ಕುರುಗೋಡು: ಪಟ್ಟಣ ಸಮೀಪದ ಬೈಲೂರು ಗ್ರಾಮದಲ್ಲಿ ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ವತಿಯಿಂದ ವಿಶೇಷ ಆರೋಗ್ಯ ತಪಾಶನ ಶಿವರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಒಂದು ಕಾರ್ಯಕ್ರಮದಲ್ಲಿ ಸ್ವಯಂ ಸಂಸ್ಥೆಗಳಾದ ರಾಶಿ ಫೌಂಡೇಶನ್, ವಿಮುಕ್ತಿ ಸಂಸ್ಥೆ, ಮತ್ತು ಇಕ್ವಿಟಿಸ್ ಸಂಸ್ಥೆ, KHPT, ಎಲ್ಲಾ ಸಂಸ್ಥೆಗಳು ಭಾಗವಹಿಸಿದ್ದವು. ಸ್ಥಳ ಸುಂಕ್ಲಮ್ಮ ದೇವಸ್ಥಾನದ ಹತ್ತಿರ, ಸಿಂದಿಗೇರಿ ಗ್ರಾಮ ಪಂಚಾಯಿತಿ,ಬೈಲೂರು ಗ್ರಾಮ, ಕುರುಗೋಡು ತಾಲೂಕು. ವಿಶೇಷ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ (ರಿ). ಕಾರ್ಯಕ್ರಮ ವಿಮುಕ್ತಿ ಸಂಪರ್ಕ ಕಾರ್ಯಕರ್ತೆಯರ ಯೋಜನೆ.
ಸೇವೆಗಳು ರಕ್ತ ಪರೀಕ್ಷೆ,ಬಿಪಿ, ಶುಗರ್, ಕಣ್ಣಿನ ಪರೀಕ್ಷೆ, ಮತ್ತು ಕಫ ಪರಿಕ್ಷೆ, ಸಾಂಕ್ರಾಮಿಕ ಕಾಯಿಲೆಗಳ ಪರೀಕ್ಷೆ,
ಸಂಯೋಜನೆ ಸಿಂದಿಗೇರಿ ಪಂಚಾಯಿತಿ,ಪ್ರಾಥಮಿಕ ಆರೋಗ್ಯ ಕೇಂದ್ರ ಕೋಳೂರು, LV ಪ್ರಸಾದ್ ಕಣ್ಣಿನ ಪರೀಕ್ಷೆ ಬಳ್ಳಾರಿ,ಹಾಗೂ ವಿಮುಕ್ತಿ LWS ಬಳ್ಳಾರಿ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಹಾಜರಾದ ಆರೋಗ್ಯಧಿಕಾರಿಗಳು,L/T PHCO ಶರಣಮ್ಮ,
ಹೆಲ್ತ್ ವರ್ಕರ್ ಜಯಣ್ಣ ಸರ್, ಹಾಗೂ ವಿಮುಕ್ತಿ ಸಂಸ್ಥೆ ವತಿಯಿಂದ DRP ದಿವಾಕರ್ ಹೊಸಮನಿ ಸರ್, ಸೂಪರ್ವೈಸರ್ ಜಯಲಕ್ಷ್ಮಿ ಮೇಡಂ,CLW ಗಳಾದ ಸಿದ್ದಪ್ಪ, ನಿಂಗಪ್ಪ, ಅನುರಾಧ, ಹಾಗೂ KHPT TCO: ಶಿವಕುಮಾರ್, LV-ಪ್ರಸಾದ್ ಕಣ್ಣಿನ ಪರೀಕ್ಷೆ ಡಾಕ್ಟರ್ ಮಾಂತೇಶ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು-ವೆಂಕಟೇಶ್ ಮತ್ತು ಸದಸ್ಯರುಗಳು, ವಾಲ್ ಎಂಟ್ರಿ ಚಂದ್ರಶೇಖರ, ಊರಿನ ಮುಖಂಡರು,ಎಲ್ಲಾ ಸಾರ್ವಜನಿಕರು ಈ ಒಂದು ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.