ಬಳ್ಳಾರಿ,ಜ.7: ಸಮಾಜದಲ್ಲಿ ಯಾರೇ ವ್ಯಕ್ತಿಗೆ ಅನ್ಯಾಯವಾದರೇ ಪೊಲೀಸ್ ಠಾಣೆ ಮೆಟ್ಟಿಲೇರಿದರೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ, ಆದರೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ಮಾರಣಾಂತಿಕ ಹಲ್ಲೆಗೊಳಗಾದ ಅಮಾಯಕ ಬಾಲಕನ ಮೇಲೆ ದೂರು ದಾಖಲಿಸಿ ಸಂಬAಧಿಕರಿಗೆ ಬೆದರಿಕೆ ಹಾಕಿರುವ ಮಾನಸಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿರುವ ಪೊಲೀಸ್ಠಾಣೆಯಲ್ಲಿ ಒಂದಲ್ಲ ಒಂದು ಘಟನೆಗಳು ಮರುಕಳಿಸಿರುತ್ತವೆ. ಎಲ್ಲಾ ಠಾಣೆಗಳಲ್ಲಿ ಒಂದು ಪದ್ಧತಿಯಾದರೆ ಕುರುಗೋಡು ಠಾಣೆಯಲ್ಲಿ ವಿಭಿನ್ನವಾಗಿರುವುದನ್ನು ಈ ಘಟನೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಈ ಹಿಂದೆ ಸಾರ್ವಜನಿಕರ ಎದುರೇ ಹಲ್ಲೆಮಾಡಿ, ಜಾತಿನಿಂದನೆ, ಪ್ರಾಣ ಬೆದರಿಕೆಯೊಡ್ಡಿದ್ದ ಕುರಗೋಡ್ ಠಾಣೆಯ ಪಿಎಸ್ಐ ಕೆ.ಎಚ್ ಮಣಿಕಂಠ ಸೇವೆಯಿಂದ ಅಮಾನತಗಿರುವ ಘಟನೆ ಇಲ್ಲಿ ಸ್ಮರಿಸಬಹುದು. ಠಾಣೆಗೆ ಪಿಎಸ್ಐ ಆಗಿರುವ ಸುಪ್ರೀತ್ ಜನರ ಸಮಸ್ಯೆಗಳನ್ನು ಆಲಿಸದೇ ಇರುವುದು ಖೇದಕರ ಸಂಗತಿಯಾಗಿದೆ. ಮಠಿಕಂಠನ ಹಾದಿಯಲ್ಲೇ ಈ ಪಿಎಸ್ಐ ಸುಪ್ರೀತ್ ಕೂಡಾ ಸಾಗುತ್ತಿದ್ದಾರೆಯೇ ಎಂಬ ಆರೋಪಗಳು ಕೇಳಿಬರುತ್ತದೆ ಜೊತೆಗೆ ಒಂದು ಕುಟುಂಬವೊAದು ಕೂಡಾ ಪಿಎಸ್ಐ ಸುಪ್ರೀತ್ ಮೇಲೆ ಗಂಭೀರ ಆರೋಪ ಮಾಡಿರುವುದು ಚರ್ಚೆಯ ವಿಷಯವಾಗಿದೆ.
ಬಳ್ಳಾರಿಯಲ್ಲಿ ಹಲ್ಲೆಗೊಳಗಾದ ಬಾಲಕ ಹನುಮಂತು ತಾಯಿ ಹುಲಿಗೆಮ್ಮ, ಚಿಕ್ಕಪ್ಪ ರಾಮಾಂಜಿನೇಯಲು, ಮತ್ತಿತರ ಕುಟುಂಬಸ್ಥರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಓರ್ವಾಯಿ ಗ್ರಾಮದಲ್ಲಿ ಕೇವಲ ರೂ. ೨೦ ಚಿಲ್ಲರೆ ಹಣಕ್ಕೆ ಗಲಾಟೆಯಾಗಿ ೧೦ನೇ ತರಗತಿ ವಿದ್ಯಾರ್ಥಿ ಹನುಮಂತ(೧೫) ಮೇಲೆ ದುಷ್ಕರ್ಮಿಗಳಿಬ್ಬರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ, ಹಲ್ಲೆಕೋರರ ವಿರುದ್ಧ ದೂರು ದಾಖಲಿಸಿದರು ಇಲ್ಲಿಯವರೆಗೆ ಅವರನ್ನು ಬಂಧಿಸದೇ ಕುರುಗೋಡು ಪೊಲೀಸ್ ಠಾಣೆಯ ಪಿಎಸ್ಐ ಸುಪ್ರೀತ್ ನಿರ್ಲಕ್ಷತನ ತೋರಿ ಅಮಾಯಕ ಹನುಮಂತನಿಗೆ ಅನ್ಯಾಯ ಮಾಡಿದ್ದಾರೆ ಕೂಡಲೇ ಇಬ್ಬರೂ ಹಲ್ಲೇ ಕೋರರನ್ನು ಬಂಧಿಸಿ ನನ್ನ ಮಗನಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ನನ್ನ ಮಗನಾದ ಹನುಮಂತು ಅವರ ತಾತನಿಗೆ ಊಟ ನೀಡಲೆಂದು ಹೋದಾಗ ಪೆಟ್ರೋಲ್ ಬಂಕ್ನಲ್ಲಿ ತೇವಾಂಶದಿAದ ಕೂಡಿದ ೨೦ ರು. ನೋಟಿನ ಕುರಿತು ಮಾವಿನಹಳ್ಳಿಯ ಪಂಪಾಪತಿ(೩೪) ಮತ್ತು ಹೊಸ ದರೋಜಿಹೊನ್ನಪ್ಪ(೩೬) ಎಂಬುವರು ಕಂಠಪೂರ್ತಿ ಕುಡಿದು ಬಂದು ಪೆಟ್ರೋಲ್ ಬಂಕ್ನಲ್ಲಿದ್ದ ಹನುಮಂತಪ್ಪನವರ ತಾತನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ, ಆಗ ಸ್ಥಳದಲ್ಲಿದ್ದ ಹನುಮಂತಪ್ಪನು ಜಗಳ ಬಿಡಿಸಲು ಹೋದಾಗ ಪಂಪಾಪತಿ ಮತ್ತು ಹೊನ್ನಪ್ಪ ಇಬ್ಬರು ಸೇರಿಕೊಂಡು ಹನುಮಂತ ಎಂಬ ೧೦ನೇ ತರಗತಿಯ ವಿದ್ಯಾರ್ಥಿಗೆ ಮನಸ್ಸೋ ಇಚ್ಛೆ ಥಳಿಸಿದ್ದಾರೆ, ಇದರಿಂದ ವಿದ್ಯಾರ್ಥಿಯು ತೀವ್ರವಾದ ಒಳ ಪೆಟ್ಟಿನಿಂದ ಅಸ್ವಸ್ಥಗೊಂಡಿದ್ದಾನೆ. ಅವನನ್ನು ಕರೆದುಕೊಂಡು ಹೋಗಿ ಕುರುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾದಾಗ ಅಲ್ಲಿನ ಸಿಬ್ಬಂದಿ ಹನುಮಂತಪ್ಪನಿಗೆ ತೀವ್ರವಾದ ಹಲ್ಲೆಯಾಗಿದೆ ಇವನನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಾವು ದೂರು ದಾಖಲಿಸುತ್ತೇವೆ ಎಂದು ಹೇಳಿ ಕಳುಹಿಸಿರುತ್ತಾರೆ, ಮತ್ತು ಹೊನ್ನಪ್ಪ ಮತ್ತು ಹಂಪಾಪತಿ ಎಂಬುವರ ಮೇಲೆ ಎಫ್ಐಆರ್ ದಾಖಲಿಸಿರುತ್ತಾರೆ.
ಆದರೆ, ಈ ಇಬ್ಬರು ಹಲ್ಲೆಕೋರರನ್ನು ಠಾಣೆಗೆ ಕರೆಸಿಕೊಂಡ ಪಿಎಸ್ಐ ಸುಪ್ರೀತ್ ರಾಜಕೀಯ ಒತ್ತಡಕ್ಕೆ ಮಣಿದು ಹಲ್ಲೆಗೊಳಗಾದ ವಿದ್ಯಾರ್ಥಿ ಹನುಮಂತಪ್ಪ ಮತ್ತು ತಾತನ ವಿರುದ್ಧ ಪ್ರಕರಣವನ್ನು ದಾಖಲಿಸಿ ಹಲ್ಲೇಕೋರರನ್ನು ಬಿಟ್ಟು ಕಳಿಸಿದ್ದಾರೆ. ಇದು ಮೇಲ್ನೋಟಕ್ಕೆ ಏಕಪಕ್ಷವಾದ ಮತ್ತು ರಾಜಕೀಯದಿಂದ ಕೂಡಿದ ಪಿತೂರಿಯಾಗಿದೆ, ಕೇವಲ ೧೫ವರ್ಷದ ವಿದ್ಯಾರ್ಥಿ ಹನುಮಂತಪ್ಪ ಮತ್ತು ಸುಮಾರು ೬೫ ವರ್ಷದ ಹಿರಿಯ ನಾಗರಿಕರಾದ ಅವರ ತಾತ ಪಂಪಾಪತಿ ಮತ್ತು ಹೊನ್ನಪ್ಪ ಅವರ ಮೇಲೆ ಹಲ್ಲೆ ಮಾಡಲು ಸಾಧ್ಯವೇ ಇಲ್ಲ ಆದರೂ ಪೊಲೀಸರು ವಿದ್ಯಾರ್ಥಿ ಹನುಮಂತನ ಮೇಲೆ ಎಫ್ಐಆರ್ ದಾಖಲಿಸಿ ಅವನ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿದ್ದಾರೆ, ನನಗೆ ಇರುವುದು ಒಬ್ಬನೇ ಮಗ ಮತ್ತು ನನ್ನ ಪತಿ ವಿಕಲಚೇತನರಾಗಿದ್ದು ಕುರುಗೋಡು ಪೊಲೀಸ್ ಠಾಣೆಯ ಪಿಎಸ್ಐ ಸುಪ್ರೀತ್ ನನಗೆ ಮತ್ತು ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಮತ್ತು ಹನುಮಂತನ ರಕ್ಷಣೆಗೆ ನಿಂತ ಅವರ ಚಿಕ್ಕಪ್ಪ ರಾಮಾಂಜನೇಯ ರವರನ್ನು ಕುರಿತು ಕುರುಗೋಡು ಠಾಣೆಯ ಪಿಎಸ್ಐ ಸುಪ್ರೀತ್ ಅವರು ನೀನು ಇದೇ ರೀತಿ ಪದೇಪದೇ ಠಾಣೆಗೆ ಬಂದರೆ ನಿನ್ನ ಮೇಲೆ ರೌಡಿಶೀಟ್ ತೆಗೆಯುತ್ತೇನೆ ಎಂದು ಬೆದರಿಕೆವೊಡ್ಡಿದ್ದಾರೆ ಎಂದು ಆರೋಪಿಸಿದ ಹುಲಿಗೆಮ್ಮ ಕೂಡಲೇ ಪಂಪಾಪತಿ ಮತ್ತು ಹೊನ್ನಪ್ಪ ರವರನ್ನು ಬಂಧಿಸಬೇಕೆAದು ಎಸ್ಪಿ ಡಾ||ಶೋಭಾರಾಣಿ ಮತ್ತು ಐಜಿಪಿ ಲೋಕೇಶ್ಕುಮಾರ್ ಭೇಟಿಮಾಡಿ ಮನವಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಓರ್ವಾಯಿ ಗ್ರಾಮದ ತಿಮ್ಮಪ್ಪ, ಗೋವಿಂದಪ್ಪ, ರಾಮಾಂಜನಿ ಸೇರಿದಂತೆ ಇತರರಿದ್ದರು
ಪಿಎಸ್ಐ ಮೇಲೆ ಕಾನೂನು ಕ್ರಮಕೈಗೊಳ್ಳಿ: ಯು.ಉರುಕುಂದ ಆಗ್ರಹ
ಬಳ್ಳಾರಿ ಜಿಲ್ಲೆಯ ಕುರುಗೋಡು ವ್ಯಾಪ್ತಿಯ ಎಮ್ಮಿಗನೂರು ಎಸ್.ವಿ.ಎಂ.ಶಾಲೆಯ ೧೦ನೇ ತರಗತಿಯ ಕೆ.ವಿ.ಹನುಮಂತ ಎನ್ನುವ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದ್ದು ಪೊಲೀಸರ ಈ ಕ್ರಮ ಸರಿಯಲ್ಲ ಎಂದು ಕರ್ನಾಟಕ ಮಾನವ ಹಕ್ಕುಗಳ ಕಾವಲು ಸಮಿತಿ ಸಂಸ್ಥಾಪಕ ಅಧ್ಯಕ್ಷ ಯು.ಉರುಕುಂದ ಆಗ್ರಹ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಯನ್ನು ಮನಬಂದAತೆ ಥಳಿಸಿದ್ದ ಆರೋಪಿಗಳನ್ನು ಕೂಡಲೇ ಬಂಧಿಸಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸುವ ಜೊತೆಗೆ ಪಿಎಸ್ಐ ಸುಪ್ರೀತ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕುರುಗೋಡು ಪೊಲೀಸರ ಕ್ರಮ ಸರಿಯಲ್ಲ: ವಿ.ರಾಮಾಂಜಿನೇಯಲು
ಪೊಲೀಸರು ರಾಜಕೀಯ ಪ್ರೇರಿತವಾಗಿ ಹಲ್ಲೆ ನಡೆಸಿದವರಿಂದಲೇ ಕೌಂಟರ್ ಪ್ರಕರಣ ದಾಖಲಿಸಿದ್ದು, ಇದರಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಕಳಂಕ ಮೂಡಿಸಲು ಹೊರಟಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಬಳ್ಳಾರಿ ಜಿಲ್ಲಾ ಭೋವಿ ವಡ್ಡರ ಸಂಘದ ಜಿಲ್ಲಾಧ್ಯಕ್ಷ ವಿ.ರಾಮಾಂಜಿನೇಯಲು ಒತ್ತಾಯಿಸಿದ್ದಾರೆ. ದಾಖಲಾದ ಎಫ್ಐಆರ್ನಲ್ಲಿ ವಿದ್ಯಾರ್ಥಿ ಮೇಲೆ ಮತ್ತು ಅವರ ಅಜ್ಜನ ಹೆಸರು ಕೈಬಿಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
: ಘಟನೆಯನ್ನು ಪರಿಶೀಲನೆ ಮಾಡಿ ಹನುಮಂತ ಮತ್ತು ಆತನ ಕುಟುಂಬಕ್ಕೆ ಅನ್ಯಾಯ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ
ಲೋಕೇಶ್ ಕುಮಾರ್. ಐಜಿಪಿ.
ಬಳ್ಳಾರಿ ವಲಯ.