ಸುವರ್ಣವಾಹಿನಿ ಸುದ್ದಿ
ಕಾರಟಗಿ. ಜ.೧೭ : ತಾಲೂಕ ಲಾರಿ ಮಾಲೀಕರ ಮತ್ತು ಸರಕು ಸಾಗಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಎ.ಪಿ.ಎಮ್.ಸಿ ಯಿಂದ ಕಾರಟಗಿ ಪೊಲೀಸ್ ಠಾಣೆಯವರೆಗೆ ಸರ್ಕಾರ ಜಾರಿಗೊಳಿಸಿದ ಹಿಟ್ ಅಂಡ್ ರನ್ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿ ಈ ಕಾಯ್ದೆ ಯನ್ನು ವಾಪಸ್ ಪಡೆಯುವಂತೆ ಘೋಷಣೆಗಳನ್ನು ಕೂಗುತ್ತಾ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪೊಲೀಸ್ ಠಾಣೆವರೆಗೆ ತೆರಳಿ ಪಿ ಐ ಸಿದ್ದರಾಮಯ್ಯ ಸ್ವಾಮಿ ಹಾಗೂ ಪಿಎಸ್ಐ ಕಾಮಣ್ಣ ಇವರಿಗೆ ಮನವಿ ಪತ್ರ ಸಲ್ಲಿಸಿದರು. ಲಾರಿ ಮಾಲಕರ ಹಾಗೂ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಪರಸಪ್ಪ ದಾರಿ ಮನಿ ಮಾತನಾಡಿ ಜ, ೦೩- ರಂದು ಬೆಂಗಳೂರು ನಗರದಲ್ಲಿ ರಾಜ್ಯದ ಎಲ್ಲಾ ಲಾರಿ ಮಾಲೀಕರ ಸಂಘದವರು ಸಭೆ ಸೇರಿ ಕೇಂದ್ರ ಮತ್ತು ರಾಜ್ಯ ಸರಕಾರದ ವತಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಿ, ಜ ೧೭- ರಿಂದ ನಮ್ಮ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಈಡೇರಿಸುವವರೆಗೆ ಮತ್ತು ಜಾರಿಗೊಳಿಸಿದ ಹಿಟ್ ಅಂಡ್ ರನ್ ಕಾಯ್ದೆಯನ್ನು ಹಿಂಪಡೆಯುವAತೆ ನಮ್ಮ ವಾಹನಗಳನ್ನು ನಾವು ಓಡಿಸದಿರಲು ನಾವು ನಿರ್ಧರಿಸಿದ್ದೆವೆ.ಇತ್ತಿಚಿಗೆ ಕೇಂದ್ರ ಸರಕಾರವು ತಂದಿರುವ ಭಾರತೀಯ ನ್ಯಾಯ ಸಂಹಿತೆಯ ಕಾಲಂ ೧೦೬ ರ ಉಪನಿಧಿ ೧ ಮತ್ತು ೨ ನಮ್ಮ ಉದ್ದಿಮೆಯಲ್ಲಿ ಕೆಲಸ ಮಾಡುವ ಚಾಲಕರು ವ್ಯತ್ತಿಯಿಂದ ಹೋರಗುಳಿವಂತೆ ಮಾಡಿದೆ ಅದನ್ನು ಸಂಪೂರ್ಣವಾಗಿ ಕೈಬಿಡಬೇಕು
ಈ ಮೇಲ್ಕಂಡ ನಮ್ಮ ಎಲ್ಲಾ ಬೇಡಿಕೆಗಳು ಈಡೇರುವವರಗೂ ಜ,೧೭- ಮಧ್ಯರಾತ್ರಿಯಿಂದ ನಮ್ಮ ವಾಹನಗಳನ್ನು ನಾವು ಓಡಿಸುವುದಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟಾವಧಿ ಧರಣಿ ಕೂರುತ್ತೇವೆ. ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಇನ್ನು ಉಗ್ರ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರು ಮಂಗಳೂರು ಬಸವರಾಜ ಅಧ್ಯಕ್ಷರು ಪರಸಪ್ಪ ದಾರಿಮನಿ,ಉಪಾಧ್ಯಕ್ಷರು:
ರಮೇಶ,ಬಸವರಾಜ ತಳಿಗೇರಿ,ಪ್ರಧಾನ ಕಾರ್ಯದರ್ಶಿ ಶಿವುಕುಮಾರ ಚನ್ನಳ್ಳಿ,ಜಂಟಿ ಕಾರ್ಯದರ್ಶಿ ನಿಂಗನಗೌಡ ಬಿಜಕಲ್, ಖಜಾಂಚಿಬಸವರಾಜ ನರೇಗಲ್ಲ, ನಿರ್ದೇಶಕರು ವಿರೇಶ ಸಿದ್ದಾಪೂರ, ಶ್ಯಾಮ್ ಮೂರ್ತಿ ಕಟ್ಟಿಮನಿ ಬಾಸ್ಕರ ರೆಡ್ಡಿ ಉಸೇನ್ ಸಾಬ್, ಕಾರಟಗಿ ತಾಲೂಕಿನ ಎಲ್ಲಾ ಲಾರಿ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ನೂರಾರು ವಾಹನ ಚಾಲಕರು ಲಾರಿ ಮಾಲಕರು ಇದ್ದರು