ಪಿಯು ದ್ವಿತೀಯ ವರ್ಷದಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಮೋಷನ್ ಕಾಲೇಜು ವಿದ್ಯಾರ್ಥಿಗಳು
ಬಳ್ಳಾರಿ,ಏ.10 : ನಗರದಲ್ಲಿ ನೂತನವಾಗಿ ಆರಂಭಗೊಂಡ “ಮೋಷನ್ ” ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ತೇರ್ಗಡೆಯಾಗಿದ್ದಾರೆ ಎಂದು ಮೋಷನ್ ಲರ್ನಿಂಗ್ ಸೆಂಟರ್ ಛೇರ್ಮನ್ ಇ.ಜಯಚಂದ್ರರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023-24ನೇ ಶೈಕ್ಷಣಿಕ ವರ್ಷಕ್ಕೆ ಕಾಲೇಜಿನಲ್ಲಿ ಒಟ್ಟು 24 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಉಳಿದ 16 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಲ್ಲಿ ಅಂಜು 600 ಅಂಕಗಳಿಗೆ 573 ಅಂಕ ಪಡೆದು ಕಾಲೇಜಿಗೆ ಟಾಪರ್ ಆಗಿ ನಿಂತರೆ, ಬಿ.ಸುಶ್ಮಿತಾ 570, ಯು.ಎಂ. ಮೋಹನ್ ಕುಮಾರ್ 553, ಬಿ.ಕಲಾಮಲಾನಾಥ್ 573, ಬಿ.ಸ್ನೇಹರೆಡ್ಡಿ 531, ನಯನಾ ಕುಮಾರ್ ಎಚ್.ಎಂ.528, ಮೊಹಮ್ಮದ್ ಆದಿಲ್ 527, ಜಿ.ಭಾನು ತೇಜ 510 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪ್ರೋತ್ಸಾಹಿಸಿದ ವಿದ್ಯಾರ್ಥಿಗಳ ಪೋಷಕರನ್ನು ಅಭಿನಂದಿಸುವುದಾಗಿ ಕಾಲೇಜಿನ ಚೇರಮನ್ ಜಯಚಂದ್ರರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.