ಕಲಬುರಗಿ ಜ.25: ಕಾಂಗ್ರೆಸ್ ಪಾರ್ಟಿ ಯಾರೋ ಒಬ್ಬರಿಂದ ನಡೆಯಲ್ಲ. ಹೋಗುವವರು ಹೋಗಲಿ, ಬರುವವರು ಬರ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಅಸಮಾಧಾನಗೊಂಡು ಬಿಜೆಪಿ ಸೇರಿದ್ದ ಮಾಜಿ ಸಚಿವ ಜಗದೀಶ್ ಶೆಟ್ಟರ್, ಇದೀಗ ಲೋಕಸಭಾ ಚುನಾವಣೆ ಸಮೀಪಿಸಿದ ಬೆನ್ನಲ್ಲೇ ಮತ್ತೆ ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಕಲಬುರಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇನ್ನು ನಾವು ಗ್ರೌಂಡ್ ಗೆ ಇಳಿದಿಲ್ಲಕ. ಪ್ಲೇಯಿಂಗ್ ಎಲೆವನ್ ಡಿಸೈಡ್ ಆಗಿಲ್ಲ. ಆಗ್ಲೇ ಯಾಕೆ ಇವೆಲ್ಲ ಪ್ರಶ್ನೆ? ಇನ್ನು ಕಾದು ನೋಡಿ ಎನ್ನುವ ಮೂಲಕ ಆಪರೇಷನ್ ಹಸ್ತದ ಸುಳಿವು ನೀಡಿದ ಸಚಿವರು.
ಏನು ಅನ್ಯಾಯ ಮಾಡಿದೆವು?
ಜೆಡಿಎಸ್, ಬಿಜೆಪಿಯಿಂದ ಎಷ್ಟು ಜನ ಬರ್ತಾರೆ ನೋಡ್ತಾಯಿರಿ. ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿದೆ. ಅದಕ್ಕಾಗೇ ಈ ರೀತಿ ಮಾಡ್ತಿದ್ದಾರೆ. ರಾಜ್ಯದಲ್ಲಿ ಮೋದಿ ಕರೆನ್ಸಿ ನಡೆಯಲ್ವಾ? ಅವರು ಜೆಡಿಎಸ್ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ? ಸಿಂಗಲ್ ಆಗಿ ಎಲೆಕ್ಷನ್ ಮಾಡಲಿ ನೋಡೋಣ. ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದೆ. ಅಲ್ಲಿ ನಿರ್ಲಕ್ಷ ಮಾಡಿದ್ದಕ್ಕೆ ನಾವು ಸೂಕ್ತ ಸ್ಥಾನಮಾನ ನೀಡಿದ್ದೆವು ಮೋದಿ ಕೈ ಬಲಪಡಿಸಲು ಬಿಜೆಪಿ ಸೇರ್ಪಡೆ ಎನ್ನುವ ಶೆಟ್ಡರ್ ಹೇಳಿಕೆಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಇದೊಂದು ಪಾಠ:
ಅವರು ಯಾಕೆ ಹೋಗಿದ್ದಾರೆ ಎನ್ನೋ ಕಾರಣ ನೀಡಲಿ. ಮೋದಿ ಕೈ ಬಲಪಡಿಸೋಕೆ ಹೋಗಿದ್ದಾರೆಂದ್ರೆ ಆರು ತಿಂಗಳ ಹಿಂದೆ ಏನ್ ಆಗಿತ್ತುಕ? ಅವರಿಗೆ ಏನ್ ಅನ್ಯಾಯ ಮಾಡಿದೆವು? ಬಿಜೆಪಿ ನಿರ್ಲಕ್ಷ್ಯ ಮಾಡಿದ್ದರಿಂದಲೇ ಟಿಕೆಟ್ ಕೊಟ್ಟಿದ್ದೆವು. ಸೋತ ಮೇಲೆ ಎಂಎಲ್ ಸಿ ಮಾಡಿದೇವು ಇನ್ನೇನು ಮಾಡಬೇಕಿತ್ತು..? ರಾಜಕೀಯದಲ್ಲಿ ನಿತ್ಯ ಕಲಿಯುತ್ತಿರಬೇಕು ಎಲ್ಲವೂ ಪಾಠಗಳೇ ಎಂದರು.