ಬಳ್ಳಾರಿ, ಏ.10: ಶ್ರೀಮತಿ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಬಿ ಪಿ ಎಸ್ ಸಿ ಪದವಿ ಪೂರ್ವ ಕಾಲೇಜಿನ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಿಂದ ಮನಶ್ವಿನಿ ಬಿ ಶೇ 98.6 (592/600) ಹಾಗೂ ವಿಜ್ಞಾನ ವಿಭಾಗದಲ್ಲಿ ಪವಿತ್ರ ಪಿ ಶೇ. 97.3 (584/600) ಅಂಕಗಳನ್ನು ಪಡೆದಿದ್ದಾರೆ.
ಈ ಕಾಲೇಜಿನಲ್ಲಿ ಒಟ್ಟು 119 ವಿದ್ಯಾರ್ಥಿಗಳು ಡಿಸ್ಟಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದು, 51 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100 ಕ್ಕೆ 100 ಅಂಕಗಳು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಫಲಿತಾಂಶ ಶೇ 95 ಬಂದಿದೆಂದು ಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷ ಡಾ. ಯಶವಂತ ಭೂಪಾಲ್, ಪ್ರಾಂಶುಪಾಲೆ ಹೆಚ್. ತ್ರಿಪುರಾಂಬ ತಿಳಿಸಿದ್ದಾರೆ.
ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನಮ್ಮ ಸಂಸ್ಥೆಯ ಧೈಯವಾಗಿದೆಂದು ಅವರು ಹೇಳಿದ್ದಾರೆ.