ಬಳ್ಳಾರಿ, ಸೆ.06: ಮುಂದಿನ ಹಲವು ಅವಧಿಗಳಿಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಶಾಸಕರಾಗಿ ಆಯ್ಕೆಯಾಗಲಿ ಎಂದು ಬಳ್ಳಾರಿ ನಗರದ ಮುಸ್ಲಿಂ ಸಮಾಜದ ಧಾರ್ಮಿಕ ಮುಖಂಡ, ಖಾಜಿ ಗುಲಾಂ ಮೊಹಮ್ಮದ್ ಸಿದ್ದಿಕಿ ಅವರು ಹಾರೈಸಿದರು.
ಶುಕ್ರವಾರ ಮಧ್ಯಾಹ್ನ ನಗರದ ಕೊಲಮಿ ಚೌಕಿನ ಖಾಜಿಯವರ ನಿವಾಸದಲ್ಲಿ ಈದ್ ಮಿಲಾದುನ್ನಬಿ ನಿಮಿತ್ಯ ಏರ್ಪಡಿಸಿದ್ದ ಫಾತೆಹಾ ನಂತರ ಮಾತನಾಡಿದರು.
ಈದ್ ಮಿಲಾದುನ್ನಬಿ ನಿಮಿತ್ಯ ಏರ್ಪಡಿಸಿದ್ದ ಫಾತೆಹಾ ಕಾರ್ಯಕ್ರಮದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಭಾಗಿಯಾಗಿ, ಆಶೀರ್ವಾದ ಪಡೆದರು. ಈ ಸಂದರ್ಭ ಖಾಜಿಯವರನ್ನೊಳಗೊಂಡು ನಗರದ ಮುಸ್ಲಿಂ ಸಮುದಾಯದ ಮುಖಂಡರು ಶಾಸಕ ನಾರಾ ಭರತ್ ರೆಡ್ಡಿಯವರನ್ನು ಸನ್ಮಾನಿಸಿದರು.
ಫಾತೆಹಾ ನಂತರ ದುವಾ ವೇಳೆ ಜಾಗತಿಕ ಶಾಂತಿಗಾಗಿ, ದೇಶದ ಸೌಹಾರ್ದತೆಗಾಗಿ ಪ್ರಾರ್ಥಿಸಲಾಯಿತು. ಬಳ್ಳಾರಿ ಜಿಲ್ಲೆ, ನಗರದ ಜನರ ಆರೋಗ್ಯ, ಆಯಸ್ಸು ಹಾಗೂ ಸಂಪತ್ತು ವೃದ್ಧಿಸಲಿ, ನೆಮ್ಮದಿ ನೆಲೆಸಲಿ, ಸರ್ವ ಜನಾಂಗದವರ ಅಭಿವೃದ್ಧಿಯಾಗಲಿ ಎಂದು ಖಾಜಿಯವರು ದುವಾ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಸೇನ್ ಪೀರಾ, ಭಂಭಂ ದಾದಾ, ಕಣೇಕಲ್ ಮೆಹಬೂಬಸಾಬ, ಟ್ರಂಕ್ ನೂರ್, ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಸೈಫುಲ್ಲಾ, ಮೆಹತಾಬ್, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾದರ್, ರಸೂಲ್, ಜಾಕಿರ್ ಮೊದಲಾದವರು ಹಾಜರಿದ್ದರು.
ಮೆರವಣಿಗೆ-ಮಸೀದಿ-ದರ್ಗಾಗಳಿಗೆ ಭೇಟಿ: ಶಾಸಕ ನಾರಾ ಭರತ್ ರೆಡ್ಡಿಯವರು ಖಾಜಿಯವರ ನಿವಾಸದಲ್ಲಿ ನಡೆದ ಫಾತೆಹಾ ಕಾರ್ಯಕ್ರಮದ ನಂತರ ವಿವಿಧ ಮಸೀದಿ ದರ್ಗಾಗಗಳ ವತಿಯಿಂದ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಭಾಗಿಯಾಗಿ ದೊಡ್ಡ ಮಾರುಕಟ್ಟೆಯಿಂದ ಜಾಮಿಯಾ ಮಸೀದಿವರೆಗೆ ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ಮುಸ್ಲಿಂ ಸಮುದಾಯದ ಜನರಿಗೆ ಶುಭಾಶಯ ಕೋರಿದರು.
ತದನಂತರ ಶಾಸಕ ನಾರಾ ಭರತ್ ರೆಡ್ಡಿ ನಗರದ ಪಾತ ಕಂದಕಂ ಬೀದಿಯ ಇಲಾಹಿ ಮಸೀದಿಗೆ ಭೇಟಿ ನೀಡಿ, ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಎಪಿಎಂಸಿ ಬಳಿಯ ಮಸೀದಿ ಹಾಗೂ ರೂಪನಗುಡಿ ರಸ್ತೆಯ ಹಜರತ್ ಸದ್ರುದ್ಧೀನ್ ಬಾಬಾ ದರ್ಗಾಗೆ ತೆರಳಿ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಮಧ್ಯಾಹ್ನ ವಾರ್ಡ್ ಸಂಖ್ಯೆ 15ರ ವ್ಯಾಪ್ತಿಯ ವಡ್ಡರಬಂಡೆಯಲ್ಲಿ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್ ಏರ್ಪಡಿಸಿದ್ದ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದರು.
ಈ ಸಂದರ್ಭ ವಕ್ಫ್ ಮಂಡಳಿಯ ಅಧ್ಯಕ್ಷ ಹುಮಾಯುನ್ ಖಾನ್, ಪಾಲಿಕೆಯ ಸದಸ್ಯರಾದ ಎಂ.ಪ್ರಭಂಜನಕುಮಾರ್, ಜಬ್ಬಾರ್, ಮಾಜಿ ಮೇಯರ್ ಎಂ.ರಾಜೇಶ್ವರಿ, ಸುಬ್ಬರಾಯುಡು, ಮಜರ್, ತೌಸಿಫ್ ಎಂ.ಡಿ.ಪಿ, ಜಿಯಾ, ರಸೂಲ್, ಥಿಯೇಟರ್ ಶಿವು, ರಘು, ರಾಕಿ, ಕಪ್ಪೆ ಶಿವು ಸೇರಿದಂತೆ ಹಲವರು ಹಾಜರಿದ್ದರು.