ಕಾರಟಗಿ:- ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸುಮಾರು 400 ಜನರ ಮನೆಗಳ ಹಕ್ಕ ಪತ್ರ ಯಾವುದು ಸಿಕ್ಕಿಲ್ಲ, ದಿನ್ಯನಿತ್ಯ ನಮ್ಮ ಜನರು ತಾಲೂಕು ಕಛೇರಿಯಲ್ಲಿ ಅಲೆದಾಡುವ ಉದ್ವಿಗ್ನ ಪರಿಸ್ಥಿತಿ ನಮ್ಮ ದಲಿತ ಸಮುದಾಯದ ಜನರಿಗಾಗಿದೆ, ಯಾವುದೇ ಸರ್ಕಾರ ಬಂದರೂ ನಮ್ಮ ಸಮುದಾಯದ ಗೋಳು ಕೇಳುವವರೇ ಇಲ್ಲ, ಆದರೆ ಈಗಿನ ಸರ್ಕಾರ ನಮ್ಮ ದಲಿತ ಸಮುದಾಯದ ಪರವಾಗಿದ್ದು, ನಮ್ಮ ದಲಿತ ಸಮುದಾಯದ ಬಹುದೊಡ್ಡ ಸಮಸ್ಯೆ ಎಂದರೆ,ಸದರಿ ಬೂದಗುಂಪಾ ಗ್ರಾಮದಲ್ಲಿ ಜಮೀನು ಸರ್ವೆ ನಂ: 134ರಲ್ಲಿ ಬರುವ 400 ಮನೆಗಳ ಹಕ್ಕು ಪತ್ರ ಅನೇಕ ವರ್ಷಗಳಿಂದ ಕೊಟ್ಟಿರುವುದಿಲ್ಲಾ. ಸದರಿ 30-40 ವರ್ಷಗಳಿಂದ ದಲಿತ ಸಮುದಾಯಕ್ಕೆ ಮಾತ್ರ ಹಕ್ಕು ಪತ್ರ ಕೊಟ್ಟಿರುವುದಿಲ್ಲಾ. ಆದರೆ ಈ ರಾಜ್ಯ ಸರ್ಕಾರದ ಅವಧಿಯಲ್ಲಿ ನಮ್ಮ ದಲಿತ ಸಮುದಾಯಕ್ಕೆ ಅನ್ಯಾಯವಾಗದಂತೆ ತಾವು ನಮ್ಮ ಸಮುದಾಯದ ಕಾಳಜಿ ವಹಿಸಿ, ಮನೆಗಳು ಹಕ್ಕು ಪತ್ರ ಒದಗಿಸುವಂತೆ , ಮಾದ್ಯಮ ಮುಂದೆ ಮಾತ್ತನಾಡಿದ, ಕೊಪ್ಪಳ ಜಿಲ್ಲಾ ಅಧ್ಯಕ್ಷ ನಿಂಗರಾಜು ಚಲವಾದಿ ಕಾರಟಗಿ ತಾಲೂಕು ತಹಶೀಲ್ದಾರ್ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘ ಕೊಪ್ಪಳ ಜಿಲ್ಲಾ ಘಟಕದ ಪದಾಧಿಕಾರಿಗಳು, ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಅಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು..