ಬಳ್ಳಾರಿ,ಮಾ.26 : ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಸಾರ್ವಜನಿಕರ ಕೆಲಸಗಳಿಗಾಗಿ ವಿವಿಧ ತಾಲ್ಲೂಕುಗಳಲ್ಲಿ ಪ್ರತಿ ತಿಂಗಳು ಶಿಬಿರ(ಕ್ಯಾಂಪ್)ಗಳನ್ನು ಆಯೋಜಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ ಗಿರಿ ತಿಳಿಸಿದ್ದಾರೆ.
ಸಂಡೂರು-ಪ್ರತಿ ತಿಂಗಳು 10ನೇ ತಾರೀಖು, ಕಂಪ್ಲಿ-ಪ್ರತಿ ತಿಂಗಳು 15ನೇ ತಾರೀಖು ಮತ್ತು ಸಿರುಗುಪ್ಪ-ಪ್ರತಿ ತಿಂಗಳು 20ನೇ ತಾರೀಖುಗಳಂದು ನಡೆಯಲಿದೆ.
ಈ ಹಿಂದೆ ಸಿರುಗುಪ್ಪ ತಾಲ್ಲೂಕಿನಲ್ಲಿ ಪ್ರತಿ ತಿಂಗಳು 5, 20 ರಂದು ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು. ಈಗ ಸಂಡೂರು, ಕಂಪ್ಲಿ ತಾಲ್ಲೂಕು ವಿಜಯನಗರ ಜಿಲ್ಲೆಯ ಹೊಸಪೇಟೆ ಕಚೇರಿಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲಾ ಕಚೇರಿಗೆ ಸೇರ್ಪಡೆಯಾದ ಕಾರಣ ತಾಲ್ಲೂಕುಗಳು ಕಚೇರಿ ವ್ಯಾಪ್ತಿಗೆ ಒಳಪಡುವುದರಿಂದ ಆಯಾ ತಾಲ್ಲೂಕುಗಳಲ್ಲಿ ಪ್ರತಿ ತಿಂಗಳು ಶಿಬಿರ(ಕ್ಯಾಂಪ್)ಗಳನ್ನು ಆಯೋಜಿಸಲಾಗುವುದು.
ಆಯಾ ದಿನಗಳಂದು ಸಾರ್ವತ್ರಿಕ ರಜೆಗಳು ಬಂದಲ್ಲಿ ಮುಂದಿನ ಕೆಲಸದ ದಿನಗಳಲ್ಲಿ ಶಿಬಿರ(ಕ್ಯಾಂಪ್)ಗಳನ್ನು ಆಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.