ಬಳ್ಳಾರಿ: ಪಂಚಾಂಗವನ್ನು ದಿನ ನಿತ್ಯ ನೋಡಬೇಕು, ಇದರಿಂದ ನಿತ್ಯದ ಜೀವನಕ್ಕೆ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥ ಸ್ವಾಮೀಜಿ ಅವರು ಹೇಳಿದರು.
ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ಸುಶಮಿಂದ್ರ ಮoಗಲ ಭವನದಲ್ಲಿ ಅನೀಲ ಜೋಶಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಲೋಕ ಕಲ್ಯಾಣಕ್ಕಾಗಿ ಶ್ರೀ ಮಹಾಸುದರ್ಶನ ಹೋಮ ಹಾಗೂ ಶ್ರೀ ಗೌತಮ ಸೂರ್ಯ ಸಿದ್ದಾಂತ ಪಂಚಾಂಗ ಬಿಡುಗಡೆಗೊಳಿಸಿ ಮಾತನಾಡಿದರು. ವಿವಾಹ, ಜವಳ, ಉಪನಯನ, ಗೃಹಪ್ರವೇಶ ಸೇರಿದಂತೆ ಎಲ್ಲ ಶುಭ ಸಮಾರಂಭಗಳಿಗೆ ಪಂಚಾಂಗ ನೋಡುವುದು ಅತಿ ಮುಖ್ಯವಾಗಿದೆ. ವಿಶೇಷವಾಗಿ ಯಾವುದೇ ಕಾರ್ಯಕ್ರಮಗಳಿರಲಿ ನಕ್ಷತ್ರ ಮುಖ್ಯ, ಕೈಗೊಂಡ ದಿನ ಶುಭವಾಗಿದ್ದರೆ ಎಲ್ಲರಿಗೂ ಒಳ್ಳೆಯದಾಗಲಿದೆ, ಅದಕ್ಕೆ ಪಂಚಾಂಗ ಅತೀ ಮುಖ್ಯವಾಗಿದೆ ಎಂದರು. ಇದಕ್ಕೂ ಮುನ್ನ ಹೋಮ ಹಾಗೂ ಪೂರ್ಣಾಹುತಿ ನೆರವೇರಿತು. ನಂತರ ಶ್ರೀ ವಿದ್ಯಾ ಸಿಂಧು ಮಾಧವ ತೀರ್ಥ ಸ್ವಾಮೀಜಿ ಅವರಿಂದ ಶ್ರೀ ಕೃಷ್ಣನ ಬಲ ಲೀಲೆಗಳ ಕುರಿತು ಉಪನ್ಯಾಸ ನಡೆಯಿತು. ಬದರಿ ನಾರಾಯಣ ದೇಗುಲ ಪ್ರಧಾನ ಅರ್ಚಕರಾದ ಪಂ.ಗುರುರಾಜ್ ಆಚಾರ ಅವರು ಸ್ವಾಮೀಜಿ ಅವರ ಕುರಿತು ಕಿರುಪರಿಚಯ, ನಂತರ ಸ್ವಾಮೀಜಿ ಅವರು, ಶ್ರೀ ಮಧ್ವ ವಿಜಯ ಪ್ರಶಸ್ತಿ ವಿಜೇತ, ಜೋತಿಷಿ ರತ್ನ ಗುರುರಾಜ್ ಕುಲಕರ್ಣಿ ಅವರು ಬರೆದ ನೂತನ ವರ್ಷದ ಪಂಚಾಂಗವನ್ನು ಬಿಡುಗಡೆಗೊಳಿಸಿದರು. ನಂತರ ಕು.ವಿಭಾ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಪವಮಾನ ಅರಳಿಕಟ್ಟಿ, ಪದ್ಮಜಾ ಅರಳಿಕಟ್ಟಿ ಅವರು ತಬಲಾ ಹಾಗೂ ಹಾರ್ಮೋನಿಯಂ ಸಾಥ್ ನೀಡಿದರು. ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಅನುಪಮ, ಬೀ.ಕೆ.ಸುಂದರ್, ಪಂಪಯ್ಯ ಶಾಸ್ತ್ರೀಜಿ, ಗುಂಡಯ್ಯ ಸ್ವಾಮಿ, ಡಾ.ಸಂಜೀವ್ ಪ್ರಸಾದ್, ಹೊಸದಿಗಂತ ಜಿಲ್ಲಾ ವರದಿಗಾರರು ವೆಂಕಟೇಶ ದೇಸಾಯಿ ಕವಿತಾ ವಾದಿರಾಜ, ಪತ್ರಕರ್ತ ನರಸಿಂಹ ಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಸರಾಂತ ಸಂಗೀತ ಗಾಯಕ ಶ್ರೀ ಶೇಷಗಿರಿ ದಾಸ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಚ್.ಹರಿಕುಮಾರ್, ಪಂ.ಅಶೋಕ್ ಕುಲಕರ್ಣಿ, ಡಿ.ಗಿರಿ, ಡಾನಾಪೂರ್ ಶ್ರೀನಿವಾಸ್, ಪಾರ್ಥಸಾರ್ಥಿ, ವಸುಧಾ, ಸತೀಶ್ ದೇಸಾಯಿ, ಡಾ.ಶ್ರೀನಾಥ್, ಸೇರಿದಂತೆ ಇತರರು ಇದ್ದರು.