ಬೆಂಗಳೂರು: ಶೀಘ್ರದಲ್ಲೇ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ, ಅದಕ್ಕೂ ಮುನ್ನ ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯು ಜೆಡಿಎಸ್-ಬಿಜೆಪಿ ಮೈತ್ರಿ ಅಥವಾ ಕಾಂಗ್ರೆಸ್ಗೆ ಲಾಭವಾಗುತ್ತದೆಯೇ ಎಂಬ ಬಗ್ಗೆ ಎಲ್ಲರ ಗಮನವಿದೆ. ಒಂದು ವೇಳೆ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆದ್ದರೆ ದೋಸ್ತಿಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ, ಆದರೆ ಸೋತರೆ ಸತತ ಎರಡನೇ ಬಾರಿಗೆ ತಪ್ಪು ಮಾಡಿದ್ದಾರೆ ಎಂಬ ಗ್ರಹಿಕೆಗೆ ಕಾರಣವಾಗುತ್ತದೆ.
ರಾಜ್ಯ ವಿಧಾನಸಭೆಯಲ್ಲಿನ ಸಂಖ್ಯಾಬಲವನ್ನು ಗಮನಿಸಿದರೆ, ಜೆಡಿಎಸ್ ಕೇವಲ 19 ಶಾಸಕರನ್ನು ಹೊಂದಿದೆ, ಆದರೆ ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು 45 ಮತಗಳಿಂದ ಆಯ್ಕೆ ಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿಯಿಂದ 21 ಮತಗಳನ್ನು ಪಡೆಯಬಹುದು, ಜೆಡಿಎಸ್ ಬಿಜೆಪಿ ಮೈತ್ರಿಯಿಂದ 40 ಮತಗಲು ಸಿಗುತ್ತವೆ. 45 ಮ್ಯಾಜಿಕ್ ನಂಬರ್ ತಲುಪಲು, ಅವರಿಗೆ ನಾಲ್ಕು ಸ್ವತಂತ್ರ ಶಾಸಕರ ಮತಗಳು ಮತ್ತು ಅವರಿಗೆ ಅಡ್ಡ ಮತದಾನ ಮಾಡಲು ಕಾಂಗ್ರೆಸ್ ಶಾಸಕರ ಮತಗಳು ಬೇಕಾಗುತ್ತವೆ.
ಒಂದು ವೇಳೆ ಇದು ಸಾಧ್ಯ ಆಗದಿದ್ದರೆ ಜೆಡಿಎಸ್ ಪಕ್ಷಕ್ಕೆ ಎರಡನೇ ಹಿನ್ನಡೆಯಾಗಲಿದೆ. ವಾರದ ಹಿಂದೆಯಷ್ಟೇ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿ ರಂಗನಾಥ್ ಕಾಂಗ್ರೆಸ್ ನ ಪುಟ್ಟಣ್ಣ ವಿರುದ್ಧ ಸೋಲು ಕಂಡಿದ್ದರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 700 ಮತಗಳನ್ನು ಪಡೆಯುವ ಮೂಲಕ ಅವಮಾನಕರವಾಗಿ ಸೋತಿತ್ತು. ರಾಜ್ಯಸಭೆ ಚುನಾವಣೆಯಲ್ಲಿಯೂ ಬಿಜೆಪಿ-ಜೆಡಿಎಸ್ ಸೋತರೆ, ಎರಡು ಪಕ್ಷಗಳು ತಮ್ಮ ಜಂಟಿ ಕಾರ್ಯಕರ್ತರನ್ನು ಹುರಿದುಂಬಿಸಲು ಕಷ್ಟವಾಗುತ್ತದೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಹೇಳಿದ್ದಾರೆ.
ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಕುಪೇಂದ್ರ ರೆಡ್ಡಿ, ಚುನಾವಣೆಯಲ್ಲಿ ಸ್ಪರ್ಧಿಸಿ, ಹಣಬಲದಿಂದ ಗೆಲ್ಲುವಂತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಇದು ಸಾಧ್ಯವಾಗದಿರಬಹುದು, ಏಕಂದರೆ ಸರ್ಕಾರ ಕೇವಲ ಎಂಟು ತಿಂಗಳು ಪೂರೈಸಿದೆ ಎಂದು ಮೂರ್ತಿ ತಿಳಿಸಿದರು. ಇದು ಈ ಸರ್ಕಾರದ ಆಡಳಿತದ ಅಂತ್ಯವಾಗಿದ್ದರೆ, ಅದರ ಬೇರೆ ಕಥೆಯಾಗುತ್ತಿತ್ತು ಎಂದು ಅವರು ಹೇಳಿದರು.
ಪಕ್ಷೇತರ ಅಭ್ಯರ್ಥಿಗಳು ಒಂದು ವೇಳೆ ತಮ್ಮ ನಿಷ್ಠೆ ಬದಲಿಸಿದರೆ ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಉತ್ತರಿಸಬೇಕಾದ ಅವಶ್ಯಕತೆಯಿರುತ್ತದೆ ಗೌರಿಬಿದನೂರು ಕ್ಷೇತ್ರದ ಶಾಸಕ ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್ ನಿಂದ ಬಂಡಾಯವಾಗಿ ಗೆದ್ದು ಮಂಡ್ಯ ಟಿಕೆಟ್ ಪಡೆದಕೊಳ್ಳುವ ಹವಣಿಸುತ್ತಿದ್ದಾರೆ.
ಅವರ ಅಳಿಯ ಶರತ್ ಬಚ್ಚೇಗೌಡ ಅವರು ಪ್ರಸ್ತುತ ಕಾಂಗ್ರೆಸ್ ಶಾಸಕ ಮತ್ತು ಕಿಯೋನಿಕ್ಸ್ ಅಧ್ಯಕ್ಷರಾಗಿದ್ದಾರೆ. ಮೇಲುಕೋಟೆಯ ಮತ್ತೋರ್ವ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡ ಅವರು ಕಾಂಗ್ರೆಸ್ ಬೆಂಬಲಿತರಾಗಾಗಿದ್ದಾರೆ. ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ ಈಗಾಗಲೇ ಕಾಂಗ್ರೆಸ್ ಸಹ ಸದಸ್ಯೆಯಾಗಿದ್ದಾರೆ.
ಕುಪೇಂದ್ರ ರೆಡ್ಡಿಗೆ ಟ್ರಂಪ್ ಕಾರ್ಡ್ ಎಂದರೆ ಶಾಸಕ ಜನಾರ್ದನ ರೆಡ್ಡಿ, ಅವರು ಬೆಂಬಲ ನೀಡಲು ಒಪ್ಪಿಗೆ ನೀಡಿದ್ದಲ್ಲದೆ, ಅವರ ಪರವಾಗಿ ಬೆಂಬಲ ಯಾಚಿಸುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜತೆ ಜನಾರ್ದನರೆಡ್ಡಿ ಸಂಬಂಧ ಹಳಸಿರುವುದು ಎಲ್ಲರಿಗೂ ತಿಳಿದಿದೆ, ಈಗ ಅದೆಲ್ಲವೂ ಹಿಂದೆ ಸರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಾಲ್ವರು ಸ್ವತಂತ್ರರು ಎಲ್ಲಾ ಪಕ್ಷಗಳಿಗೂ ತಮ್ಮ ಪಕ್ಷಕ್ಕೆ ಬೇಕಾಗಿರುವುದರಿಂದ ಎಲ್ಲರೂ ಸ್ವತಂತ್ರ್ಯ ಶಾಸಕರ ಹಿಂದೆ ಬಿದಿದಿದ್ಸ ಹಿಡಿದಿದ್ದಾರೆ. ಬಿಜೆಪಿ-ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ತಮ್ಮ ತಮ್ಮ ಪಕ್ಷದ ಅಧಿಕಾರಿಗಳಿಗೆ ತಮ್ಮ ಮತಪತ್ರವನ್ನು ತೋರಿಸಬೇಕಾಗಿದ್ದರೂ, ಸ್ವತಂತ್ರ ಶಾಸಕರಿಗೆ ಅದರ ಅಗತ್ಯವಿಲ್ಲ, ಹೀಗಾಗಿ ಅವರು ಯಾರಿಗೆ ಮತ ಹಾಕಿದರು ಎಂಬುದು ತಿಳಿಯುವುದಿಲ್ಲ. ಮಂಗಳವಾರ ನಡೆಯಲಿರುವ ಮತದಾನ ರಣೋತ್ಸಾಹದತ್ತ ಸಾಗುತ್ತಿದೆ.