ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಏ.04: ಆಕಸ್ಮಿಕ ಬೆಂಕಿಯಿAದ ಮನೆಯಲ್ಲಿದ್ದ ದವಸ ಧಾನ್ಯಗಳು ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಕರುಕಲಾಗಿದ್ದ ನಿರಾಶ್ರಿತರಾದವರಿಗೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರರವರು ತಮ್ಮ ಸ್ವಂತ ನೆರವಿನಿಂದ ೧ ಲಕ್ಷ ರೂ.ಗಳನ್ನು ನೀಡಿ ಮಾನವೀಯತೆಯನ್ನು ಮರೆದಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ೩೦ನೇ ವಾರ್ಡ್ನ ಆಶ್ರಯ ಕಾಟೇಜ್ನಲ್ಲಿ ಗುರುವಾರ ರಾತ್ರಿ ಸುಮಾರಿಗೆ ಮನೆಗೆ ಬೆಂಕಿ ಹೊತ್ತಿಕೊಂಡಿತು. ಈ ಅನಿರೀಕ್ಷಿತ ಘಟನೆಯಿಂದ ಶುಕ್ರವಾರ ಬೆಳಿಗ್ಗೆ ಬಡ ಕುಟುಂಬ ರಸ್ತೆಗೆ ಬೀಳುವ ಹಂತದಲ್ಲಿತ್ತು. ಆದರೆ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಬಳ್ಳಾರಿ ಗ್ರಾಮಾಂತರ ಶಾಸಕ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರರವರು ಸಂಬAಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿ ಸರ್ಕಾರಕ್ಕೆ ಸಿಗುವ ಪರಿಹಾರವನ್ನು ನಿರಾಶ್ರಿತರಿಗೆ ವಿತರಿಸುವಂತೆ ಹೇಳಿದ್ದಾರಲ್ಲದೇ, ತಮ್ಮ ಸ್ವಂತ ನೆರವಿನಿಂದ ೧ ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮಾಂತರ ಶಾಸಕ ನಾಗೇಂದ್ರ ಅವರ ಕಾರ್ಯಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಜನರು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದಭ್ದಲ್ಲಿ ಪಾಲಿಕೆಯ ಆಯುಕ್ತ ಖಲಿಲ್, ಆಪ್ತಕಾರ್ಯದರ್ಶಿ ಚೇತನ್ಕುಮಾರ್, ಪಾಲಿಕೆ ಸದಸ್ಯ ಆಸೀಪ್ ಇದ್ದರು.