ಬೇಲೂರು,ಜ,೧೯: ಪ್ರಧಾನಿ ಮೋದಿ ಸಮಾಜದ ಎಲ್ಲಾ ವರ್ಗಗಳಿಗೂ ಸಹಾಯ ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎಗೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಗುರುವಾರ ಹೇಳಿದರು.
ಬೇಲೂರಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವೈಯಕ್ತಿಕ ಹಿತಾಸಕ್ತಿಯಿಂದ ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ದೇಶದ ೧೫೦ ಕೋಟಿ ಜನರಿಗಾಗಿ ಮೋದಿಜತೆ ಸಂಬAಧ ಬೆಳೆಸಿದ್ದೇನೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಎಷ್ಟುಸೀಟು ಕೊಡುತ್ತಾರೆ ಎಂಬುದು ಮುಖ್ಯವಲ್ಲ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದು ಮುಖ್ಯ. ಮೋದಿಯವರು ೧೦ ವರ್ಷದಲ್ಲಿ ಅಯೋಧ್ಯೆ, ಕಾಶಿ ಗಂಗಾನದಿಯ ಸ್ವರೂಪವನ್ನು ಬದಲಿಸಿ ರಸ್ತೆಗಳನ್ನು ಕ್ರಾಂತಿಕಾರಿ ಮಾಡಿದ್ದಾರೆ.ಸಮಾಜದ ಎಲ್ಲಾ ವರ್ಗಗಳಿಗೆ ನ್ಯಾಯ ಒದಗಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದಾರೆAದು ಕೊಂಡಾಡಿದರು.
ಬಳಿಕ ಮೋದಿಯನ್ನು ಬೆಂಬಲಿಸುವAತೆ ಜೆಡಿಎಸ್ ಕಾರ್ಯಕರ್ತರನ್ನು ಒತ್ತಾಯಿಸಿದ ಅವರು, ವಿಪಕ್ಷಗಳ ಮೈತ್ರಿಕೂಟ ಇಂಡಿಯಾದಲ್ಲಿರುವ ನಾಯಕರಿಗೆ ಮೋದಿಯವರಿಗಿರುವ ಸಾಮರ್ಥ್ಯವಿಲ್ಲ. ಕಾಂಗ್ರೆಸ್ ಮತ್ತು ಅದರ ನಾಯಕರ ಬಗ್ಗೆ ಮಾತನಾಡಲು ಸಾಕಷ್ಟು ಇದೆ, ನಮ್ಮ ಪಕ್ಷವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಾನು ವಿಶ್ರಮಿಸುವುದಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ಸಾಮಾನ್ಯ ಜನರು ಮತ್ತು ರೈತರ ಹಿತಾಸಕ್ತಿಗಳಿಗಾಗಿ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಇಂದು ಗಾಂಧಿ, ನೆಹರು ಕಾಂಗ್ರೆಸ್ ಆಗಿ ಉಳಿದಿಲ್ಲ, ಬೇಕಾದಾಗ ಉಪಯೋಗಿಸಿಕೊಂಡು ಬೇಡ ಎಂದಾಗ ಕಸದಂತೆ ಎಸೆಯುತ್ತಾರೆ. ಅದು ಅಕಾರಕ್ಕಾಗಿ ಆತೊರೆಯುವ ಪಕ್ಷವಾಗಿದೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಗ್ಯಾರಂಟಿಗಳು ಎಲ್ಲಿ ಹೋಗುತ್ತವೆಯೋ ತಿಳಿಯದು ಎಂದು ವ್ಯಂಗ್ಯವಾಡಿದರು.