ಬಳ್ಳಾರಿ,ಡಿ.21 :ಬಳ್ಳಾರಿ ನಗರದ ಇನ್ಫೆಂಟ್ರಿ ರಸ್ತೆಯ ವಾಸವಿ ಶಾಲೆ ಹತ್ತಿರ ವೃತ್ತಕ್ಕೆ ಶ್ರೀ ಸಿದ್ದರಾಮೇಶ್ವರ ವೃತ್ತ ನಾಮಕರಣ ಮಾಡಬೇಕೆಂದು ಬಳ್ಳಾರಿ ಜಿಲ್ಲಾ ಬೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷರು ವಿ. ರಾಮಾಂಜನೇಯ ಮತ್ತು ಸಮಾಜದ ಪದಾಧಿಕಾರಿಗಳ ನೇತೃತ್ವದಲ್ಲಿ ನಗರ ಶಾಸಕರಾದ ನಾರಾ ಭರತ್ ರೆಡ್ಡಿ ಮತ್ತು ಗ್ರಾಮೀಣ ಶಾಸಕ ಬಿ. ನಾಗೇಂದ್ರ ನವರಿಗೆ ಹಾಗೂ ಮಹಾಪೌರರಿಗೆ ಹಲವಾರು ಬಾರಿ ಮನವಿ ಮಾಡಿದ್ದರು , ನಿನ್ನೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಸ್ಪಂದಿಸಿದ ಮಹಾನಗರ ಪಾಲಿಕೆ ಮಹಾ ಪೌರರಾದ ಮುಲ್ಲಂಗಿ ನಂದೀಶ್ ಅವರು ಶ್ರೀ ಶ್ರೀ ಸಿದ್ದರಾಮೇಶ್ವರ ವೃತ್ತ ಎಂದು ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ, ಇದಕ್ಕೆ ಬೋವಿ ಸಮಾಜದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿ. ರಾಮಾಂಜನಿ ಮಾಧ್ಯಮ ಜೊತೆ ಮಾತನಾಡಿ ಹಲವಾರು ದಿನಗಳಿಂದ ನಾವು ನಮ್ಮ ಬೋವಿ ಮತ್ತು ವಡ್ಡರ ಸಮುದಾಯ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ನಮಗೆ ವೃತ್ತ ಮತ್ತು ಸಮುದಾಯ ಭವನ ನಿರ್ಮಿಸಿಕೊಡಲು ಗ್ರಾಮೀಣ ಶಾಸಕ ಮತ್ತು ನಗರ ಶಾಸಕರಿಗೆ ಮತ್ತು ಮಹಾಪೌರರಿಗೆ ಮನವಿ ಮಾಡಿಕೊಂಡಿದ್ದೆವು ನಮ್ಮ ಮನವಿಗೆ ಸ್ಪಂದಿಸಿದ ನಾಯಕರಿಗೆ ನಾವು ಧನ್ಯವಾದಗಳು ತಿಳಿಸುತ್ತೇವೆಂದು ಎಂದರು.