ಕನಕಗಿರಿ. ಫೆ.05: ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ!! ಹೆಚ್ ಸಿ ಮಹಾದೇವಪ್ಪ ನವರು ಈಗಾಗಲೇ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನಗಳನ್ನು ರೂಪಿಸಿ ನೀಡುವ ಮೂಲಕ ಇಡೀ ರಾಜ್ಯದ ಶೋಷಿತ ಸಮುದಾಯಗಳನ್ನು ಮುನ್ನೆಲೆಗೆ ತರುವ ಮತ್ತು ಅವುಗಳನ್ನು ಜಾರಿಗೆ ತಂದು ಕಾಂಗ್ರೇಸ್ ಪಕ್ಷಕ್ಕೆ ಬಹುದೊಡ್ಡ ಯಶಸ್ಸು ಮತ್ತು ಶಕ್ತಿಯನ್ನು ತಂದುಕೊಡುವಂಥಹ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಇಂದು ದಲಿತ ಹಿಂದುಳಿದ ಸಮುದಾಯಗಳನ್ನು ರಾಜ್ಯಾದ್ಯಂತ ಒಗ್ಗೂಡಿಸಿ ಅವರಿಗೆ ಅರಿವು, ಸಾಮಾಜಿಕ ನ್ಯಾಯ, ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಈ ದಿನಮಾನದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ಸಮಿತಿಗಳು ಇಂತಹ ಮನಸ್ಥಿತಿಯಿಂದ ಹೊರ ಬರಬೇಕು ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಛಲವಾದಿ ಸಮಾಜವು ಸರ್ಕಾರಕ್ಕೆ ಒತ್ತಾಯಿಸಿದೆ .
ಈಗಾಗಲೆ ಪಕ್ಷದ ಮೇಲೆ ಕೆಲವು ಅಪಾದನೆಗಳಿವೆ ಅವೇನೆಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡವ ಸಂದರ್ಭದಲ್ಲಿ ಅವರನ್ನು ಅದರಿಂದ ತಪ್ಪಿಸುವುದಕ್ಕಾಗಿಯೇ ಅವರನ್ನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹೇಳಿ ಅವರನ್ನ ರಾಜ್ಯದಿಂದ ಹೊರದಬ್ಬಿದರು ಎನ್ನುವ ಆಪಾದನೆ ಮತ್ತು ಅದೇ ರೀತಿ ಡಾ.ಜಿ ಪರಮೇಶ್ವರ್ ಅವರು 2013ರ ಚುನಾವಣೆಯಲ್ಲಿ ಪಕ್ಷದ ಕೆಲವು ಹಿರಿಯರು ಅವರನ್ನು ಸೋಲಿಸಲು ಜೇಡರ ಬಲೆ ಹೆಣೆದು ಅವರನ್ನ ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ಅವರನ್ನ ಹಿಂದೆ ಸರಿಸಲು ವ್ಯವಸ್ಥಿತವಾಗಿ ಪಿತೂರಿ ನಡೆಸಿದರು ಎನ್ನುವ ಆಪಾದನೆಯೂ ಇದೆ,
ಇಂಥಹ ಹಲವಾರು ಆಪಾದನೆ ಇದ್ದಾಗಲೂ ಸಹ ಮತ್ತೋಬ್ಬ ಹಿರಿಯ ರಾಜಕೀಯ ಮುತ್ಸದಿ ಮತ್ತು ದಲಿತ, ಸೋಷಿತ ಸಮುದಾಯದಗಳ ಚಿಂತಕರಾದ ಡಾ!! ಹೆಚ್ ಸಿ ಮಹಾದೇವಪ್ಪ ಅವರನ್ನೂ ಸಹ ಈ ರಾಜ್ಯ ಸರ್ಕಾರ, ರಾಜ್ಯ ರಾಜಕಾರಣದಿಂದ ಹೊರದಬ್ಬುವ ಕೆಲಸ ಮಾಡುತ್ತಿದ್ದಾರೆ ಇಂತಹ ರಾಜಕೀಯ ಪಿತೂರಿಯನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ.
ಒಂದು ವೇಳೆ ಸಚಿವ ಮಹಾದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೇಪಿಸಿದ್ದೇ ಆದರೆ ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿ ದಲಿತ ಮತಗಳು ಅನಿವಾರ್ಯವಾಗಿ ಛಿದ್ರಗೊಂಡು ಪಕ್ಷಕ್ಕೆ ತುಂಬಾ ನಷ್ಟ ಅನುಭವಿಸುವ ಸಂಭಂವವಿದೆ ಮತ್ತು ಈ ಕುತಂತ್ರದ ವಿರುದ್ಧ ರಾಜ್ಯದ ಎಲ್ಲಾ ದಲಿತ ಸಮುದಾಯ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ. ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ವೀರೇಶ ವಕೀಲರು ಈಳಿಗನೂರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಹನುಮಂತಪ್ಪ ಸೋಮನಾಳ, ಬಸವರಾಜ ಕಾರಟಗಿ, ಅಂಜಿನಪ್ಪ ಕಾರಟಗಿ, ಹುಲಿಗೆಪ್ಪ ಕಕ್ಕರಗೋಳ, ದೇವರಾಜ್ ಈಳಿಗನೂರು, ಹುಲಿರಾಜ್ ತೊಂಡಿಹಾಳ, ಬಸವರಾಜ್ ಬಸವಣ್ಣ ಕ್ಯಾಂಪ್, ಶಿವಪ್ಪ ಕಕ್ಕರಗೋಳ, ಉಪೇಂದ್ರ ವಕೀಲರು ಜಮಾಪುರ, ಮಾರುತಿ ಈಳಿಗನೂರು ಉಪಸ್ಥಿತರಿದ್ದರು.