ಬಳ್ಳಾರಿ,ಮೇ.17 : ನಗರ ಜೆಸ್ಕಾಂ ವ್ಯಾಪ್ತಿಯ ಫೀಡರ್-64 ರ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುರಿಂದ ಮೇ 18 ರಂದು ಬೆಳಗ್ಗೆ 7 ರಿಂದ ಸಂಜೆ 4ರವರೆಗೆ ನಗರದ ಎಸ್.ಆರ್.ಎಂ ಲೇಔಟ್, ಸಂಸ್ಕøತಿ ಶಾಲೆ, ವಿಶಾಲ ನಗರ, ಹನುಮಾನ ನಗರ, ಬಿ.ಗೋನಾಳ, ಹೌಸಿಂಗ್ ಬೋರ್ಡ್, ವೆಂಕಟಲಕ್ಮ್ಷಿ ನಗರ, ಅಂಜಿನಪ್ಪ ನಗರ, ಎಸ್.ಆರ್.ಪಿ ಕಾಲೋನಿ, ಎಮ್.ಜಿ. ಅನಂತಪುರ ರಸ್ತೆ, ಆಗಡಿ ಮಾರೆಪ್ಪ ಕಾಂಪೌಂಡ್, ದತ್ತ ಸಾಯಿ ನಗರ, ಆಶ್ರಯ ಕಾಲೋನಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.