ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಜ,೧೦: ಮಹಾನಗರ ಪಾಲಿಕೆಯ ಎರಡನೇ ಮೇಯರ್ ಆಗಿ ೩೧ನೇ ವಾರ್ಡ್ ಕಾಂಗ್ರೆಸ್ನ ಬಿ.ಶ್ವೇತಾ ಸೊಮು ಅವರು ಆಯ್ಕೆಯಾದರು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ೨೯ ಮತಗಳಿಂದ ಬಿ.ಶ್ವೇತಾಸೋಮು ಅವರು ಆಯ್ಕೆಯಾದರು.
ಕಾಂಗ್ರೆಸ್ನಿAದ ಬಿ. ಶ್ವೇತಾ ಸೋಮು, ಕುಬೇರ ಹಾಗೂ ಪಕ್ಷೇತರ ಅಭ್ಯರ್ಥಿ ಮಿಂಚು ಶ್ರೀನಿವಾಸ್ ಅವರು ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಕಾಂಗ್ರೆಸ್ನ ಕುಬೇರ, ಕಾಂಗ್ರೆಸ್ ಸದಸ್ಯತ್ವ ಪಡೆದ ಪಕ್ಷೇತರ ಸದಸ್ಯ ಮಿಂಚು ಶ್ರೀನಿವಾಸ್ ಇಬ್ಬರು ನಾಮಪತ್ರವನ್ನು ಹಿಂಪಡೆದರು. ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ಗುಡಿಗಂಟೆ ಹನುಮಂತ ಚುನಾವಣಾ ಕಣದಲ್ಲಿ ಇದ್ದಿದ್ದರಿಂದ ಚುನಾವಣೆ ಅನಿವಾರ್ಯವಾಯಿತು.
ಕಾಂಗ್ರೆಸ್ನ ಬಿ. ಶ್ವೇತಾ ಸೋಮು ಅವರು ೨೯ ಮತಗಳನ್ನು ಪಡೆದು, ಆಯ್ಕೆಯಾದರು. ಬಿಜೆಪಿಯ ಹನುಮಂತ ಅವರು, ೧೨ಮತಗಳನ್ನು ಪಡೆದು ಪರಾಭವಗೊಂಡರು.
ಬಾಕ್ಸ್
ಎಂದಿನAತೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಚುನಾವಣೆಗೆ ಚುನಾವಣಾಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಅಪರಾಹ್ನ ೧೨ ಗಂಟೆಯೊಳಗೆ ಮೇಯರ್ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ಬಿ.ಶ್ವೇತಾ ಅವರ ಹೆಸರನ್ನು ಅಂತಿಮಗೊಳಿಸಿದರು. ಮೇಯರ್ ಗಾದಿಗೆ ವಿ.ಶ್ರೀನಿವಾಸ್ ಮಿಂಚು ಅವರ ಹೆಸರು ಮೊದಲಿನಿಂದಲೂ ಕೇಳಿ ಬಂದಿತ್ತು. ಆಗ ಎಂ.ರಾಜೇಶ್ವರಿ ಸುಬ್ಬಾರಾಯುಡು ಅಂತಿಮವಾಗಿ ಆಯ್ಕೆಯಾಗಿ ಚುನಾವಣೆ ಆದ ಮೊದಲ ಮೇಯರ್ ಆದರು. ಬಳಿಕ ಮತ್ತೆ ವಿ.ಶ್ರೀನಿವಾಸ್ ಮಿಂಚು ಅವರ ಹೆಸರು ಕೇಳಿ ಬಂದಿತ್ತು. ಆಗ ಸೂರಿ ಮತ್ತಿತರರ ಚಿತಾವಣೆಯಿಂದಾಗಿ ಶ್ರೀನಿವಾಸ್ ಮಿಂಚು ಕೈ ತಪ್ಪಿ, ಡಿ.ತ್ರಿವೇಣಿ ಮೇಯರ್ ಆದರು. ಈ ಬಾರಿ ವಿ.ಶ್ರೀನಿವಾಸ್ ಮಿಂಚು ಅಥವಾ ಕುಬೇರ್ ಇವರು ಮೇಯರ್ ಆಗುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಶ್ರೀನಿವಾಸ್ ಮಿಂಚು ಕಾಂಗ್ರೆಸ್ ಹಿರಿಯ ಧುರೀಣ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಶಿಷ್ಯರಾದರೆ, ಕುಬೇರ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ರವರ ಬಂಟರಾಗಿದ್ದರು. ಡಾ.ಸೈಯದ್ ನಾಸಿರ್ ಹುಸೇನ್, ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿ ಅವರಿಗೆ ಪರಮಾಪ್ತರಾದ್ದರಿಂದ ಕುಬೇರ ಅವರಿಗೆ ಮೇಯರ್ ಪಟ್ಟ ಸಿಗುತ್ತೆ ಎಂದೇ ಭಾವಿಸಲಾಗಿತ್ತು. ಇದಕ್ಕಾಗಿ ಸಾಕಷ್ಟು ಬಾರಿ ಹಗ್ಗ ಜಗ್ಗಾಟ ನಡೆದು ಹೋಗಿತ್ತು. ರೇಡಿಯೋ ಪಾರ್ಕ್ ಸೋಮು ನಾಗೇಂದ್ರ ಅವರ ಬಂಟರಾಗಿದ್ದುದರಿAದ ಅಂತಿಮವಾಗಿ ನಾಗೇಂದ್ರ ಅವರು ಪಟ್ಟು ಹಿಡಿದು ತಮ್ಮ ಬೆಂಬಲಿಗನ ಪತ್ನಿ ಬಿ.ಶ್ವೇತಾ ಅವರಿಗೆ ಮೇಯರ್ ಸ್ಥಾನ ಕೊಡಿಸುವಲ್ಲಿಯಶಸ್ವಿಯಾಗಿದ್ದಾರೆ………
ಅಧಿಕೃತ ಘೋಷಣೆಯಾಗುತ್ತಿದ್ದಂತೆಯೇ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್, ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಆರ್.ವಿ. ವೆಂಕಟೇಶ ಸೇರಿದಂತೆ ಇತರರು ಉಸ್ಥಿತರಿದ್ದರು.
ಬಾಕ್ಸ್
ಬಳ್ಳಾರಿ ಮಹಾನಗರ ಪಾಲಿಕೆಯ ೨೨ನೇ ಅವಧಿಯ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಮಹಾನಗರ ಪಾಲಿಕೆ ಸುತ್ತ ಮುತ್ತ ೫೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದರು. ಚುನಾವಣೆಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಚುನಾವಣೆ ನಡೆಸಲು ಸಿಆರ್ಪಿ ಸಿ ಕಾಯ್ದೆ ೧೯೭೩ ಕಲಂ ೧೪೪ ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶ ಹೊರಡಿಸಿದ್ದರಿಂದ ಇಂಕ್ (ಮಸಿ), ನೀರು, ಬೆಂಕಿ ಪೊಟ್ಟಣ, ಲೈಟರ್ ಮತ್ತು ಇತರ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದು. ಶಸ್ತç, ಬಡಿಗೆ, ಬರ್ಚಿ, ಗದೆ, ಬಂದೂಕು, ಚಾಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತು ತೆಗೆದುಕೊಂಡು ಹೋಗುವುದು ನಿಷೇಧಿಸಲಾಗಿತ್ತು. ಯಾವುದೇ ದಾಹಕ (ನಾಶಕಾರಿ) ಇಲ್ಲವೆ ಸ್ಫೋಟಕ ವಸ್ತು ಒಯುವುದು, ಪಟಾಕಿ/ಸಿಡಿಮದ್ದು ಸಿಡಿಸುವುದು. ಕಲ್ಲು ಎಸೆಯುವ ವಸ್ತು ಅಥವಾ ಅಂತಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಶಸ್ತçಗಳು ಅಥವಾ ಸಾಧನಗಳು ಇವುಗಳನ್ನು ತೆಗೆದುಕೊಂಡು ತಿರುಗಾಡುವುದು. ಕಾರು/ಮೋಟರ್ ಬೈಕ್ ಮತ್ತು ಇತರೆ ವಾಹನಗಳಲ್ಲಿ ರ್ಯಾಲಿಯನ್ನು ಆಯೋಜಿಸುವುದು ಸಹ ನಿಷೇಧಿಸಲಾಗಿತ್ತು. ವಿಜಯೋತ್ಸವಗಳನ್ನು ಆಚರಿಸುವುದು ಹಾಗೂ ಭೋಜನಕೂಟಗಳನ್ನು ಏರ್ಪಡಿಸುವುದು. ೫ ಕ್ಕಿಂತ ಹೆಚ್ಚು ಜನರು ಗುಂಪು ಕೂಡಿ ತಿರುಗಾಡುವುದು (ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಮಹಾನಗರಪಾಲಿಕೆ ಸದಸ್ಯರು ಹೊರತು ಪಡಿಸಿ). ಅದೇರೀತಿಯಾಗಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಕುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿಯ ಪ್ರದರ್ಶನವನ್ನು ಹಾಗೂ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಯಾವುದೇ ವಸ್ತು ಅಥವಾ ಪದಾರ್ಥದ ತಯಾರಿ ಪ್ರದರ್ಶನ ಅಥವಾ ಪ್ರಸಾರ ಮಾಡುವುದು ನಿಷೇಧಿಸಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದರಿಂದ ಚುನಾವಣೆ ಶಾಂತಿಯುತವಾಗಿ ನಡೆಯಿತು.