ಸುವರ್ಣವಾಹಿನಿ ಸುದ್ದಿ
ಬಳ್ಳಾರಿ, ಜ. ೨೫: ಕುರುಗೋಡು, ಬಗ್ಗೂರು, ರಾರಾವಿ ಮತ್ತು ಕರೂರು ಗ್ರಾಮಗಳಲ್ಲಿಯ ವಸತಿ ಶಾಲೆಗಳ ಸ್ಥಳಾಂತರಕ್ಕಾಗಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಕುರುಗೋಡಿನ ಸಿನಿಮಾ ಟಾಕೀಸಿನಲ್ಲಿ ಮತ್ತು ಬಗ್ಗೂರಿನ ಮಠದಲ್ಲಿದ್ದ ವಸತಿ ಶಾಲೆ ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಗೊAಡಿವೆ.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಬೆಳಗಾವಿಯಲ್ಲಿ ನಡೆದಿದ್ದ ವಿಧಾನಸಭೆಯ ಪರಿಷತ್ ಸಮಾವೇಶದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಪ್ರಶ್ನಿಸಿ, ಕುರುಗೋಡು ಪಟ್ಟಣದ ಸಿನಿಮಾ ಮಂದಿರದಲ್ಲಿ ನಡೆಯುತ್ತಿರುವ ಗಾಂಧಿತತ್ವ ಶಾಲೆಯ ಕುರಿತು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಪ್ರಕಟವಾಗಿದೆ. ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ತಕ್ಷಣವೆ ಬೇರೆಡೆ ಶಾಲೆಯನ್ನು ಸ್ಥಳಾಂತರಿಸಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಬೇಕು ಎಂದು ಕೋರಿದ್ದರು.
ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಡಾ. ಎಚ್.ಸಿ. ಮಹದೇವಪ್ಪ ಅವರು ಸ್ಪಂದಿಸಿ, ಕುರುಗೋಡು ಗಾಂಧಿತತ್ವ ಶಾಲೆಯನ್ನು ಕೋಳೂರುನ ಸುಸಜ್ಜಿತ ಮತ್ತು ಎಲ್ಲಾ ಸೌಲಭ್ಯಗಳುಲ್ಲ ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಮಾಡಿಸಿ, ಸ್ವಂತ ಕಟ್ಟಡಕ್ಕಾಗಿ ಗೆಣಿಕೆಹಾಳು ಗ್ರಾಮದಲ್ಲಿ ೭ ಎಕರೆ ಸರ್ಕಾರಿ ಭೂಮಿಯನ್ನು ಸರ್ಕಾರ ನೀಡಿ ಆದೇಶ ಮಾಡಿದ್ದಾರೆ.
ಸಿರುಗುಪ್ಪ ತಾಲೂಕಿನ ಬಗ್ಗೂರು ಗ್ರಾಮದ ಮಠದಲ್ಲಿ ನಡೆಯುತ್ತಿದ್ದ ಮೊರಾರ್ಜಿ ದೇಸಾಯಿ ಶಾಲೆಯು ನಿರ್ಮಾಣಗೊಂಡಿದ್ದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊAಡಿದೆ. ಕರೂರು ಮತ್ತು ರಾರಾವಿ ವಸತಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು, `ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ವಸತಿ ಶಾಲೆಗಳ ಸ್ಥಳಾಂತರಕ್ಕೆ ವಿಧಾನಪರಿಷತ್ನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದೆ. ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಸ್ಪಂದಿಸಿ, ವಸತಿ ಶಾಲೆಗಳ ಸ್ಥಳಾಂತರ ಮತ್ತು ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.