ಸಾಧು ಕೋಕಿಲ ‘ಶ್’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದರು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಉಪೇಂದ್ರ. ಈ ಸಿನಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಐಡಿಯಾ ಬಂದಿದ್ದು ಉಪೇದ್ರ ಅವರಿಗೆ. ಅಲ್ಲಿಂದ ಸಾಧು ಕೋಕಿಲ ಅವರ ನಟನಾ ಜರ್ನಿ ಶುರುವಾಯಿತು.
ಸಾಧು ಕೋಕಿಲ (Sadhu Kokila) ಅವರು ಖ್ಯಾತ ಹಾಸ್ಯ ಕಲಾವಿದರು. ಅವರು ತೆರೆಮೇಲೆ ಮಾಡೋ ಹಾಸ್ಯಕ್ಕೆ ಎಂಥವರಾದರೂ ಒಮ್ಮೆ ನಕ್ಕೇ ನಗುತ್ತಾರೆ. ಅವರು ತೆರೆಮೇಲೆ ಬಂದರೆ ಸಾಕು ಭರ್ಜರಿ ಶಿಳ್ಳೆ ಬೀಳುತ್ತದೆ. ಇದು ಅವರು ಕನ್ನಡದಲ್ಲಿ ಮಾಡಿರೋ ಹವಾ. ಸಾಧು ಕೋಕಿಲ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕನ್ನಡದಲ್ಲಿ ಮೊದಲಿನಿಂದಲೂ ಒಂದೇ ರೀತಿಯ ಬೇಡಿಕೆ ಉಳಿಸಿಕೊಂಡು ಬಂದ ನಟರಲ್ಲಿ ಇವರಿಗೂ ಸ್ಥಾನ ಇದೆ. ಅವರು ಸಿನಿಮಾ ರಂಗಕ್ಕೆ ಬಂದಿದ್ದು ಹಾಸ್ಯ ನಟರಾಗಿ. ನಂತರ ಅವರು ಉಪೇಂದ್ರ ಸಿನಿಮಾದಲ್ಲಿ ಬಣ್ಣ ಹಚ್ಚಿ ಹಾಸ್ಯ ನಟರಾದರು. ಎನೋ ಆಗಬೇಕು ಎಂದು ಕನಸು ಕಂಡಿದ್ದ ಅವರು ಇನ್ನೇನೋ ಆದರು. ತಮ್ಮನ್ನು ತಾವೇ ಟೀಕೆ ಮಾಡಿಕೊಂಡು ಇತರರನ್ನು ನಗಿಸಿದರು ಸಾಧು. ಅವರ ಹೆಸರು ಮೊದಲು ಬೇರೆಯೇ ಇತ್ತು. ಅವರ ಹೆಸರನ್ನು ಬದಲಾಯಿಸಿದ್ದು ಉಪೇಂದ್ರ.
ಸಾಧು ಕೋಕಿಲ ಅವರು ‘ಶ್’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಉಪೇಂದ್ರ ಅವರು. ಈ ಸಿನಮಾ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಸಾಧು ಕೋಕಿಲ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಐಡಿಯಾ ಬಂದಿದ್ದು ಉಪೇದ್ರ ಅವರಿಗೆ. ಅಲ್ಲಿಂದ ಸಾಧು ಕೋಕಿಲ ಅವರ ನಟನಾ ಜರ್ನಿ ಶುರುವಾಯಿತು. ‘ಶ್’ ಸಿನಿಮಾ ಈಗಲೂ ಜನಮಾನಸದ ಫೇವರಿಟ್ ಲಿಸ್ಟ್ನಲ್ಲಿ ಇದೆ.
ನಾನು ಉಪೇಂದ್ರ ಅವರಿಗೆ ಪರಿಚಯಗೊಂಡಿದ್ದು ವಿ. ಮನೋಹರ್ ಅವರಿಂದ. ಶ್ ಸಂಗೀತ ಸಂಯೋಜನೆಗೆ ತಿಂಗಳಾನುಗಟ್ಟಲೆ ತೆಗೆದುಕೊಂಡಿದ್ದೆ. ಯಾವುದೇ ಟ್ಯೂನ್ ಮಾಡಿದರೂ ಉಪೇಂದ್ರ ಅವರಿಗೆ ಇಷ್ಟವೇ ಆಗುತ್ತಿರಲಿಲ್ಲ. ನನ್ನನ್ನು ನೋಡಿ ಅವರು ನಗುತ್ತಿದ್ದರು. ಯಾವುದೇ ಟ್ಯೂನ್ ಕಂಪೋಸ್ ಮಾಡಿದರೂ ಮೆಚ್ಚಿಕೊಳ್ಳುತ್ತಿರಲಿಲ್ಲ. ಒಂದು ದಿನ ನನ್ನನ್ನು ಸೆಟ್ಗೆ ಆಹ್ವಾನಿಸಿದರು. ನಾನು ಹೋದೆ. ಆಗ ನನ್ನ ಬಳಿ ನಟನೆ ಮಾಡಿ ಎಂದರು. ನಾನು ನಟಿಸಿದೆ. ಅಲ್ಲಿಂದ ನನ್ನ ಅಭಿನಯದ ಪಯಣ ಆರಂಭ ಆಯಿತು. ಅವರೇ ನನ್ನ ಗಾಡ್ ಫಾದರ್’ ಎಂದು ಹೇಳಿದ್ದರು ಸಾಧು ಕೋಕಿಲ. ಈ ವಿಚಾರವನ್ನು ಅವರು ‘ವೀಕೆಂಡ್ ವಿತ್ ಎಪಿಸೋಡ್’ನಲ್ಲಿ ರಿವೀಲ್ ಮಾಡಿದ್ದರು.
ಕೋಕಿಲ ಎಂಬುದು ಬಂದಿದ್ದು ಹೇಗೆ?
ಕೋಕಿಲ ಎಂದರೆ ಕೋಗಿಲೆ. ಕೋಗಿಲೆ ಚೆನ್ನಾಗಿ ಹಾಡತ್ತದೆ. ಹೀಗಾಗಿ, ಸಾಧು ಹೆಸರಿಗೆ ಕೋಕಿಲ ಸೇರಿಸಿದರು ಉಪೇಂದ್ರ. ‘ನಾನು ಚೆನ್ನಾಗಿ ಮ್ಯೂಸಿಕ್ ಮಾಡುತ್ತೇನೆ ಎಂಬ ಕಾರಣಕ್ಕೆ ಕೋಕಿಲ ಅಂತ ನನ್ನ ಹೆಸರಿಗೆ ಸೇರ್ಪಡೆ ಮಾಡಿದ್ದು ಉಪೇಂದ್ರ. ನನ್ನ ಹೆಸರು ಮೊದಲು ಸಾಧು ಎಂದು ಅಷ್ಟೇ ಇತ್ತು. ಕೋಗಿಲೆ ಚೆನ್ನಾಗಿ ಹಾಡುತ್ತದೆ. ನೀವು ಸೂಪರ್ ಆಗಿ ಮ್ಯೂಸಿಕ್ ಮಾಡುತ್ತೀರಾ. ಹೀಗಾಗಿ, ನನ್ನ ಹೆಸರಿಗೆ ಕೋಕಿಲ ಅನ್ನೋದನ್ನು ಸೇರಿಸಿದರು’ ಎಂದು ಅವರು ಹೇಳಿಕೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಸಾಧು ಕೋಕಿಲ ಎಂದೇ ಫೇಮಸ್ ಆಗಿದ್ದಾರೆ.