ಸಿರುಗುಪ್ಪ:ನಗರದ ವಿನೋದ ಕುಮಾರ ಹಾಗೂ ಕನಕಗಿರಿ ತಾಲೂಕಿನ ಶಿವರಾಜ ಎಂಬುವವರು ಶ್ರೀ ದಿವ್ಯ ಜ್ಯೋತಿ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಪ್ರತಿ ತಿಂಗಳು ಲಕ್ಕಿ ಡಿಪ್ ಎತ್ತುವುದರ ಮೂಲಕ ಬಹುಮಾನ ಕೊಡುತ್ತೇವೆಂದು ಸಾರ್ವಜನಿಕರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಈ ಡಿಪ್ ಬಹುಮಾನಗಳಲ್ಲಿ ಕಾರ್,ಬೈಕ್, ಫ್ರಿಡ್ಜ್,ವಾಷಿಂಗ್ ಮಿಷನ್ , ಕೈಗಡಿಯಾರ ಹಾಗೂ ಹಲವು ವಸ್ತುಗಳ ಬಹುಮಾನ ಆಸೆ ತೋರಿಸಿ ಸಾರ್ವಜನಿಕರನ್ನು ಆಕರ್ಷಿಸಿ,ನಂಬಿಸಿ ಸದಸ್ಯರಿಂದ ಹಣವನ್ನು ಪಡೆದು ವಂಚಿಸಿ ಪರಾರಿಯಾಗಿರುವ ಕುರಿತು ಸಿರುಗುಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು.
ಆರೋಪಿಗಳಿಗೆ ಪತ್ತೆಗಾಗಿ ತಂಡ ರಚನೆ ಮಾಡಿದ ಬಳ್ಳಾರಿ ಎಸ್ ಪಿ ಡಾ ಶೋಭಾ ರಾಣಿ ಅವರ ಮಾರ್ಗದರ್ಶನ ಮೇರೆಗೆ ಸಿರುಗುಪ್ಪ ಡಿವೈಎಸ್ಪಿ ವೆಂಕಟೇಶ್ ಉಗಿಬಂಡಿ ನೇತೃತ್ವದಲ್ಲಿ, ಸಿರುಗುಪ್ಪ ವೃತ್ತ ನಿರೀಕ್ಷಕರಾದ ವೈ ಎಸ್ ಹನುಮಂತಪ್ಪ, ಪಿಎಸ್ಐ ಪರಶುರಾಮ ಹಾಗೂ ಸಿಬ್ಬಂದಿಗಳ ಒಳಗೊಂಡ ತಂಡ ರಚನೆ ಮಾಡಿ ಆರೋಪಿತರಿಬ್ಬರಿಂದ 8.10 ಲಕ್ಷ ನಗದು ಹಣ, ಮಾರುತಿ ಬೊಲೇರೋ ಕಾರು ಅಂದಾಜು ಮೌಲ್ಯ 6 ಲಕ್ಷ ರುಪಾಯಿ, ಮತ್ತು ರಾಯಲ್ ಎನ್ ಫೀಲ್ಡ್ ಬುಲೆಟ್ ಮೋಟರ್ ಸೈಕಲ್ ಅಂದಾಜು ಮೌಲ್ಯ 1.50 ಲಕ್ಷ ವಶಕ್ಕ ಪಡೆದು ಪಡೆದುಕೊಂಡಿದ್ದಾರೆ.
ಶ್ರೀ ದಿವ್ಯ ಜ್ಯೋತಿ ಲಕ್ಕಿ ಸ್ಕೀಂ ಹೆಸರಿನಲ್ಲಿ ಸಾರ್ವಜನಿಕರಿಗೆ ನಂಬಿಸಿ ಮೋಸ,ವಂಚಿಸಿ ಪ್ರಕರಣದಲ್ಲಿ ಆರೋಪಿತರಿಬ್ಬರ ಬೆನ್ನು ಜಾಡು ಹಿಡಿದು ಹೋದ ಸಿರುಗುಪ್ಪ ಪೋಲಿಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬೇಧಿಸಿದ ಪೋಲಿಸ್ ಅಧಿಕಾರಿಗಳಾದ ಸಿಪಿಐ ವೈ ಎಸ್ ಹನುಮಂತಪ್ಪ, ಪಿಎಸ್ಐ ಪರಶುರಾಮ್, ಹಾಗೂ ಸಿಬ್ಬಂದಿಗಳಾದ ಚಿನ್ನಪ್ಪ ಗುಡಿಕೇರಿ,ಶಂಕ್ರಪ್ಪ,ಎ ಬಸವರಾಜ,ಬಾಲಚಂದ್ರ ರಾಥೋಡ್, ವಿಷ್ಣುಮೋಹನ್,ಈರಣ್ಣ,ಮುದುಕಯ್ಯ ಶಿಕಾಲೆ ರವರನ್ನು ಒಳಗೊಂಡ ಕಾರ್ಯವೈಖರಿಯ ಬಗ್ಗೆ ಬಳ್ಳಾರಿ ಎಸ್.ಪಿ ಡಾ ಶೋಭಾ ರಾಣಿ ಪ್ರಶಂಸೆ ವ್ಯಕ್ತಪಡಿಸಿದರು.ಜೊತೆಗೆ ಕೋಟ್ಯಾಂತರ ರುಪಾಯಿ ವಂಚನೆ,ಮೋಸ ಮಾಡಿದ ಆರೋಪಿಗಳನ್ನು ಬಂಧನ ಮಾಡಿದ ಹಿನ್ನೆಲೆಯಲ್ಲಿ ತಾಲೂಕಿನ ಸಾರ್ವಜನಿಕರು ಪೋಲಿಸರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.