ಆರೋಪಿತರಿಂದ ಬ್ಯಾಟರಿ, ಎಲೆಕ್ಟ್ರಾನಿಕ್ ಉಪಕರಣ, ಆಟೋ ವಶಕ್ಕೆ
ಬಳ್ಳಾರಿ,ಸೆ.25 : ಏರ್ಟೇಲ್ ಮತ್ತು ಜಿಯೋ ಟೆಲಿಕಮ್ಯುನಿಕೇಷನ್ ಟವರ್ಗಳ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿ, ಆರೋಪಿತರಿಂದ ೩೦.೪೯,೦೦೦/-ರೂ.ಗಳ ಮೌಲ್ಯದ ಬ್ಯಾಟರಿ, ಎಲೆಕ್ಟ್ರಾನಿಕ್ ಉಪಕರಣಗಳು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಆಟೋವನ್ನು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸತೀಶ್ ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ಪಕ್ಕದ ನೆರೆಯ ರಾಜ್ಯವಾದ ಆಂಧ್ರದಲ್ಲಿ ಇತ್ತೀಚಿಗೆ ಟವರ್ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದರಿಂದ ಪ್ರಕರಣಗಳಲ್ಲಿ ಕಳ್ಳತನವಾದ ಮಾಲು ಮತ್ತು ಆರೋಪಿತರ ಪತ್ತೆ ಕುರಿತು ಎಸ್ಪಿ ಡಾ||ಶೋಭಾರಾಣಿ ವಿ.ಜೆ. ರವರ ನಿರ್ದೇಶನ ಮೇರೆಗೆ ಬಳ್ಳಾರಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-೨ ನವೀನ್ ಕುಮಾರ್ರವರ ಮಾರ್ಗದರ್ಶನದಲ್ಲಿ ಸಿರುಗುಪ್ಪ ಉಪ-ವಿಭಾಗ ಪೊಲೀಸ್ ಉಪಾಧೀಕ್ಷ ಸಂತೋಷ ಚೌವಾಣ್ ನೇತೃತ್ವದಲ್ಲಿ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎನ್.ಸತೀಶ್, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ. (ತನಿಖೆ) ವಿ.ಹೊನ್ನಪ್ಪ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ಎ.ಎಸ್.ಐ ಶ್ರೀನಿವಾಸಲು.ಎಂ ಹಾಗೂ ಸಿಬ್ಬಂದಿಗಳಾದ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಶ್ರೀನಿವಾಸ, ಕೆ.ಬೀರಪ್ಪ, ಉಮಾಶಂಕರ, ರಮೇಶ್ ಬಾಬು, ಮಂಜುನಾಥ, ಮಾರ್ಕ್, ಫಕ್ಕಿರೇಶರವರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಸೆ.೨೫ರಂದು ಬೆಳಿಗ್ಗೆ ತಂಡ ಕಾರ್ಯಚರಣೆ ಮಾಡಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ-೦೫. ಪಿ.ಡಿ.ಹಳ್ಳಿ-೦೪, ಕುಡಿತಿನಿ-೦೧ ಆಂಧ್ರದಲ್ಲಿ-೦೫ ಒಟ್ಟು ೧೫ ಕಡೆಗಳಲ್ಲಿ ಟವರ್ನಲ್ಲಿರುವ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಕಳ್ಳತನ ಪ್ರಕಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಅನಾಸ್ ತಂದೆ ನವಾಬುದ್ದೀನ್, ಇಕ್ರಾರ್, ವಿಲ್ಸ್ ನವಾಜ್ ತಂದೆ ಗುಲ್ದಾರ್, ಅನಾಸ್ ಅವರನ್ನು ವಶಕ್ಕೆ ಪಡೆದು ಆರೋಪಿತರಿಂದ ಅಂದಾಜು ೩೦.೪೯,೦೦೦/- ರೂ ಮೌಲ್ಯದ ೨೬ ಬ್ಯಾಟರಿಗಳನ್ನು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಹಾಗೂ ಸುಮಾರು ೦೫ ಲಕ್ಷ ಮೌಲ್ಯದ ಒಂದು ಇಂದ್ರಾ ಕಂಪನಿಯ ಲಗೇಜ್ ಪಿಕಪ್ ಆಟೋವನ್ನು ಮತ್ತು ಕೃತ್ಯ ಬಳಸುತ್ತಿದ್ದ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ.
ಟವರ್ ಕಳ್ಳತನ ಪ್ರಕರಣಗಳ ಆರೋಪಿತರನ್ನು ಪತ್ತೆ ಮಾಡಿ ಬ್ಯಾಟರಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡ ಮೇಲ್ಕಂಡ ವಿಶೇಷ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಡಾ|| ಶೋಭಾರಾಣಿ ವಿ.ಜೆ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.