ಹಂಪಿ,ಫೆ.03-ಇತಿಹಾಸ ಪ್ರಸಿದ್ಧ ಹಂಪಿ ಉತ್ಸವ-2024ರ ಅಂಗವಾಗಿ ಸಾಸಿವೆ ಕಾಳು ಗಣಪ ವೇದಿಕೆಯಲ್ಲಿ ಆಯೋಜಿಸಿದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿ.ಚಂದ್ರಕಾಂತ ಅವರ ಗಜಲ್ ಗಾಯನವು ನೆರೆದ ಎಲ್ಲ ಪ್ರೇಕ್ಷಕರನ್ನು ರಸದೌತಣ ನೀಡಿತಲ್ಲದೆ ಎಲ್ಲರನ್ನು ರಂಜಿಸಿತು.
ಮಾಲಕಂಸ ರಾಗದಲ್ಲಿ ಸುದರ್ಶನ ಫಾಕಿ ಅವರು ವಿರಚಿಸಿದ “ಶಾಯದ್ ಮೈಂ ಜಿಂದಗಿ ಕೀ………” ಗಜಲ್
ಮೂಲಕ ಗಾಯನವನ್ನು ಪ್ರಾರಂಭಿಸಿದರು. ನಂತರ ದರ್ಬಾರಿ ರಾಗದಲ್ಲಿ ಭೂಪಿಂದರ್ ಸಿಂಗ್ ಅವರು ರಚಿಸಿದ “ಆಸಮಾಂ ಸೇ ಉತಾರಾ ಗಯಾ…” ಗಜಲ್ ಸುಶ್ರಾವ್ಯವಾಗಿ ಹಾಡಿ ಎಲ್ಲರ ಗಮನ ಸೆಳೆದರು.
ಸಂಗೀತ ಶಿಕ್ಷಕ ಗುರುಶಾಂತಯ್ಯ ಸ್ಥಾವರಮಠ ಹಾರ್ಮೋನಿಯಂ ಸಾಥ್ ಮತ್ತು ವೀರಭದ್ರಯ್ಯ ಸ್ಥಾವರಮಠ ಅವರು ತಬಲಾ ಸಾಥ್ ನೀಡಿದರು.