ಬಳ್ಳಾರಿ ಮೆ.4: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಜನಾಂಗದ ಬಿ ನಾಗೇಂದ್ರರವರನ್ನು ಹೇಗೆ ಒಗ್ಗಾಟಿ ಅತಿ ಹೆಚ್ಚಿನ ಮತ ನೀಡಿ ವಿಧಾನಸಭೆಗೆ ಆರಿಸಿ ಕಳಿಸಿದ್ದೇವೆ ಅದೇ ರೀತಿಯಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಬಿ ಶ್ರೀರಾಮುಲು ರವರಿಗೆ ಅತಿ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಸಂಸತ್ ಗೆ ಕಳಿಸಬೇಕಾದ ನಮ್ಮ ಜನಾಂಗದ ಮೇಲಿದೆ, ದವಯಟ್ಟಿ ಈ ಭಾರಿ ಶ್ರೀರಾಮುಲುಗೆ ಮತ ನೀಡಿ ಎಂದು ಎಂದು ಜನತಾ ದಳ (ಜಾತ್ಯತೀತ) ಪದಾಧಿಕಾರಿಗಳು ಮತ್ತು ಪಕ್ಷದ ಮುಖಂಡರು ಮೀನಹಳ್ಳಿ, ಕಿಟ್ಟಿ ಸೇರಿದಂತೆ ಇತರರು ಮತದಾರರಲ್ಲಿ ಮನವಿ ಮಾಡಿದರು.
ತಾಲೂಕಿನ ಮೀನಹಳ್ಳಿ ಗ್ರಾಮದಲ್ಲಿ ಲೋಕಸಭಾ ಚುನಾವಣ ಪ್ರಯುಕ್ತ ಮೈತ್ರಿ ಅಭ್ಯರ್ಥಿ ರಾಮುಲು ಪರ ಚುನಾವಣಾ ಪ್ರಚಾರವನ್ನು ಮಾಡಿ, ಶ್ರೀರಾಮುಲು ಗ್ರಾಮಾಂತರ ಪ್ರದೇಶದಲ್ಲಿ ಈ ಹಿಂದ ಶಾಸಕರಾಗಿ ಸಂಸದರಾಗಿ ಮತ್ತು ಸಚಿವರಾಗಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅವರಿಗೆ ನೀವು ಮತ ನೀಡಿ ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳಿಸಿಕೊಡೋಣ ಎಂದರು.
ಸಂಸತ್ ನಲ್ಲಿ ಬಳ್ಳಾರಿ ಜಿಲ್ಲೆಯ ಪರವಾಗಿ ಧ್ವನಿ ಎತ್ತಿ ನೆನೆಗುದಿಗೆ ಬಿದ್ದ ಕೇಂದ್ರ ಸರ್ಕಾರದ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ, ಕಾರಣ ಅವೆರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಪ್ಪ ಕಿಟ್ಟಿ ವಂಡ್ರೀ ಎಲ್ಲನಗೌಡ ಕಿರಣ್ ಕುಮಾರ್ ವೀರೇಶ್ ಸಿದ್ದು ಹೆಗಡೆ ಮುತ್ತು ಮೀನಹಳ್ಳಿ ಶಂಕರ್, ಬಸಪ್ಪ ರಾಮಾಂಜನಿ ಬಸಣ್ಣ ಸಣ್ಣ ತಾಯಣ್ಣ ಕೃಷ್ಣ, ರಾಜ, ಶ್ರೀನಿವಾಸ್, ಅಂಬರೀಶ ,ಬೀರಲಿಂಗ ,ಗಿರಿಯಪ್ಪ ಸೇರಿದಂತೆ ಗ್ರಾಮದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು