ಬಳ್ಳಾರಿ,ಫೆ.29: ಪಾಕಿಸ್ತಾನಕ್ಕೆ ಜಯಕಾರ ಹಾಕಿರೋ ಪ್ರಕರಣದ ತನಿಖೆ ಬಗ್ಗೆ ಎಫ್ಎಸ್ಎಲ್ ವರದಿ ಮೇಲೆ ನಮಗೆ ನಂಬಿಕೆ ಇಲ್ಲ ಎನ್.ಐ.ಎ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ನಾಸೀರ್ ಹುಸೇನ್ ಅವರು ಬಳ್ಳಾರಿಯಿಂದ ರಾಜ್ಯಸಭೆಗೆ ಎರಡನೇ ಬಾರಿಗೆ ಆಯ್ಕೆಯಾಗಿರುವುದು ಗೌರವವಿದೆ. ಆದರೆ ಗೆದ್ದ ಮೇಲೆ ಅವರ ವರ್ತನೆ ಮಾತ್ರ ಖಂಡನೀಯ ಎಂದು ಅವರು ತಿಳಿಸಿದರು.
ವಿಧಾನ ಸೌಧದಲ್ಲಿ ಪಾಕಿಸ್ತಾನಕ್ಕೆ ಜಯಕಾರ ಹಾಕಿರೋ ಘಟನೆ ನಡೆದ ತಕ್ಷಣ ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅವರು ದೇಶದ ಜನರ ಕ್ಷಮೆ ಕೇಳಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರೆ ಘಟನೆ ಅಲ್ಲಿಗೆ ಮುಗಿದು ಹೋಗುತ್ತಿತ್ತು.
ಎಫ್ಎಸ್ಎಲ್ ವರದಿ ಬರುವ ಮುನ್ನ ಕ್ಲೀನ್ ಚಿಟ್ ಯಾಕೆ ನೀಡಿದ್ದಾರೆ? ಎಫ್ಎಸ್ಎಲ್ ವರದಿ ಅವರ ಪರವಾಗಿಯೇ ಬರುತ್ತದೆ. ಹೀಗಾಗಿ ಎನ್ಐಎಗೆ ಒಪ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ನವರು ತುಷ್ಠೀಕರಣದ ರಾಜಕೀಯವನ್ನು ಮಾಡ್ತಿದ್ದಾರೆ. ಭಯೋತ್ಪಾದಕರ ಪರ ಸರ್ಕಾರ ಇದೆ ಎನ್ನುವ ಅನುಮಾನವಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಸ್ನೇಹಿತರ ಜೊತೆ ಅವರು ನಡೆದುಕೊಂಡು ರೀತಿಯನ್ನು ಪ್ರಶ್ನೆ ಮಾಡಬೇಕಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ ಎನ್ನುವದು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ, ಪಾಕಿಸ್ತಾನದ ಪರ ಘೋಷಣೆ ಕೂಗುವಾಗ ಓರ್ವ ವ್ಯಕ್ತಿ ಬಾಯಿ ಮುಚ್ಚುತ್ತಾರೆ. ಅದನ್ನು ಮರೆಮಾಚಲು ಸಿಎಂ ಅದನ್ನು ಕೂಗಿಲ್ಲವೆಂದು ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇಂತಹವರು ವಿಧಾನ ಸೌಧಕ್ಕೆ ನುಗ್ಗಿ ಬಾಂಬ್ ಇಡೋದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ. ಇಂದು ಪಾಕಿಸ್ತಾನದ ಪರ ಜಯಘೋಷ ಹಾಕಿದವರು ನಾಳೆ ವಿಧಾನ ಸೌಧದಲ್ಲಿ ಬಾಂಬ್ ಇಡಲುಹಿಂಜರಿಯಲಾರರು ಎಂದು ಆರೋಪಿಸಿದರು.
ಇಲ್ಲಿನ ಬಿರಿಯಾನಿ ತಿಂದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ. ಇವರಿಗೆ ಸರ್ಕಾರ ಬೆಂಬಲಿಸುತ್ತ? ಭಾರತದಲ್ಲಿ ಇರಲು ಇಷ್ಟವಿಲ್ಲ ಅಂದ್ರೆ ನಾನೇ ವಿಮಾನದ ಚಾರ್ಜ್ ಕೊಡ್ತೇನೆ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಅವರು ಆಗ್ರಹಿಸಿದರು.
ಎಲ್ಲರೂ ಸ್ಪೀಕರ್ಗೆ ಗೌರವ ನೀಡಿದ್ರೆ. ಸಚಿವ ಜಮೀರ್ ವ್ಯಂಗ್ಯವಾದ ರೀತಿಯಲ್ಲಿ ಖಾದರ್ಗೆ ಎಲ್ಲರೂ ನಮಸ್ಕಾರ ಮಾಡೋ ರೀತಿ ಮಾಡಿದ್ದೇವೆ ಎನ್ನುತ್ತಾರೆ.
ಕೆಜಿ ಹಳ್ಳಿ ಡಿಜಿ ಹಳ್ಳಿ ಪ್ರಕರಣದಲ್ಲಿ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ದಾಳಿಕೋರರನ್ನು ಡಿಕೆಶಿವಕುಮಾರ್ ಅಮಾಯಕರು ಎನ್ನುತ್ತಾರೆ,
ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ತನಿಖಾ ಅಧಿಕಾರಿಗಳನ್ನು ತಮಗೆ ಬೇಕಾದವರನ್ನು ನೇಮಕ ಮಾಡುತ್ತಾರೆ ಎಂದು ಶ್ರೀರಾಮುಲು ಆರೋಪಿಸಿದರು.
ಪ್ರಧಾನಿ ಮೋದಿ ಅವರ ಬಗ್ಗೆ ಬಿ.ಕೆ.ಹರಿಪ್ರಸಾದ್ ಅವಹೇಳನಕಾರಿಯಾಗಿ ಮಾತನಾಡಿರೋದು ಸರಿಯಲ್ಲ. ಹರಿಪ್ರಸಾದ್ ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲೋಕೆ ಆಗಲ್ಲ, ಬ್ಯಾಕ್ಡೋರ್ ರಾಜಕಾರಣಿ ಎಂದರು.
ನನಗೆ ಹಿಂದೂ ಮುಸ್ಲಿಂ ಬೇದಭಾವ ಇಲ್ಲ. ಆದರೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದ್ರೇ ಒಪ್ಪೋದಿಲ್ಲ ಎಂದು ಅವರು ತಿಳಿಸಿದರು.