ಬಳ್ಳಾರಿ:ಡಿ,25; ಭಾರತೀಯ ವೈದ್ಯಕೀಯ ಸಂಘದ ಕಛೇರಿಯ ಕಟ್ಟಡ ನಿರ್ಮಾಣಕ್ಕೆ ನಾರಾ ಪ್ರತಾಪ್ ಕುಟುಂಬ ಒಂದು ಎಕರೆ
ಭೂಮಿಯನ್ನು ದಾನವಾಗಿದೆ ನೀಡಿದ್ದಾರೆ.ಇಂದು ಬೆಳಿಗ್ಗೆ ಸಂಗನಕಲ್ಲುರಸ್ತೆಯ ಎನ್.ಪಿ.ಲೇಔಟ್ ಹತ್ತಿರ ಭಾರತೀಯ ವೈದ್ಯಕೀಯ ಸಂಘದ ಕಛೇರಿಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬಳ್ಳಾರಿ ಭಾರತೀಯ ವೈದ್ಯಕೀಯ ಸಂಘದ ಕಛೇರಿಗೆ ಕಟ್ಟಡ ನಿರ್ಮಾಣ ಮಾಡಲು ನಾರಾ ಪ್ರತಾಪ್ ರೆಡ್ಡಿ ಹಾಗೂ ನಾರಾ ಶೈಲಜಾ ರೆಡ್ಡಿಯವರು ಒಂದು ಎಕರೆ ಜಾಗವನ್ನು ದಾನವಾಗಿ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಭಾರತೀಯ ವೈದ್ಯಕೀಯ ಸಂಘವು ಸನ್ಮಾನಿಸಿ ಗೌರವಿಸಿದೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿಯವರು ಮಾತನಾಡಿ ವೈದ್ಯಕೀಯ ಸಂಸ್ಥೆಯನ್ನು ಬೆಳೆಸುವ ಸದುದ್ದೇಶದಿಂದನನ್ನ ಸಹೋದರ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಈ ಕಟ್ಟಡ ನಿರ್ಮಾಣಕ್ಕೆ ನಾನು ವೈಯಕ್ತಿಕವಾಗಿ 50 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀನಿವಾಸಲು, ಕಾರ್ಯದರ್ಶಿ ಡಾ.ರಾಘವೇಂದ್ರ, ಬಿಮ್ಸ್ ನಿರ್ದೇಶಕ
ಡಾ.ಗಂಗಾಧರಗೌಡ, ಜಿಲ್ಲಾ ಆಸ್ಪತ್ರೆ ಶಸ್ತç ಚಿಕಿತ್ಸಕ ಡಾ.ಬಸರೆಡ್ಡಿ, ಡಿಹೆಚ್ಒ ಯಲ್ಲಾ ರಮೇಶ್ ಬಾಬು, ಕಟ್ಟಡ ನಿರ್ಮಾಣ
ಸಮಿತಿಯ ಅಧ್ಯಕ್ಷ ಅಶ್ವಿನ್ ಕುಮಾರ್ ಸಿಂಗ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.