ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಹಣ ದುರುಪಯೋಗದ ಪ್ರಕರಣ ತನಿಖೆ ಹಂತದಲ್ಲಿದ್ದು ಜುಲೈ 4 ರಂದು ಮಾಜಿ ಸಚಿವ ಬಿ.ನಾಗೇಂದ್ರ ಅವರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ದೇವೇಂದ್ರಪ್ಪ ಅವರನ್ನು (ಎಸ್.ಐ. ಟಿ) ಅಧಿಕಾರಿಗಳು ಇಲಾಖೆಯ ಅಧಿಕೃತ ಹಿರಿಯ ಅಧಿಕಾರಿ ಯಾಗಿರುವ ಕಾರಣ ಕರೆಸಿ ವಿಚಾರಣೆ ನಡೆಸಿದ್ದಾರೆ.
ಈ ಸಂಧರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಇಲಾಖೆ ವ್ಯಾಪ್ತಿಯಲ್ಲಿ ಬರುವ ಇನ್ನಿತರ ನಿಗಮಗಳ ಮಾಹಿತಿ ಮತ್ತು ಒಂದು ವರ್ಷದಲ್ಲಿ ಕೈಗೊಂಡ ಯೋಜನೆಗಳ ಮಾಹಿತಿ, ಹಾಗೂ ಸಚಿವರ ಅಧಿಕೃತ ಸಿಬ್ಬಂದಿಗಳ ವಿವರ ಹಾಗೂ ಒಂದು ವರ್ಷದ ಆರ್ಥಿಕತೆಯ ಮಾಹಿತಿ ಪಡೆದರು.
ಇನ್ನು ಈ ವೇಳೆ ಯಾವುದೇ ರೀತಿಯ ವೈಯಕ್ತಿಕ ಹಣಕಾಸಿನ ವಹಿವಾಟು ಹಾಗೂ ಹಣದ ಬಗ್ಗೆ ಚರ್ಚೆ ಆಗಿರುವುದಿಲ್ಲ ಆದರೆ ಕೆಲವರು ಸುಮಾರು 4ಕೋಟಿ 40 ಲಕ್ಷ ಹಣವನ್ನು ಆಪ್ತ ಕಾರ್ಯದರ್ಶಿಯಾಗಿದ್ದ ದೇವೇಂದ್ರಪ್ಪ ಅವರಿಗೆ ಆರೋಪಿ ಸತ್ಯನಾರಾಯಣ ವರ್ಮಾ ನೀಡಿರುತ್ತಾರೆ ,ತನಿಖೆವೇಳೆ ಪೊಲೀಸ್ ಅಧಿಕಾರಿಗಳು 4 ಕೋಟಿ ವಶಕ್ಕೆ ಪಡೆದಿರುತ್ತಾರೆ ಎಂದು ಯಾವುದೇ ಅಧಿಕೃತ ದಾಖಲೆ ಇಲ್ಲದ ಸುಳ್ಳು ಸುದ್ದಿಯೊಂದು ರಾಜ್ಯದಲ್ಲಿ ಹರಿದಾಡುತಿದ್ದು,ಎಸ್. ಐ. ಟಿ (SIT ) ಬಲ್ಲಮೂಲಗಳ ಮಾಹಿತಿ ಪ್ರಕಾರ ಆಪ್ತ ಕಾರ್ಯದರ್ಶಿ ದೇವೇಂದ್ರಪ್ಪ ಅವರಿಂದ ಹಣದ ವಿಚಾರವಾಗಲಿ, ಹಣದ ವಶಕ್ಕೆ ಪಡೆಯುವ ಕಾರ್ಯವಾಗಲಿ ನೆಡೆದಿರುವುದಿಲ್ಲ ಎಂದು ತಿಳಿದು ಬಂದಿದೆ.