ಕೆ. ಶಿವರಾಮ್ ಅವರು ಅನಾರೋಗ್ಯದಿಂದ ಫೆಬ್ರವರಿ 29ರಂದು ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರಿಲ್ಲ ಎನ್ನುವ ವಿಚಾರವನ್ನು ಒಪ್ಪಿಕೊಳ್ಳೋಕೆ ಕುಟುಂಬದವರ ಬಳಿ ಹಾಗೂ ಅಭಿಮಾನಿಗಳ ಬಳಿ ಸಾಧ್ಯವಾಗುತ್ತಿಲ್ಲ. ಶಿವರಾಮ್ (Shivaram) ಪಾರ್ಥಿವ ಶರೀರವನ್ನು ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಅವರ ಪತ್ನಿ ಬಂದು ಕಣ್ಣೀರು ಹಾಕಿದ್ದಾರೆ. ಪತಿಯ ಪಾರ್ಥಿವ ಶರೀರವನ್ನು ನೋಡಿ ಗೋಳಾಡಿದ್ದಾರೆ. ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಶಿವರಾಮ್ ಅವರಿಗೆ ಹೃದಯಾಘಾತ ಆಗಿತ್ತು. ಇದರ ಜೊತೆಗೆ ಅವರ ಮಿದುಳು ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ವೈದ್ಯರ ಚಿಕಿತ್ಸೆ ಫಲಿಸದೆ ನಿಧನ ಹೊಂದಿದ್ದಾರೆ.