ಸುವರ್ಣವಾಹಿನಿ ಸುದ್ದಿ
ಮಂಗಳೂರು,ಜ,೧೩: ಶನಿವಾರ ಮಂಗಳೂರು ನಗರದ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ಮಾಸ್ಟರ್ಸ್ ಆಥ್ಲೆಟಿಕ್ ಅಸೋಶೇಷನ್ ವತಿಯಿಂದ ಆಯೋಜಿಸಿದ್ದ ೪೨ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ನಾಗೇಂದ್ರರವರು ನೇರವೇರಿಸಿದರು.
ಈ ವೇಳೆ ಮಾತನಾಡಿದ ಅವರು ತುಳುನಾಡು ಮಂಗಳೂರುನಲ್ಲಿ ಕ್ರೀಡಾ ಸಾಧಕರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಬಹಳಷ್ಟು ಸಾಧನೆ ಮಾಡಿದ ಸಾಧಕರು ಇದ್ದಾರೆ. ನಮ್ಮ ಉತ್ತರ ಕರ್ನಾಟಕಕ್ಕಿಂತಲೂ ಮಂಗಳೂರು ಭಾಗದ ಜನರು ಬಹಳ ಬುದ್ಧಿವಂತರು ಇರುವ ಕಾರಣ ಮಂಗಳೂರು ಜಿಲ್ಲೆಯನ್ನು ಬುದ್ದಿವಂತರ ನಾಡು ಬಹಳ ಅನ್ನುತ್ತಾರೆ ನಾನು ಯುವ ಕ್ರೀಡಾಪಟುಗಳನ್ನು ನೋಡಿದ್ದೇ ಆದರೆ ಇಂದು ವಿಶೇಷವಾಗಿ ೩೦ ರಿಂದ ೯೦ ವರ್ಷದವರೆಗಿನ ಕ್ರೀಡಾ ಸಾಧಕರನ್ನು ನೋಡಿ ಬಹಳ ಸಂತೋಷ ತಂದಿದೆ ಎಂದು ಸಚಿವ ಬಿ. ನಾಗೇಂದ್ರರವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ೨ ದಿನಗಳ ಕಾಲ ರಾಜ್ಯದ ೩೧ ಜಿಲ್ಲೆಗಳಿಂದ ಸಾವಿರಾರು ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಆಗಮಿಸಿರುವ ಈ ಕ್ರೀಡಾಕೂಟದಲ್ಲಿ ೩೦ ರಿಂದ ೯೦ ವರ್ಷದವರೆಗಿನ ಮಹಿಳಾ ಮತ್ತು ಪುರುಷ ಅಥ್ಲೆಟ್ಗಳು ಪಾಲ್ಗೊಂಡಿದ್ದರು.
ಮೊದಲ ದಿನದ ಕ್ರೀಡಾಕೂಟ: ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ೫೦೦೦ ಮೀಟರ್ ವಾಕ್, ಮಹಿಳೆಯರ ೩೦೦೦ ಮೀಟರ್ ವಾಕ್, ಟ್ರಿಪಲ್ ಜಂಪ್, ಹೈ ಜಂಪ್, ೧೫೦೦ ಮೀಟರ್ ಓಟ, ಡಿಸ್ಯಸ್ ಎಸೆತ, ೧೦೦ ಮೀಟರ್, ಓಟ, ಜಾವೆಲಿನ್ ಎಸೆತ, ೨೦೦ ಮೀಟರ್ ಓಟ, ೫೦೦೦ ಮೀಟರ್ ಪುರುಷರ ಓಟ ಹಾಗೂ ಮಹಿಳೆಯರಿಗೆ ೩೦೦೦ ಮೀಟರ್ ಓಟದ ಕ್ರೀಡಾಕೂಟ ಎರ್ಪಡಿಸಲಾಗಿತ್ತು
೨ನೇ ದಿನದ ಕ್ರೀಡಾಕೂಟ: ಮಹಿಳೆಯರ ಮತ್ತು ಪುರುಷರ ಓಟ, ಹ್ಯಾಮರ್ ಎಸೆತ, ಲಾಂಗ್ ಜಂಪ್, ೮೦೦ ಮೀಟರ್ ಓಟ, ಶಾಟ್ ಪುಟ್, ಹೈ ಜಂಪ್, ೪೦೦ ಮೀಟರ್ ಓಟ, ೧೦೦ ಮೀಟರ್ ಮತ್ತು ೮೦ ಮೀಟರ್ ಹರ್ಡಲ್ಸ್ ರಿಲೇ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಮ್ಮ ರಾಜ್ಯದ ಕ್ರೀಡೆಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯಲು ಉತ್ತಮ ತರಬೇತಿದಾದರನ್ನು ಮತ್ತು ತರಬೇತಿಗೆ ಬೇಕಾಗುವ ಧನಸಹಾಯ ಕೂಡ ಕ್ರೀಡಾಪಟುಗಳಿಗೆ ನೀಡುತ್ತಾ ಬರುತ್ತಿದೆ. ಒಲಂಪಿಕ್ ಮತ್ತು ಪ್ಯಾರಾ ಒಲಂಪಿಕ್ ಕ್ರೀಡೆಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಾದಲ್ಲಿ ಈ ಹಿಂದೆ ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗ ಪಡೆಯಲು ೨% ಮೀಸಲಾತಿ ಕಲ್ಪಿಸಲಾಗಿತ್ತು, ಆದರೆ ನಮ್ಮ ರಾಜ್ಯದ ನುಡಿದಂತೆ ನಡೆದ ಮುಖ್ಯಮಂತ್ರಿಗಳು ಇಡೀ ದೇಶಕ್ಕೆ ಮಾದರಿ ರಾಜಕಾರಣಿ ಸಿದ್ದರಾಮಯ್ಯ ಹಾಗೂ ನಾವು ಕ್ರೀಡಾಪಟುಗಳ ಬಗ್ಗೆ ವಿಶೇಷ ಕಾಳಜಿ ಎಲ್ಲಾ ಇಲಾಖೆಗಳಲ್ಲಿ ೨% ಮೀಸಲಾತಿ ನೀಡಿ ಅವರ ಜೀವನೋಪಾಯಕ್ಕಾಗಿ ಉದ್ಯೋಗ ಪಡೆಯಲು ಸಹಕಾರ ನೀಡಿದೆ ಈಗಾಗಲೇ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಇರುವ ಸ್ಥಳೀಯ ಕ್ರೀಡೆಗಳನ್ನು ಗೌರವಿಸಿ ಒಂದು ಜಿಲ್ಲೆ – ಒಂದು ಕ್ರೀಡೆ ಎನ್ನುವ ಘೋಷ ವಾಕ್ಯದಲ್ಲಿ ಸ್ಥಳೀಯ ಕ್ರೀಡೆಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯಲು ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಉತ್ತಮ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಸಚಿವ ನಾಗೇಂದ್ರ ತಿಳಿಸಿದರು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ಇಂದು ಮಂಗಳೂರು ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಒಟ್ಟು ಮೂರು ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಂಗಳೂರು ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಅನುದಾನದ ವಿವರಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಜಿಲ್ಲಾ ಪಂಚಾಯತ್ ಸಿಇಓ ಡಾ. ಆನಂದ್.ಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಶಶಿಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಕಲ್ಲೇಶ್,ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರರಾದ ಜೆ. ಜೆ. ಪದ್ಮನಾಭ, ಪ್ರಧಾನ ವ್ಯವಸ್ಥಾಪಕರಾದ ರಾಜಶೇಖರ್.ಎ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.