2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ 22ರ ವರೆಗೆ ನಡೆಯಲಿವೆ. ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 25 ರಿಂದ ಜೂನ್ 06ರ ವರೆಗೆ ನಡೆಯಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರು, ಫೆಬ್ರವರಿ 20: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು (2nd PUC Exam) ಮಾರ್ಚ್ 1 ರಿಂದ 22ರ ವರೆಗೆ ನಡೆಯಲಿವೆ. ಎಸ್ಎಸ್ಎಲ್ಸಿ ಪರೀಕ್ಷೆಗಳು (SSLC Exam) ಮಾರ್ಚ್ 25 ರಿಂದ ಜೂನ್ 06ರ ವರೆಗೆ ನಡೆಯಲಿವೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿಕಾಸಸೌಧದಲ್ಲಿ ಪೂರ್ವಭಾವಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ವರ್ಷ 8,96,271 ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಪರೀಕ್ಷೆ ಬರೆಯತ್ತಿದ್ದಾರೆ. 2,741 ಪರೀಕ್ಷಾ ಕೇಂದ್ರಗಳಿವೆ. ಇನ್ನು 6,98, 624 ಮಕ್ಕಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮೂರೂ ಪರೀಕ್ಷೆಯಲ್ಲಿನ ಗರಿಷ್ಠ ಅಂಕ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ. ಹಾಗಂತ ಮೂರೂ ಪರೀಕ್ಷೆ ಬರೆಯವುದು ಕಡ್ಡಾಯವಲ್ಲ. ಯಾವ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯುತ್ತಾರೆ ಅದನ್ನು ಮಾತ್ರ ಪರಿಗಣನೆ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಹಾಗೂ ಎಸ್ ಎಸ್ಎಲ್ಸಿ ಪರೀಕ್ಷೆ-2 ಅನ್ನು ಎಪ್ರಿಲ್ ಕೊನೆಯ ವಾರದಲ್ಲಿ ನಡೆಸುತ್ತೇವೆ ಎಂದರು.
ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಗೆ ಹಿಜಾಬ್ ಅವಕಾಶ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ಸಮವಸ್ತ್ರ ನಿಯಮ ಪಾಲನೆ ಮಾಡಲಾಗುತ್ತೆ. ಅಡ್ವಕೇಟ್ ಜನರಲ್ ಅವರ ಸಲಹೆ ಪಡೆದು ಹಿಜಾಬ್ ವಿಚಾರ ನಿರ್ಧರಿಸಲಾಗುತ್ತದೆ ಎಂದು ಜಾರಿಕೊಂಡರು.
2024 ಎಸ್ಎಸ್ಎಲ್ಸಿ ವೇಳಾಪಟ್ಟಿ | ||
ದಿನಾಂಕ | ವಿಷಯ | ಸಮಯ |
ಕನ್ನಡ | ಬೆ. 10.15 ರಿಂದ ಮಧ್ಯಾಹ್ನ 1.30 | |
ತೆಲಗು | ಬೆ. 10.15 ರಿಂದ ಮಧ್ಯಾಹ್ನ 1.30 | |
ಹಿಂದಿ | ಬೆ. 10.15 ರಿಂದ ಮಧ್ಯಾಹ್ನ 1.30 | |
ಮರಾಠಿ | ಬೆ. 10.15 ರಿಂದ ಮಧ್ಯಾಹ್ನ 1.30 | |
25/03/2024 | ತಮಿಳು | ಬೆ. 10.15 ರಿಂದ ಮಧ್ಯಾಹ್ನ 1.30 |
ಉರ್ದು | ಬೆ. 10.15 ರಿಂದ ಮಧ್ಯಾಹ್ನ 1.30 | |
ಇಂಗ್ಲಿಷ್ | ಬೆ. 10.15 ರಿಂದ ಮಧ್ಯಾಹ್ನ 1.30 | |
ಇಂಗ್ಲಿಷ್ (NCERT) | ಬೆ. 10.15 ರಿಂದ ಮಧ್ಯಾಹ್ನ 1.30 | |
ಸಂಸ್ಕೃತ | ಬೆ. 10.15 ರಿಂದ ಮಧ್ಯಾಹ್ನ 1.30 | |
27/03/2024 | ಸಮಾಜ ವಿಜ್ಞಾನ | ಬೆ. 10.15 ರಿಂದ ಮಧ್ಯಾಹ್ನ 1.30 |
ವಿಜ್ಞಾನ | ಬೆ. 10.15 ರಿಂದ ಮಧ್ಯಾಹ್ನ 1.30 | |
ರಾಜ್ಯಶಾಸ್ತ್ರ | ಬೆ. 10.15 ರಿಂದ ಮಧ್ಯಾಹ್ನ 1.30 | |
30/03/2024 | ಹಿಂದೂಸ್ಥಾನಿ ಸಂಗೀತ | ಮ.2:00 ರಂದ ಸಾ.5:15 |
ಕರ್ನಾಟಕ ಸಂಗೀತ | ಮ.2:00 ರಂದ ಸಾ.5:15 | |
ಕರ್ನಾಟಕ ಸಂಗೀತ / ಹಿಂದೂಸ್ಥಾನಿ ಸಂಗೀತ | ಮ.2:00 ರಂದ ಸಾ.5:15 | |
02/04/2024 | ಗಣಿತ | ಬೆ. 10.15 ರಿಂದ ಮಧ್ಯಾಹ್ನ 1.30 |
ಸಮಾಜ ಶಾಸ್ತ್ರ | ಬೆ. 10.15 ರಿಂದ ಮಧ್ಯಾಹ್ನ 1.30 | |
ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕ್ ಇಂಜಿನಿಯರಿಂಗ್ – IV | ಬೆ. 10.15 ರಿಂದ ಮಧ್ಯಾಹ್ನ 1.30 | |
ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2 | ಬೆ. 10.15 ರಿಂದ ಮಧ್ಯಾಹ್ನ 1.30 | |
ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್- IV | ಬೆ. 10.15 ರಿಂದ ಮಧ್ಯಾಹ್ನ 1.30 | |
03/04/2024 | ಇಂಜಿನಯರಿಂಗ್ ಗ್ರಾಫಿಕ್ಸ್-2 | ಮ.2:30 ರಂದ ಸಾ.5:45 |
ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್- IV | ಬೆ. 10.15 ರಿಂದ ಮಧ್ಯಾಹ್ನ 1.30 | |
ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ | ಬೆ. 10.15 ರಿಂದ ಮಧ್ಯಾಹ್ನ 1.30 | |
ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ | ಬೆ. 10.15 ರಿಂದ ಮಧ್ಯಾಹ್ನ 1.30 | |
ಅರ್ಥಶಾಸ್ತ್ರ | ಬೆ. 10.15 ರಿಂದ ಮಧ್ಯಾಹ್ನ 1.30 | |
(ತೃತೀಯ ಭಾಷೆ) ಹಿಂದಿ (NCERT) | ಬೆ. 10.15 ರಿಂದ ಮಧ್ಯಾಹ್ನ 1.15 | |
ಹಿಂದಿ | ಬೆ. 10.15 ರಿಂದ ಮಧ್ಯಾಹ್ನ 1.15 | |
ಕನ್ನಡ | ಬೆ. 10.15 ರಿಂದ ಮಧ್ಯಾಹ್ನ 1.15 | |
ಇಂಗ್ಲಿಷ್ | ಬೆ. 10.15 ರಿಂದ ಮಧ್ಯಾಹ್ನ 1.15 | |
ಅರೇಬಿಕ್ | ಬೆ. 10.15 ರಿಂದ ಮಧ್ಯಾಹ್ನ 1.15 | |
ಪರ್ಶಿಯನ್ | ಬೆ. 10.15 ರಿಂದ ಮಧ್ಯಾಹ್ನ 1.15 | |
ಉರ್ದು | ಬೆ. 10.15 ರಿಂದ ಮಧ್ಯಾಹ್ನ 1.15 | |
ಸಂಸ್ಕೃತ | ಬೆ. 10.15 ರಿಂದ ಮಧ್ಯಾಹ್ನ 1.15 | |
04/04/2024 | ಕೊಂಕಣಿ | ಬೆ. 10.15 ರಿಂದ ಮಧ್ಯಾಹ್ನ 1.15 |
ತುಳು | ಬೆ. 10.15 ರಿಂದ ಮಧ್ಯಾಹ್ನ 1.15 | |
(ಎನ್.ಎಸ್.ಕ್ಯೂ. ಎಫ್ ವಿಷಯಗಳು) ಮಾಹಿತಿ ತಂತ್ರಜ್ಞಾನ | ಬೆ. 10.15 ರಿಂದ ಮಧ್ಯಾಹ್ನ 12.30 | |
ರೀಟೇಲ್ | ಬೆ. 10.15 ರಿಂದ ಮಧ್ಯಾಹ್ನ 12.30 | |
ಆಟೋಮೊಬೈಲ್ | ಬೆ. 10.15 ರಿಂದ ಮಧ್ಯಾಹ್ನ 12.30 | |
ಹೆಲ್ತ್ ಕೇರ್ | ಬೆ. 10.15 ರಿಂದ ಮಧ್ಯಾಹ್ನ 12.30 | |
ಬ್ಯೂಟಿ ಆ್ಯಂಡ್ ವೆಲ್ನೆಸ್ | ಬೆ. 10.15 ರಿಂದ ಮಧ್ಯಾಹ್ನ 12.30 | |
ಅಪರೆಲ್ ಮೇಡ್ ಅಪ್ಸ್ & ಹೋಮ್ ಫರ್ನಿಷಿಂಗ್ | ಬೆ. 10.15 ರಿಂದ ಮಧ್ಯಾಹ್ನ 12.30 | |
ಎಲೆಕ್ಟ್ರಾನಿಕ್ & ಹಾರ್ಡ್ವೇರ್ | ಬೆ. 10.15 ರಿಂದ ಮಧ್ಯಾಹ್ನ 12.30 | |
06/04/2024 | (ತೃತೀಯ ಭಾಷೆ) ಇಂಗ್ಲಿಷ್ | ಬೆ. 10.15 ರಿಂದ ಮಧ್ಯಾಹ್ನ 1.15 |
ಕನ್ನಡ | ಬೆ. 10.15 ರಿಂದ ಮಧ್ಯಾಹ್ನ 1.15 |