ಬಳ್ಳಾರಿ.ಮಾ.25: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಭಾರತ್) ಪಕ್ಷದಿಂದ ಪೆನ್ ಗುರುತಿನ ಅಧಿಕೃತ ಚಿಹ್ನೆಯಡಿಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ಪಕ್ಷದ ರಾಜ್ಯ ಮುಖಂಡರಾದ ಡಾ.ಎನ್ ಮೂರ್ತಿ ತಿಳಿಸಿದರು.
ಅವರು ನಗರದ ಡಾ.ರಾಜ್ಕುಮಾರ್ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಮತ್ತು ಸಂವಿಧಾನ ಜಾರಿ ಜನಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟು ಹಾಕಿದೆ ಆರ್.ಪಿ.ಐ (ಭಾರತ್) ಪಕ್ಷವು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷವಾಗಿ ಕೆಲಸ ಮಾಡಿದ ಸಂದರ್ಭವಿತ್ತು, ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನವನ್ನು ಸಮರ್ಪಕವಾಗಿ ಜಾತಿ ಮಾಡಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ, ಸಂವಿಧಾನವನ್ನು ಸಮಪರ್ಕವಾಗಿ ಜಾರಿಗೊಳಿಸುವುದು ನಮ್ಮ ಪಕ್ಷದ ಮುಖ್ಯ ಗುರಿ, ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲದೇ ಹೋಗಬಹುದು ಆದರೆ ಭ್ರಷ್ಟಚಾರಯುಕ್ತ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವುದು ನಮ್ಮ ಆದ್ಯತೆಯಾಗಿದೆ, ಸಂಸತ್ ಚುನಾವಣೆಯಲ್ಲಿ ಮತದಾರರು ಹಣ ಮತ್ತು ಅಗ್ಗದ ಮದ್ಯದ ಅಮಿಷಕ್ಕೆ ಒಳಗಾಗದೇ ಪ್ರಬುದ್ಧವಾಗಿ ಮತಚಲಾಣೆ ಮಾಡಬೇಕೆಂದರು.
ರಾಜ್ಯ ಸರ್ಕಾರ ಎಸ್.ಸಿ.ಪಿ/ಎಸ್.ಪಿ.ಟಿ.ಸಿ ಯೋಜನೆಯ ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಿದೆ, ಇದು ನಿಲ್ಲಬೇಕು, ಕೇಂದ್ರ ಸರ್ಕಾರ ಎಸ್.ಸಿ ವಿದ್ಯಾರ್ಥಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿ ವೇತನವನ್ನು ತಡೆಹಿಡಿದಿದ್ದಾರೆ, ಈ ಎರಡು ಪಕ್ಷಗಳು ಪರಿಷ್ಟರ ವಿರೋಧಿಗಳಾಗಿವೆ, ಕಾರಣ ನಮ್ಮ ಆರ್.ಪಿ.ಐ (ಭಾರತ್) ಪಕ್ಷಕ್ಕೆ ಮತ ನೀಡಿ ಎಂದರು.
ಏಪ್ರೆಲ್ 15 ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಡಾ. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಜಯಂತಿಯAದು ಡಿ.ಎಸ್.ಎಸ್ ನ ಐವತ್ತನೇ ವರ್ಷದ ವರ್ಷಾಚರಣೆಯನ್ನು ಹಮ್ಮಿಕಕೊಳ್ಳಲಾಗಿದೆ ಆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಎಸ್.ಎಸ್ ಜಿಲ್ಲಾಧ್ಯಕ್ಷ ಎಚ್ ದಾನಪ್ಪ ಗುತ್ತೇವ್ವರ್, ವಿಭಾಗೀಯ ಕಾರ್ಯದರ್ಶಿ ಕೊಂಡಯ್ಯ, ಸಿರುಗುಪ್ಪ ತಾಲೂಕು ಅಧ್ಯಕ್ಷ ಯಲ್ಲಪ್ಪ, ನಾಗಲಿಂಗಪ್ಪ, ಕುರುಗೋಡು ತಾಲೂಕು ಅಧ್ಯಕ್ಷ ಈರಣ್ಣ, ಬಳ್ಳಾರಿ ನಗರಾಧ್ಯಕ್ಷ ರಾಜ, ಮುಖಂಡರಾದ ಮನು, ಈಶ್ವರ್, ಮನೋಹರ್ ಅರ್ಜುನ್, ಸೇರಿದಂತೆ ಇತರರಿದ್ದರು.