ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೀವು ಓಟ್ ಬ್ಯಾಂಕ್ಗಾಗಿ ದೇಶವನ್ನು ಅಭದ್ರ ಮಾಡುತ್ತಿದ್ದೀರಿ. ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ? ಅತ್ಯಂತ ಅಯೋಗ್ಯ ಸರ್ಕಾರ ಇದು. ಈ ರೀತಿಯ ಚಿಲ್ಲರೆ, ತುಷ್ಟ ರಾಜಕೀಯ ನಿಲ್ಲಿಸಬೇಕು ಎಂದಿದ್ದಾರೆ.
ಹುಬ್ಬಳ್ಳಿ, ಫೆ.02: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Bengaluru Rameshwaram Cafe) ಆದ ಬಾಂಬ್ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ನಿನ್ನೆ ನಡೆದ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದಲ್ಲಿ ಇಸ್ಲಾಮಿಕ್ ಮೂಲಭೂತವಾದ ನಡೆಯುತ್ತಿದೆ. ಎಸ್ಡಿಪಿ ಮತ್ತು ಪಿಎಫ್ಐ ಮೇಲಿನ ಕೇಸ್ ವಾಪಸ್ಸು ಪಡೆದು ಕಾಂಗ್ರೆಸ್ ಸರ್ಕಾರ (Congress Government) ಅವರ ಪರವಾಗಿ ಇದೆ ಅಂತ ತೋರಿಸಿದ್ದರು ಎಂದು ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾಸೀರ್ ಹುಸೇನ್ಗೆ ನಾಚಿಕೆ ಆಗಬೇಕು. ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ನನ್ನ ಆಗ್ರಹವಿದೆ. ಯಾವುದಕ್ಕೆ ನಾವು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಬೇಕು. ಈ ಸರ್ಕಾರ ಭಯೋತ್ಪಾದಕತೆ ನಿಲ್ಲಿಸುತ್ತವೆ ಅಂದ್ರೆ ಮಾತ್ರ ಸಹಕಾರ ನೀಡುತ್ತೇವೆ. ಇವರು ನಮ್ಮಿಂದ ಏನು ಬಯಸುತ್ತಿದ್ದಾರೆ. ಇದು ಹೇಡಿ, ನಾಚಿಕೆಗೇಡಿನ ಕೃತ್ಯ. ನೀವು ಓಟ್ ಬ್ಯಾಂಕ್ಗಾಗಿ ದೇಶವನ್ನು ಅಭದ್ರ ಮಾಡುತ್ತಿದ್ದೀರಿ. ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ? ಅತ್ಯಂತ ಅಯೋಗ್ಯ ಸರ್ಕಾರ ಇದು. ಈ ರೀತಿಯ ಚಿಲ್ಲರೆ, ತುಷ್ಟ ರಾಜಕೀಯ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಇನ್ನು ಯಾವುದೇ ಪೂರ್ವ ತಯಾರಿ ಇಲ್ಲದೆ ಜಾತಿಗಣತಿ ಮಾಡಿದ್ದಾರೆ. ಮೊದಲು ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ. ಆ ಮೇಲೆ ಬಿಜೆಪಿ ನಿಲವು ತಿಳಿಸುತ್ತದೆ. ನಾನು ಈಗಾಗಲೇ ಸಾಕಷ್ಟು ಚುನಾವಣಾ ತಯಾರಿ ಮಾಡಿದ್ದೇನೆ. ನನಗೆ ಎಲ್ಲಾ ವರ್ಗದ ಬೆಂಬಲ ಇದೆ ಎಂದು ಜೋಶಿ ತಿಳಿಸಿದರು.