ಚೆನ್ನೈ: ಚುನಾವಣೆ ನಿಮಿತ್ತ ತಮಿಳುನಾಡಿನ ತಿರುನಲ್ವೇಲಿಗೆ ತೆರಳುತ್ತಿದ್ದ ಮೂವರಿಂದ ಫ್ಲೈಯಿಂಗ್ ಸ್ಕ್ವಾಡ್ ತಂಡ 4 ಕೋಟಿ ರೂಪಾಯಿ ವಶಪಡಿಸಿಕೊಂಡಿದೆ ಎಂದು ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈಮಧ್ಯೆ, ನಾಗೇಂದ್ರನ್ ರಾಜ್ಯದಲ್ಲಿ ಮತದಾರರಿಗೆ ಹಣ ಹಂಚಲು ಯೋಜಿಸಿದ್ದಾರೆ ಎಂದು ಆರೋಪಿಸಿರುವ ಆಡಳಿತಾರೂಢ ಡಿಎಂಕೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ನೈನಾರ್ ನಾಗೇಂದ್ರನ್ ಅವರು ಮತದಾರರಿಗೆ ಹಂಚಲು ಹಲವು ಕೋಟಿಗಳಷ್ಟು ಹಣವನ್ನು ರಹಸ್ಯ ಸ್ಥಳಗಳಲ್ಲಿ ಸಂಗ್ರಹಿಸಿರುವ ಶಂಕೆ ಇದೆ ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್ಎಸ್ ಭಾರತಿ ತಮಿಳುನಾಡು ಸಿಇಒ ಸತ್ಯಬ್ರತ ಸಾಹೂ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಾಗೇಂದ್ರನ್ ಅವರಿಗೆ ಸೇರಿದ ಎಲ್ಲ ಸ್ಥಳಗಳಲ್ಲಿ ಶೋಧ ನಡೆಸಬೇಕು ಎಂದು ಪಕ್ಷ ಒತ್ತಾಯಿಸಿದೆ.