ಬಳ್ಳಾರಿ ಸೆ.05 : ಕಳೆದ ೨೫ ವರ್ಷಗಳಿಂದ ಬಳ್ಳಾರಿ ನಗರದ ಎಂ.ಜಿ.ರಸ್ತೆಯ ಗಣೇಶನಿಗೆ ವೈವಿಧ್ಯ ನಮೂನೆಯಲ್ಲಿ ಪ್ರತಿಷ್ಠಾಪಿಸಿ ಬಳ್ಳಾರಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಹೆಸರುವಾಸಿಯಾಗಿದ್ದ ಶ್ರೀ ಸರ್ವಸಿದ್ಧ ವಿನಾಯಕ ಮಿತ್ರ ಮಂಡಳಿ ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅಯೋಧ್ಯೆಯ ಬಾಲರಾಮನಾಗಿ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಈ ಕುರಿತು ಶ್ರೀ ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿ ಯ ಪದಾಧಿಕಾರಿಗಳು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,
ಕಳೆದ ೨೫ ವರ್ಷಗಳ ಹಿಂದಿನಿAದಲೂ ಡಾ.ರಾಜಕುಮಾರ್ ರಸ್ತೆಯ ಪಟೇಲ್ ನಗರದ ಎಂ.ಜಿ.ರಸ್ತೆಯಲ್ಲಿ ವಿಶಿಷ್ಟ ಹಾಗೂ ವೈವಿಧ್ಯ ನಮೂನೆಯ ಆಕರ್ಷಕ ಗಣಪತಿಯನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಾ ಬರುತ್ತಿದ್ದೇವೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವರ್ಷದಿಂದ ವರ್ಷಕ್ಕೆ ಎಂ.ಜಿ.ಗಣೇಶನಿಗೆ ತನ್ನದೇ ಆದ ಐತಿಹ್ಯವನ್ನು ದೃಢಪಡಿಸಿದ್ದೇವೆ.
ಈ ಬಾರಿ ಶ್ರೀರಾಮ ಲಲ್ಲಾನ ರೂಪದಲ್ಲಿ ಶ್ರೀ ಗಣೇಶ ಭಕ್ತರಿಗೆ ದಿವ್ಯ ದರ್ಶನ ನೀಡಲಿದ್ದಾನೆ. ಇದಕ್ಕಾಗಿ ಶ್ರೀ ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿಯಿAದ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಳೆದ ೨೫ ವರ್ಷಗಳಲ್ಲಿ ಗ್ರಾಮೀಣ ಸೊಗಡು ಬಿಂಬಿಸುವ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಈ ಬಾರಿ ೨೫ ಕೆ.ಜಿ.ತೂಕದಲ್ಲಿ ಲಡ್ಡು ತಯಾರಿಸಿ ಹರಾಜು ಮಾಡಲಾಗುತ್ತದೆ.
ಈ ಹರಾಜಿನಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದರು. ಪಟೇಲ್ ನಗರದ ಎಂ.ಜಿ.ರಸ್ತೆ ಗಣೇಶ ಅಂದರೆ ಇಡೀ ಬಳ್ಳಾರಿಗೆ ಖ್ಯಾತಿ ಪಡೆದಿದೆ. ೧೯೯೯ರಿಂದಲೂ ಇಲ್ಲಿನ ಗಣೇಶ ತನ್ನದೇ ಆದ ಪ್ರಭಾವಳಿ ಮೂಡಿಸಿದ್ದಾನೆ. ಅಂದಿನ ಯುವಕರೆಲ್ಲ ಸೇರಿಕೊಂಡು ಸತತವಾಗಿ ಶ್ರೀ ಗಣೇಶ ವೈಭವವನ್ನು ಮೆರೆಸಿಕೊಂಡು ಬರುತ್ತಿದ್ದಾರೆ. ಭಾವೈಕ್ಯತೆಗೆ ಇಂಬು ನೀಡಿದ್ದು ಎಲ್ಲ ಧರ್ಮೀಯರೂ ಗಣೇಶ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ನಮ್ಮ ಮಿತ್ರ ಮಂಡಳಿಯ ಸಂಘಟನಾ ಚಾತುರ್ಯತೆ, ಧಾರ್ಮಿಕ ಹಾಗೂ ಐಕ್ಯತೆಯ ದ್ಯೋತಕವನ್ನು ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ ಎಂದರು.
ಅಯೋಧ್ಯೆಯ ಅನಾವರಣ:-ಈ ಬಾರಿ ಬೆಳ್ಳಿ ಹಬ್ಬದ ಅಂಗವಾಗಿ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಆದಿಯಿಂದ ಹಿಡಿದು ಕಳೆದ ೨೦೨೩ರ ಜನೆವರಿ ೨೨ ರಂದು ಶ್ರೀ ಬಾಲರಾಮ ಲೋಕಾರ್ಪಣೆಗೊಂಡಿರುವ ಎಲ್ಲ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಭಿತ್ತಿ ಚಿತ್ರದ ಮೂಲಕ ಭಕ್ತರಿಗೆ ಬಿಂಬಿಸುವ ಪ್ರಯತ್ನ ನಡೆದಿದೆ. ಇದಕ್ಕಾಗಿ ಶ್ರಮಿಸಿದ ಅನೇಕ ಮಹನೀಯರ ಅಮೂಲ್ಯ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಮಿತ್ರ ಮಂಡಳಿ ಕಳೆದ ೨೫ ವರ್ಷಗಳಿಂದ ವಿಭಿನ್ನವಾಗಿ ಗಣೇಶ ಚತುರ್ಥಿಯನ್ನು ಆಚರಿಸಿಕೊಂಡು ಬರುತ್ತಿದ್ದು ವಿಶೇಷವಾಗಿದೆ. ಬಳ್ಳಾರಿ ಜಿಲ್ಲಾಡಳಿತದಿಂದ ಅನೇಕ ಬಾರಿ ಮಿತ್ರ ಮಂಡಳಿಗೆ ಪ್ರಶಂಸೆ ವ್ಯಕ್ತಪಡಿಸಿ ಹಲವು ಬಾರಿ ಪ್ರಶಸ್ತಿ ಪುರಸ್ಕಾರ ನೀಡಿ ಪ್ರೋತ್ಸಾಹಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಭಾವುಕರಾಗಿ ನುಡಿದರು.
ಮುಕ್ತ ಅವಕಾಶ:-ಬೆಳ್ಳಿ ಹಬ್ಬದ ಸಂಭ್ರಮದ ಜೊತೆಗೆ ಅದ್ದೂರಿಯಾಗಿ ಶ್ರೀ ಗಣೇಶ ಮಂದಿರ ನಿರ್ಮಾಣ ಮಾಡಲಾಗಿದ್ದು ಸದ್ಭಕ್ತರು ಗಣೇಶ ದರ್ಶನವನ್ನು ಮುಕ್ತವಾಗಿ ಪಡೆಯಲು ಅವಕಾಶ ಇದೆ. ಬಳ್ಳಾರಿ ನಗರದ ೩೯ ವಾರ್ಡುಗಳಲ್ಲಿನ ಜನರು ಎಂ.ಜಿ.ಗಣೇಶನನ್ನು ಅಯೋಧ್ಯೆ ಬಾಲರಾಮನ ರೂಪದಲ್ಲಿ ಕಣ್ತುಂಬಿಸಿಕೊಳ್ಳಬಹುದು. ಭಕ್ತರಿಗೆ ಮಿತ್ರ ಮಂಡಳಿಯಿAದ ಪ್ರಸಾದ ವ್ಯವಸ್ಥೆ ಇರುತ್ತದೆ. ಜೊತೆಗೆ ಪ್ರತಿದಿನ ಹಲವಾರು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಹಿತ ಜರುಲಿವೆ. ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಹಿತೈಷಿಗಳೊಂದಿಗೆ ಬೆಳ್ಳಿ ಹಬ್ಬದ ಶ್ರೀರಾಮಲಲ್ಲಾ ಗಣೇಶನನ್ನು ದರ್ಶಿಸಿ ಪುನೀತರಾಗಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಸರ್ವಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಪದಾಧಿಕಾರಿಗಳಾದ ಜಿತೇಂದ್ರ ಪ್ರಸಾದ್,ಪ್ರಸಾದ್, ಲಕ್ಷö್ಮಯ್ಯ, ಸುನೀಲ್ ಕುಮಾರ್, ಮಾರುತಿ ಪ್ರಸಾದ್, ತಲ್ಲಂ ಕಿಶೋರ್, ಸುಬ್ಬಾರಾವ್, ರಾಘವ, ಮಧುಸೂದನ್ ರೆಡ್ಡಿ, ನಾಗರಾಜ್, ಗೋಪಾಲರೆಡ್ಡಿ, ಕೃಷ್ಣ, ರಾಜೇಶ್ ಬಿಲ್ವ, ಶ್ರವಣ್ ರೆಡ್ಡಿ, ರಾಜೇಶ್,ಸುನಿಲ್ ಕುಮಾರ್, ಸತ್ತಿ, ಗೋಪಿನಾಥ್, ದೀಪಕ್, ಆದಿಶೇಷ, ಲಿಕ್ಕರ್ ವೇಣು, ನಂದೀಶ್ ಮುಲ್ಲಂಗಿ ಸೋವiಶೇಖರ್,ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.