ಸುವರ್ಣವಾಹಿನಿ ಸುದ್ದಿ
ಕೊಪ್ಪಳ,ಜ,೨೦: ಕುಕುನೂರು ತಾಲೂಕು ಮಂಗಳೂರು ಗ್ರಾಮದಲ್ಲಿ ಕಾರ್ಯಾಗಾರವನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಂಗಳೂರು ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಉದ್ಘಾಟನೆ ನೆರವೇರಿಸಿದ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀ ಎಫ್ ಎಂ ಕಳ್ಳಿ ಮಾತನಾಡಿ ಅಕ್ಷರ ದಾಸೋಹ ಕಾರ್ಯಕ್ರಮ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಡಿಯಲ್ಲಿ ೧-೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ ಬಿಸಿ ಹಾಲು ಮತ್ತು ವಾರದ ಎಲ್ಲಾ ಶಾಲಾ ದಿನಗಳಂದು ಬಿಸಿಯೂಟ ವಿತರಿಸಲಾಗುತ್ತದೆ. ಇದರೊಂದಿಗೆ ೨೦೨೩೨೪ನೇ ಸಾಲಿನಲ್ಲಿ ಸರ್ಕಾರ ನಿಗದಿಪಡಿಸಿದ ೮೦ ದಿನಗಳಿಗೆ ಪೂರಕ ಪೌಷ್ಠಿಕ ಆಹಾರ ಮೊಟ್ಟೆ, ಮೊಟ್ಟೆ ತಿನ್ನದೇ ಇರುವ ಮಕ್ಕಳಿಗೆ ಬಾಳೆಹಣ್ಣು ಶೇಂಗಾ ಚಿಕ್ಕಿ ವಿತರಣೆ ಮಾಡಲಾಗುತ್ತದೆ.
ಶಾಲಾ ಹಂತದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬAಧಿಸಿದAತೆ ಸ್ವಚ್ಛತೆ ಹಾಗೂ ಸುರಕ್ಷತೆಯಿಂದ ಕೆಲಸ ನಿರ್ವಹಿಸಬೇಕು. ಮಕ್ಕಳಿಗೆ ಸಾಲಾಗಿ ಕುಳ್ಳಿರಿಸಿ ಪಂಕ್ತಿ ಭೋಜನ ವ್ಯವಸ್ಥೆ ಮಾಡಬೇಕು ಎಂದರು. ಪ್ರತಿ ದಿನ ಅಡುಗೆ ಸಿದ್ಧಪಡಿಸಿದ ನಂತರ ಇಬ್ಬರು ಶಿಕ್ಷಕರು ಕಡ್ಡಾಯವಾಗಿ ರುಚಿ ನೋಡಿ ದೃಢೀಕರಣ ಮಾಡಬೇಕು ಮತ್ತು ಒಬ್ಬರು Sಆಒಅಯವರು ರುಚಿ ನೋಡಿ ದೃಢೀಕರಣ ಮಾಡಬೇಕು ಎಂದರು….
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಈರೇಶಪ್ಪ ಪ್ರಾಂಶುಪಾಲರು ವಹಿಸಿದ್ದರು.
ಶರಣಪ್ಪ ರಾವಣಕಿ ಶಿಕ್ಷಣ ಸಂಯೋಜಕರು ಪ್ರಾಸ್ತಾವಿಕವಾಗಿ ಮಾತನಾಡಿ ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನದಲ್ಲಿ ಶಾಲಾ ಹಂತದಲ್ಲಿ ಸಹಶಿಕ್ಷಕರು, ಮುಖ್ಯೋಪಾಧ್ಯಾಯರು, Sಆಒಅ ಹಾಗೂ ಅಡುಗೆದಾರರು ಸಮನ್ವಯದಿಂದ ಕೆಲಸ ನಿರ್ವಹಿಸಿದಾಗ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾದ್ಯ ಎಂದರು.
ಕುಕನೂರು ಅಗ್ನಿ ಶಾಮಕ ಠಾಣೆಯ ಅಧಿಕಾರಿಗ¼ ಕೆ. ಜನಾರ್ಧನ ರಾವ್ ಹಾಗೂ ಶ್ರೀ ಶರಣಯ್ಯ ಜಡಿಮಠರವರು ಅಗ್ನಿನಂದಕವನ್ನು ಬಳಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಅಪೂರ್ವ ಭಾರತ ಗ್ಯಾಸ್ ನ ಶಿವಕುಮಾರ ಪಟ್ಟಣಶೆಟ್ಟಿ ಗ್ಯಾಸ್ ಸ್ಟವ್ ಬಳಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಆರೋಗ್ಯ ಇಲಾಖೆಯ ಡಾಕ್ಟರ್ ಅಭಿಷೇಕ ಅಡುಗೆದಾರರ ವೈಯಕ್ತಿಕ ಸ್ವಚ್ಛತೆ, ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿಯ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಶರಣಪ್ಪ ಕುರ್ನಾಳ ಸಿ.ಆರ್.ಪಿ ಮಂಜುನಾಥಯ್ಯ ಸಿ.ಆರ್.ಪಿ ತರಬೇತಿ ನೀಡಿದರು.
ಇದೇ ಸಂದರ್ಭದಲ್ಲಿ ಅಡುಗೆದಾರರಿಗೆ ಅಡುಗೆ ತಯಾರಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಡುಗೆದಾರರಾದ ರೇಣುಕಾ ಕರ್ನಾಟಕ ಪಬ್ಲಿಕ್ ಶಾಲೆ ಮಂಗಳೂರು ಪ್ರಥಮ ಸ್ಥಾನ ಪಡೆದರು.ಶ್ರೀಮತಿ ರಜಿಯಾಬೇಗಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಕೇರಿ ದ್ವಿತೀಯ ಸ್ಥಾನ ಪಡೆದರು. ಭೀಮವ್ವ ಮಡಿವಾಳರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದರಿಮೋತಿ ತೃತೀಯ ಸ್ಥಾನ ಪಡೆದರು. ಜಯಶ್ರೀ ಮಡಿವಾಳರ, ಲಕ್ಷ್ಮೀ ಬಳಿಗಾರ್, ಸುವರ್ಣ ನಿರ್ಣಾಯಕರಾಗಿ ಕರ್ತವ್ಯ ನಿರ್ವಹಿಸಿದರು. ವಿಜೇತರಿಗೆ ಬಹುಮಾನಗಳನ್ನು ನೀಡುವ ಪ್ರಾಯೋಜಕತ್ವವನ್ನು ವೆಂಕಣ್ಣ ಅರಕಲ್ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕದ್ರಳ್ಳಿ ಇವರು ನೀಡಿದ್ದಾರೆ. ಕುಮಾರಿ ರಂಜಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸೋಮಪ್ಪ ನಾಯಕ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಹನುಮಂತಪ್ಪ ಕುರಿ,ಸುರೇಶ್ ಮಡಿವಾಳರ,ರವಿ ಮಳಗಿ, ಮಂಗಳೇಶ್ ಎಲಿಗಾರ, ಶಿವನಗೌಡ ಪಾಟೀಲ, ಜಯಮ್ಮ, ಶಕುಂತಲಾ ಪಾಟೀಲ್, ಆನಂದ ಚಿನ್ನೂರ,ಶ್ರೀ ಬಸವರಾಜ ಕರಕನಗೌಡ್ರ ಉಪಸ್ಥಿತರಿದ್ದರು..