ಭೋಪಾಲ್,ಜ,೨೩: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಮೀಬಿಯಾದ ಚೀತಾ ‘ಜ್ವಾಲಾ’ ಮೂರು ಮರಿಗಳಿಗೆ ಜನ್ಮ ನೀಡಿದೆ. ಇತ್ತೀಚೆಗಷ್ಟೇ ಮತ್ತೊಂದು ಚೀತಾ ಆಶಾ ಕೂಡ ಮರಿಗಳಿಗೆ ಜನ್ಮ ನೀಡಿತ್ತು, ಇದಾದ ಕೆಲವೇ ದಿನಗಳ ಇದು ಸಂಭವಿಸಿದೆ. ೧೯೫೨ ರಲ್ಲಿ ಭಾರತದಲ್ಲಿ ಚೀತಾಗಳ ಸಂಖ್ಯೆ ಶೂನ್ಯ ಎಂದು ಘೋಷಿಸಲಾಯಿತು. ೨೦೨೨ ರಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಅವುಗಳನ್ನು ಮತ್ತೆ ಪರಿಚಯಿಸಲಾಯಿತು.
ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪರಿಸರ ಸಚಿವ ಭೂಪೇಂದ್ರ ಯಾದವ್ ವನ್ಯಜೀವಿ ಪ್ರೇಮಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಾಜೆಕ್ಟ್ ಚೀತಾ ಎಂಬ ಯೋಜನೆಯಡಿಯಲ್ಲಿ ೨೦೨೨ರಲ್ಲಿ ನಮೀಬಿಯಾದಿಂದ ಎಂಟು ಚೀತಾಗಳನ್ನು ತರಲಾಗಿತ್ತು, ಬಳಿಕ ದಕ್ಷಿಣ ಆಫ್ರಿಕಾದಿಂದ ೧೨ ಚೀತಾಗಳನ್ನು ಕರೆತರಲಾಗಿತ್ತು. ಫೆಬ್ರವರಿ ೨೦೨೩ರಲ್ಲಿ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಇವುಗಳನ್ನು ಕಳುಹಿಸಲಾಯಿತು.
ಕಳೆದ ವಾರವಷ್ಟೇ ನಮೀಬಿಯಾದಿಂದ ಸ್ಥಳಾಂತರಗೊAಡಿದ್ದ ಚೀತಾವೊಂದು ಉದ್ಯಾನದಲ್ಲಿ ಸಾವನ್ನಪ್ಪಿತ್ತು, ೨೦೨೩ರ ಮಾರ್ಚ್ನಿಂದ ಇಲ್ಲಿಯವರೆಗೆ ಏಳು ಚೀತಾಗಳು ಹಾಗೂ ಮೂರು ಮರಿಗಳು ಸಾವನ್ನಪ್ಪಿವೆ. ಈ ಕುರಿತು ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಹಾಗೆಯೇ ಚೀತಾಗಳ ಸಾವಿನ ಹಿಂದಿರುವ ಕಾರಣಗಳು ಹಾಗೂ ತಡೆಗಟ್ಟಲು ತೆಗೆದುಕೊಂಡ ಪರಿಹಾರ ಕ್ರಮಗಳನ್ನು ವಿವರಿಸುವ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಕೇಳಿದೆ.
ಕುನೋದಲ್ಲಿ ಕೊನೆಯ ಮತ್ತು ಒಂಬತ್ತನೇ ಚೀತಾದ ಸಾವು ಕಳೆದ ವರ್ಷ ಆಗಸ್ಟ್ ೨ ರಂದು ವರದಿಯಾಗಿದೆ. ಕಳೆದ ಎರಡು ಸಾವುಗಳಿಗೆ ಮಳೆಗಾಲದಲ್ಲಿ ಕೀಟಗಳಿಂದ ಉಂಟಾದ ಸೋಂಕುಗಳು ಕಾರಣ ಎಂದು ಸರ್ಕಾರ ಸಂಸತ್ತಿನಲ್ಲಿ ಉಲ್ಲೇಖಿಸಿತ್ತು.
೧೯೫೨ ರಲ್ಲಿ ಭಾರತದಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಯಿತು. ೨೦೨೨ ರಲ್ಲಿ ಮತ್ತೆ ೨೦ ಚಿರತೆಗಳನ್ನು ವಿದೇಶದಿಂದ ಕುನೋ ಪಾರ್ಕ್ಗೆ ತರಲಾಯಿತು. ಚೀತಾಗಳನ್ನು ನಮೀಬಿಯಾ (೨೦೨೨) ಮತ್ತು ದಕ್ಷಿಣ ಆಫ್ರಿಕಾ (೨೦೨೩)ದಿಂದ ಎರಡು ಬ್ಯಾಚ್ಗಳಲ್ಲಿ ತರಲಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್ ೧೭ ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತಂದ ಚೀತಾಗಳ ಗುಂಪನ್ನು ಕುನೊದಲ್ಲಿನ ಆವರಣಕ್ಕೆ ಬಿಡುಗಡೆ ಮಾಡಿದಾಗ ಈ ಉಪಕ್ರಮವು ಪ್ರಾರಂಭವಾಯಿತು. ಅಂದಿನಿದ ಉದ್ಯಾನದಲ್ಲಿ ನಾಲ್ಕು ಮರಿಗಳು ಜನಿಸಿದವು, ಆದರೆ ಅವುಗಳಲ್ಲಿ ಮೂರು ಮತ್ತು ಇತರ ಆರು ಚೀತಾ ಐದು ತಿಂಗಳಲ್ಲಿ ಸಾವಿಗೀಡಾಗಿದೆ.