ಬಳ್ಳಾರಿ, ಫೆ.9: ನಮ್ಮ ತಂದೆಯವರಾದ ದಿ.ಜೋಳದರಾಶಿ ಬಿ.ಎರಿಸ್ವಾಮಿ ಅವರ ಸ್ಮರಣೆ ಹಾಗೂ ಜೋಳದರಾಶಿ ಬಳಿಯ
ನಮ್ಮ ಮಾಲೀಕತ್ವದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್ (ಪೆಟ್ರೋಲ ಬಂಕ್ನ) ಮೂರನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಪ್ಯಾಡ್, ಪೆನ್ನುಗಳನ್ನು ನೀಡುವ ಉದ್ದೇಶವನ್ನು ನಮ್ಮ ಕುಟುಂಬ ಹೊಂದಿದ್ದು, ಶೈಕ್ಷಣಿಕವಾಗಿ ಸೇವೆ ಮಾಡುವ ಮಹತ್ವಾಕಾಂಕ್ಷೆ ನಮ್ಮದಾಗಿದೆ ಎಂಧು ಯುವ ಉಧ್ಯಮಿ, ಜೋಳದರಾಶಿ ತಿಮ್ಮಪ್ಪ ತಿಳಿಸಿದರು.
ನಾನು ಬಡತನದಿಂದ ಬಂದಿದ್ದು, ನಾನು ಪರೀಕ್ಷೆ ಬರೆಯುವ ವೇಳೆ ಪ್ಯಾಡ್ ಹಾಗೂ ಪೆನ್ಗಳ ಸಮಸ್ಯೆಯಿತ್ತು. ಆದಾಗ್ಯೂ ಬಡತನದಲ್ಲಿಯೇ ಓದಿ ಇಂದು ಉದ್ಯಮಿಯಾಗಿ ಬೆಳೆಯಲು ಆಸ್ಪದವಾಗಿದೆ. ನನ್ನಂತೆಯೇ ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಬೆಳವಣಿಗೆಗೆ ಸಮಸ್ಯೆ ಎದುರಿಸಬಾರದು. ನಮ್ಮಿಂದಾದ ಸಹಾಯವನ್ನು ನಮ್ಮ ಕುಟುಂಬದ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಾಡಬೇಕು ಎಂಬ ಉದ್ದೇಶದಿಂದ ಈ ವರ್ಷದಿಂದ ಪರೀಕ್ಷೆ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೇಕಾದ ನೆರವು ನೀಡಲು ಸಹ ನಮ್ಮ ಕುಟುಂಬ ಸಿದ್ಧವಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಿಗಿಂತ ಕಡಿಮೆ ಅಲ್ಲ; ಅವರಲ್ಲೂ ಅಪಾರ ಜ್ಞಾನ ಹಾಗೂ ಸಾಧನೆಯ ಮಾಡುವ ಶಕ್ತಿಯೂ ಇದೆ. ಅವರಿಗೆ ಸೂಕ್ತ ಸ್ಪಂದನೆ ಹಾಗೂ ಸಹಕಾರ ನೀಡಬೇಕಷ್ಟೇ. ಸರ್ಕಾರಿ ಶಾಲೆಯಲ್ಲಿ ಓದಿದ ಅದೆಷ್ಟೋ ಜನರು ದೊಡ್ಡ ಹುದ್ದೆಗಳಲ್ಲಿದ್ದು, ಉದ್ಯಮಿಗಳಾಗಿಯೂ
ಹೆಸರು ಮಾಡಿದ್ದಾರೆ. ಹೀಗಾಗಿ “ಶಿಕ್ಷಣಕ್ಕೆ ಒಂದಷ್ಟು ನೆರವು” ಘೋಷಣೆಯಡಿ ಈ ವರ್ಷ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಗುವುದು ಎಂಧು ಯುವ ಉಧ್ಯಮಿ, ಜೋಳದರಾಶಿ ತಿಮ್ಮಪ್ಪ ತಿಳಿಸಿದರು.