ಸಂದೇಶ್ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಇಂದು ಟಿವಿ9 ನೆಟ್ವರ್ಕ್ ಆಯೋಜಿಸಿದ್ದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ ಮಾತನಾಡಿದರು.
ಸಂದೇಶ್ಖಾಲಿಯಲ್ಲಿ ನಡೆದಿದ್ದು ಮನುಷ್ಯನ ಕಲ್ಪನೆಗೂ ಮೀರಿದ್ದು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಇಂದು ಟಿವಿ9 ನೆಟ್ವರ್ಕ್ ಆಯೋಜಿಸಿದ್ದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ ಮಾತನಾಡಿದರು. ಅಂತಾರಾಷ್ಟ್ರೀಯ ಗಣ್ಯರ ಎದುರು ದೇಶದ ಆಂತರಿಕ ವಿಷಯಗಳ ಬಗ್ಗೆ ಚರ್ಚಿಸುವುದು ನನಗೆ ಇಷ್ಟವಿಲ್ಲ. ಸಂದೇಶಖಾಲಿಯಲ್ಲಿ ನಡೆದದ್ದು ಮನುಷ್ಯರ ಕಲ್ಪನೆಗೂ ನಿಲುಕದ್ದು ಎಂದು ಹೇಳಿದರು.
ಪ್ರಧಾನಿ ಮೋದಿ ಮಹಿಳೆಯರಿಗಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ, ಸುಮಾರು 20 ವರ್ಷಗಳ ಹಿಂದೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಸ್ಪತ್ರೆಗಳಲ್ಲಿಯೇ ಹೆರಿಗೆಯಾಗುವಂತೆ ನೋಡಿಕೊಂಡಿದ್ದರು.ಧಾನಿ ಮೋದಿ ಅವರು ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ವಿಶಿಷ್ಟ ಗುರುತನ್ನು ನೀಡಿದ್ದಾರೆ.
ಮಹಿಳೆಯರನ್ನು ಆರ್ಥಿಕತೆಯಲ್ಲಿ ಸಮಾನ ಪಾಲುದಾರರನ್ನಾಗಿ ಮಾಡಿದರು. ಅವರು ಮಹಿಳೆಯರ ಹಿತಾಸಕ್ತಿ ಮತ್ತು ಅವರಿಗೆ ಶಕ್ತಿ ನೀಡುವಂತಹ ಅನೇಕ ಕಾರ್ಯಕ್ರಮಗಳನ್ನು ತಂದಿದ್ದಾರೆ. ಇರಾನಿ ಅವರು ‘ಲಖ್ಪತಿ ದೀದಿ’ಯಿಂದ ‘ಡ್ರೋನ್ ದೀದಿ’ ವರೆಗಿನ ಯೋಜನೆಗಳನ್ನು ಪ್ರಸ್ತಾಪಿಸಿದರು.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವುದನ್ನು ನೋಡುವ ಭಾಗ್ಯ ನನಗೆ ಸಿಕ್ಕಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಉಲ್ಲೇಖಿಸಿದ ಸ್ಮೃತಿ ಇರಾನಿ, ಈ ಯೋಜನೆಯು ಮಹಿಳೆಯರಿಗೆ ಹೊಸ ಶಕ್ತಿಯನ್ನು ನೀಡಿದೆ ಎಂದು ಹೇಳಿದರು. ಸುಮಾರು ಮೂರೂವರೆ ಲಕ್ಷ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದರು.
ಮಹಿಳೆಯರಿಗೆ ಮಾತ್ರ ಈ ಪ್ರಶ್ನೆ ಏಕೆ? ನೀವು ಮನೆ ಮತ್ತು ಕಚೇರಿಯನ್ನು ಹೇಗೆ ನಿರ್ವಹಿಸುತ್ತೀರಿ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಮಹಿಳೆಯರಿಗೆ ಮಾತ್ರ ಏಕೆ ಈ ಪ್ರಶ್ನೆ ಕೇಳುತ್ತಾರೆ. ಈ ಮೊದಲು ರಜನೀಶ್ ಕುಮಾರ್ ಇಲ್ಲಿದ್ದರು, ಅವರನ್ನು ಏಕೆ ಪ್ರಶ್ನಿಸಿಲ್ಲ ಎಂದರು.