ಕಾರಣದಿಂದ ಬರದಿರುವ ಸಮಸ್ಯೆಗಳನ್ನು ಬಗೆಹರಿಸಲಿದ್ದೇವೆ ಎಂದರು. ಬಿಜೆಪಿಯವರು ನಮ್ಮ ಗ್ಯಾರೆಂಟಿಗಳಿAದಲೇ ಪ್ರಭಾವಿತರಾಗಿ ಮೋದಿಯವರೇ ಗ್ಯಾರೆಂಟಿ ಎಂದು ಹೊರಟಿದ್ದಾರೆ.
ಮೋದಿ ಅವರ ಸುಳ್ಳು ಭರವಸೆಗಳನ್ನು ಜನರ ಮುಂದೆ ಇಡುತ್ತೇವೆ, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆಂಬ ವಿಶ್ವಾಸ ಇದೆ. ಧರ್ಮ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಬಿಜೆಪಿ ದೂರ ಆಗಬೇಕಿದೆಂದು ಜನ ಬಯಸಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದ ಪ್ರಕ್ರಿಯೆ ಆರಂಭಗೊAಡಿದೆ. ಡಿಕೆ. ಸುರೇಶ್ ಅವರು ನಾಮ ಪತ್ರ ಸಲ್ಲಿಸಿದ್ದಾರೆ ಅವರ ಗೆಲುವು ಖಚಿತ.
ಬಳ್ಳಾರಿ ಕ್ಷೇತ್ರಕ್ಕೆ ಅಭ್ಯರ್ಥಿಯ ಅಧಿಕೃತ ಘೋಷಣೆ ಬಾಕಿ ಇದೆ. ಈ ತುಕರಾಂ ಅವರೇ ಅಭ್ಯರ್ಥಿಯಾಗಲಿದ್ದಾರೆಂದರು.
ರಾಜ್ಯದ ೨೦ ಕ್ಷೇತ್ರದ ಗೆಲುವು ನಮ್ಮ ಗುರಿ. ಇದೆ ೨೮ ರಲ್ಲೂ ಗೆಲ್ಲುವ ಸ್ಥಿತಿ ಇದೆ. ಟಿಕೆಟ್ ನೀಡಿಕೆಯಲ್ಲಿ
ಯುವಕರು, ಮಹಿಳೆಯರಿಗೆ ಆದ್ಯತೆ ನೀಡಿದೆ. ರಾಜ್ಯದಲ್ಲಿನ ಈ ಚುನಾವಣಾ ಫಲಿತಾಂಶ ಇಡೀ ದೇಶವೇ ರಾಜ್ಯದ ಕಡೆ ನೋಡುವಂತಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯಾ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಜವಾಬ್ದಾರಿ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಈ ಮೊದಲು ಉಸ್ತುವಾರಿಯಾಗಿದ್ದ ಸಂತೋಷ್ ಲಾಡ್ ಅವರು ಸಹ ಗೆಲುವಿಗೆ ಸಾಮೂಹಿಕವಾಗಿ ಶ್ರಮಿಸಲಿದ್ದಾರೆ.
ಸಂಡೂರಿನಲ್ಲಿ ತಾವು ಸಭೆಯಲ್ಲಿ ಭಾಗವಹಿಸಿಲ್ಲ ಎಂಬುದಕ್ಕೆ ಬೇರೆ ಅರ್ಥ ಬೇಡ, ನನಗೆ ಪಾಲಿಕೆ ಮೇಯರ್ ಚುನಾವಣೆ ಸಂಬAಧÀ ಬಳ್ಳಾರಿಯಲ್ಲಿದ್ದೆ.
ಅಭ್ಯರ್ಥಿಯ ಅಧಿಕೃತ ಘೋಷಣೆ ನಂತರ ಅಭ್ಯರ್ಥಿ ಜೊತೆ ಪ್ರವಾಸ ಮಾಡಲಿದೆ ಎಂದರು.
ಸAಸತ್ ಚುನಾವಣೆ ಫಲಿತಾಂಶದ ನಂತರ ಸಿಎಂ ಬದಲಾವಣೆಯ ಚರ್ಚೆ ಆಗಿಲ್ಲ. ಇದೆಲ್ಲ ಊಹಾಪೋಹಾ ಸಹಜವಾಗಿ ಎಲ್ಲರಿಗೂ ಪಕ್ಷದ ಅಭ್ಯರ್ಥಿಗಳ ಗೆಲುವಿನ ಟಾಸ್ಕ್ ನೀಡಿದೆ ಆ ಪ್ರಯತ್ನ ಮಾಡುತ್ತೇವೆ ಎಂದರು.
ಮೇಯರ್ ಹುದ್ದೆಗೆ ಬೇಡಿಕೆ ಹೆಚ್ಚು:
ಮೀಸಲಾತಿ ಸಾಮಾನ್ಯ ಇದ್ದಾಗ ಆಕಾಂಕ್ಷಿಗಳು ಸಹಜವಾಗಿ ಹೆಚ್ಚು ಇರುತ್ತಾರೆ. ಯಾವುದೇ ಭಿನ್ನಾಭಿಪ್ರಾಯದಿಂದ ಪಾಲಿಕೆಯ ಮೇಯರ್ ಚುನಾವಣೆ ಮುಂದೂಡಿಲ್ಲ. ಎಂ.ಚುನಾವಣೆ ಹಿನ್ನಲೆಯಲ್ಲಿ ಅಧಿಕಾರಿಗಳು ಮುಂದೂಡಿದ್ದಾರೆ.
ಪಾಲಿಕೆಯಲ್ಲಿ ಎಂದೇ ಆಗಲಿ ಕಾಂಗ್ರೆಸ್ ಬಾವುಟ ಹಾರಲಿದೆ. ನಾನು, ರಾಜ್ಯ ಸಭಾ ಸದಸ್ಯರು, ನಗರ ಶಾಸಕರು ಸೇರಿಯೇ ತೀರ್ಮಾನ ತೆಗೆದುಕೊಳ್ಳಲಿದೆಂದರು.
ಗಾಲಿ ಮತ್ತೆ ಬಿಜೆಪಿ ಸೇರಬಾರದಿತ್ತು:
ಬಿಜೆಪಿಯನ್ನು ಮಕಾಡೆ ಮಲಗಿಸುತ್ತೇವೆ ಎಂದು ಹೊಸ ಪಕ್ಷ ಕಟ್ಟಿದ್ದ ಗಾಲಿ ಜನಾರ್ಧನರೆಡ್ಡಿ ಅವರು ಈಗ ಮತ್ತೆ ಬಿಜೆಪಿ ಸೇರಿ ತಪ್ಪು ಮಾಡಿದ್ದಾರೆ. ಗಂಗಾವತಿಯಲ್ಲಿ ಜಾತ್ಯತೀತೆಯಿಂದ ಮತ ಪಡೆದಿದ್ದರು. ಈಗ ಕ್ಷೇತ್ರದ ಮತದಾರರಿಗೆ ಏನು ಹೇಳುತ್ತಾರೆ.
ಪಕ್ಷ ಸೇರುವ ಮುನ್ನ ಶ್ರೀರಾಮುಲು ಸೋಲುತ್ತಾರೆಂದಿದ್ದರು. ಅಂತಹವರಿAದ ನಮ್ಮ ಅಭ್ಯರ್ಥಿ ಗೆಲುವಿಗೆ ಆತಂಕ, ಭಯ ಇಲ್ಲ, ಕೇಸುಗಳಿಂದ ಭಯ ಬಿದ್ದು ಬಿಜೆಪಿ ಸೇರಿರಬಹುದು. ಎಲ್ಲೇ ಇರಲಿ ಅವರಿಗೆ ಒಳ್ಳೆದಾಗಲಿ. ಬಿಜೆಪಿ ಪಕ್ಷಕ್ಕೆ ಅಂತಹ ನೂರು ಜನ ಬಂದರೂ ನಮ್ಮ ಶಕ್ತಿ ಕುಂದಲ್ಲ ಎಂದು ಹೇಳಿದರು.