ಬಳ್ಳಾರಿ: ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಹಾಗೂ ಬ್ರಾಹ್ಮಣ ಸಮುದಾಯ ಹಿರಿಯ ಮುಖಂಡ ಗಣೇಶ್ ರಾವ್ (94) ಅವರು ಸೋಮವಾರ ನಿಧನರಾದರು. ಮೃತರು ಅಪಾರ ಬಂಧು ಬಳಗವನ್ನು ಹೊಂದಿದ್ದು, ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಬಂಧುಗಳು, ಸಮುದಾಯ ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಮೃತರ ಆತ್ಮಕ್ಕೆ ದೇವರು ಶಾಂತಿ, ನೆಮ್ಮದಿ ನೀಡಲಿ, ಕುಟುಂಬದ ಸದಸ್ಯರಿಗೆ ದುಖಃ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು. ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ಆರ್.ಪ್ರಕಾಶ್ ರಾವ್, ಉಪಾಧ್ಯಕ್ಷ ಡಾ.ಶ್ರೀನಾಥ್ ಸೇರಿದಂತೆ ಸಮುದಾಯದ ಅಪಾರ ಬಂಧುಗಳು ಮೃತರ ಆತ್ಮಕ್ಕೆ ದೇವರು ಶಾಂತಿ ನೆಮ್ಮದಿ ನೀಡಲಿ, ಕುಟುಂಬದ ಸದಸ್ಯರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.