ಬಳ್ಳಾರಿ, ಜೂ.01: ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾರದ ವಿಷಯದಲ್ಲಿ ಬಿ.ಜೆ.ಪಿ ಪಕ್ಷದ ಮುಖಂಡರು ಸಚಿವ ಬಿ ನಾಗೇಂದ್ರರವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ತೇಜೋವಧೆ ಮಾಡುತ್ತಿದೆ. ಇದು ಆ ಹಿರಿಯ ನಾಯಕರಿಗೆ ಶೋಭೆ ತರುವಂತದ್ದಲ್ಲ ಎಂದು ತಾಲೂಕಿನ ಬೆಣಕಲ್ಲು ಗ್ರಾಮದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಜಲಾಲ್ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು. ನಿಗಮದ ನೌಕರ ಮೃತ ಚಂದ್ರಶೇಖರ್ ಅವರ ಧರ್ಮ ಪತ್ನಿಯವರಿಗೆ ಸಾಂತ್ವನ ಹೇಳಲು ಶಿವಮೊಗ್ಗದ ಅವರ ನಿವಾಸಕ್ಕೆ ತೆರಳಿದ ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಯೇಂದ್ರ ಅವರು. ಅನುಕಂಪ ತೋರಿಸುವ ನೆಪದಲ್ಲಿ ಮಾತನಾಡಿಸಿ. ಪದೇ ಪದೇ ನಿಮ್ಮ ಪತಿಯ ಸಾವಿಗೆ ಯಾರಾದರೂ ಸಚಿವರು ಕಾರಣರೇ ಎಂದು ಕೇಳುತ್ತಾರೆ. ಆದರೆ ಚಂದ್ರಶೇಖರ್ ಅವರ ಪತ್ನಿ ಯಾರೂ ಇಲ್ಲ. ಅಧಿಕಾರಿಗಳೇ ಕಾರಣ ಅದಷ್ಟೆ ನನಗೆ ತಿಳಿದಿದೆ ಎಂದು ಹೇಳಿದರೂ, ವಿನಾಕಾರಣ ಸಚಿವ ನಾಗೇಂದ್ರ ಅವರ ಹೆಸರು ಹೇಳಿಸಲು ಪ್ರಯತ್ನ ಪಡುತ್ತಾರೆ. ಇದು ಕೇವಲ ಸಚಿವ ನಾಗೇಂದ್ರರವರನ್ನೇ ಗುರಿಯಾಗಿಸಿಕೊಂಡಂತೆ ಮೇಲ್ನೋಟಕ್ಕೆ ಕಾಣುತ್ತದೆ.
ಅಸಲಿಗೆ ಸಚಿವ ನಾಗೇಂದ್ರ ಅವರು ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ಹಲವಾರು ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಅವರು ಇಂದಿಗೂ ಯಾವ ಸರ್ಕಾರಿ ಅಧಿಕಾರಿಯನ್ನು ಮಾತಿಗೆ ಸಹ ಗದರಿದ್ದಿಲ್ಲ. ಆದರೆ ಚಂದ್ರಶೇಖರ್ರವರಿಗೆ ಒತ್ತಡ ಹಾಕಿದ್ದರೂ ಎನ್ನುವುದರಲ್ಲಿ ಅರ್ಥವಿಲ್ಲ. ಇಂತಹ ನಾಯಕನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಾಜೀನಾಮೆ ಕೇಳಿರುವುದು ನಾಚಿಕೆಗೇಡಿನ ಸಂಗತಿಯಾಗಿದೆಂದು ಲೇವಡಿ ಮಾಡಿದ್ದಾರೆ