ಬಳ್ಳಾರಿ, ಫೆ. 06 – ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ಜನಗಳು ಮಾತ್ರವಲ್ಲ ಜಾನುವಾರುಗಳೂ ಸಹ ಈ ಸರ್ಕಾರಕ್ಕೆ ಇಡಿ ಶಾಪ ಹಾಕುತ್ತಿವೆ. ಈ ಸರ್ಕಾರವು ಜನರ ಕೋಪವಲ್ಲದೇ ಜಾನುವಾರುಗಳ ಶಾಪಕ್ಕೂ ಬಲಿಯಾಗಿದೆ. ಎಂದು ನಗರದ ಜಿಲ್ಲಾ ಬಿಜೆಪಿ ರೈತ ಮೋರ್ಚಾವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಗೌಡ ಮಾತನಾಡಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಾಲು ಉತ್ಪಾದಕರಿಗೆ ಪೋತ್ಸಾಹಧನವನ್ನು ನೀಡಿದ್ದರು. ಬಿಜೆಪಿ ಆಡಳಿತದಲ್ಲಿ 26 ಲಕ್ಷ ಗ್ರಾಮೀಣ ರೈತರಿಂದ ದಿನಂಪ್ರತಿ 80 ರಿಂದ 85 ಲಕ್ಷ ಲೀ. ಹಾಲನ್ನು ಸಂಗ್ರಹಿಸಲಾಗುತ್ತಿತ್ತು. ಸರ್ಕಾರವು ಹಾಲು ಉತ್ಪಾದಕರಿಗೆ 716 ಕೋಟಿ ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ಕರ್ನಾಟಕದಲ್ಲಿ ಪ್ರತಿನಿತ್ಯ 10 ಲಕ್ಷ ಲೀ. ನಷ್ಟು ಹಾಲಿನ ಉತ್ಪಾದನೆಯ ಪ್ರಮಾಣ ಕುಸಿದಿದೆ. ಈ ಸರ್ಕಾರಕ್ಕೆ ಮಾನ-ಮರ್ಯಾದೆ ಎಂದರೆ ರೈತರಿಗೆ ನೀಡಬೇಕಾದ ಬಾಕಿ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಸರ್ಕಾರ ರೈತರ ಬಾಕಿ ಉಳಿಸಿಕೊಂಡ ಪಾಪದ ಸರ್ಕಾರ ಎಂದು ಜನರು ಶಾಪ ಹಾಕುತ್ತಿದ್ದಾರೆ. ರೈತರಿಗೆ ನೀಡಬೇಕಾದ ಹಣ ಬಿಡುಗಡೆ ಮಾಡಲು ಯೋಗ್ಯತೆ ಇಲ್ಲದ ಸರ್ಕಾರ. ಈ ಬಾಕಿ ಹಣಕ್ಕೂ ಕೂಡ ನರೇಂದ್ರ ಮೋದಿಯವರತ್ತ ಮುಖ ಮಾಡುತ್ತಿದೆ. ಕೂಡಲೇ ಬಿಡುಗಡೆ ಮಾಡದಿದ್ದಲ್ಲಿ, ನಿಮ್ಮ ವಿರುದ್ಧ ಜನ-ಜಾನುವಾರು ಒಟ್ಟಾಗಿ ಹೋರಾಟಕ್ಕೆ ಇಳಿಯುತ್ತಾರೆ ಎಂಬ ಎಚ್ಚರಿಕೆ ಇರಲಿ ಎಂದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು ಎಮ್ ಎಲ್ ಸಿ ಸತೀಶ್ ಗುರುಲಿಂಗನಗೌಡ, ಓಬಳೇಶ್, ಮಾಜಿ ಅಧ್ಯಕ್ಷ ಮುರಹರಿ ಗೌಡ ಸಿದ್ದೇಶ್ ಉಳೂರು,ಸುಗುಣ, ಪುಷ್ಪಲತಾ, ಶಿವಕೃಷ್ಣಮ್ಮ ಸೇರಿದಂತೆ ಅನೇಕ ಜನರಿದ್ದರು