ಬಳ್ಳಾರಿ, ಫೆ.05: ದೇವರು ನಮಗೇನೂ ಮಾಡಿದ್ದಾನೆ ಎನ್ನುವುದಕ್ಕಿಂತ ದೇವರಿಗೆ ನಾವೇನು ಮಾಡಿದ್ದೇವೆ, ಮಾಡುತ್ತಿದ್ದೇವೆ ಎನ್ನುವುದು ಮುಖ್ಯಎಂದು ಭಿಮನಕಟ್ಟೆ ಶ್ರೀ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ಅವರು ಹೇಳಿದರು. ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ಜಮಖಂಡಿ ಶ್ರೀ ವಾದಿರಾಜ ಮಠದ ಆವರಣಲ್ಲಿ ಶ್ರೀ ಪುರಂದರ ದಾಸರ ಸಪ್ತರಾತ್ರೋತ್ಸವ ಹಾಗೂ ಶ್ರೀ ಮಧ್ವ ನವರಾತ್ರೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಿತ್ಯ ದೇವರನ್ನು ಭಕ್ತಿಯಿಂದ ಪೂಜಿಸಿ, ಆರಾಧಿಸಿದರೆ ಸಕಲ ಕಷ್ಟಗಳೂ ದೂರವಾಗಲಿವೆ, ಭಗವಂತನನ್ನು ನಂಬಿದರೆ ಎಂದು ಕೈಬಿಡೊಲ್ಲ, ನಿತ್ಯ ಸ್ಮರಣೆ ಮಾಡಿದರೆ ಎದುರಾಗುವ ಎಲ್ಲ ವಿಘ್ನಗಳು ದೂರವಾಗಿ ನೆಮ್ಮದಿ ಜೀವನ ರೂಪಿಸಿಕೊಳ್ಳಬಹುದು ಎಂದರು.ಶ್ರೀ ಮಧ್ವ ಸಂಘದ ವತಿಯಿಂದ ಫೆ.3 ರಿಂದ 18 ರ ವರೆಗೆ ನಡೆಯಲಿರುವ ಶ್ರೀ ಪುರಂದರ ದಾಸರ ಸಪ್ತರಾತ್ರೋತ್ಸವ ಹಾಗೂ ಶ್ರೀ ಮಧ್ವ ನವರಾತ್ರೋತ್ಸವ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಭಕ್ತಿ ಸಮರ್ಪಿಸಬೇಕು ಎಂದರು. ಶ್ರೀ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀ ನರಹರಿ ಆಚಾರ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಮಧ್ವ ಸಂಘದ ಅಧ್ಯಕ್ಷ ಸುಬ್ರಮಣ್ಯ ಅವರು, ಸ್ವಾಗತಿಸಿ, ಪ್ರಾರ್ಥಿಸಿದರು. ವಿದ್ವಾನ್ ಶ್ರೀ ಸತ್ಯನಾರಾಯಣ ಆಚಾರ್ ಅವರು ಪ್ರಾಸ್ತಾವಿಕವಾಗಿ ಮತನಾಡಿದರು. ವಿದ್ವಾನ್ ಶ್ರೀ ಮಧುಸೂಧನ್ ಆಚಾರ ಉಡುಪಿ ಅವರಿಂದ ಪ್ರವಚನ ನಡೆಯಿತು. ಈ ಉತ್ಸವದ 15 ಕಾರ್ಯಕ್ರಮಗಳು ನಿತ್ಯವೂ ವಿಶೇಷವಾಗಿ ನಡೆಯಲಿದ್ದು, ವಿಶೇಷವಾಗಿ ನಾಲ್ಕು ಜನ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ, ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಸಂಘಟಕರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಮಧ್ವ ಸಂಘದ ಪದಾಧಿಕಾರಿಗಳಾದ ಸುಬ್ರಮಣ್ಯ, ರಾಮಮೂರ್ತಿ, ಸುಶಲೆಂದ್ರ, ಕಿಶನ್ ರಾವ್, ಲಕ್ಷ್ಮಣ್, ನರಸಿಂಹ ಮೂರ್ತಿ, ನಾರಾಯಣ ಆಚಾರ, ವ್ಯಾಸರಾವ್, ಶ್ರೀಧರ್, ರವಿ, ವೇಣುಗೋಪಾಲ್ ಸೇರಿದಂತೆ ಇತರರು ಉಸ್ಥಿತರಿದ್ದರು. ನಂತರ ಪ್ರಾಥಮಿಕ, ಹಿರಿಯ ಪ್ರಾಥಮಿಕ ಪ್ರೌಢ ಶಾಲೆ ಮಕ್ಕಳಿಗೆ ಪುರಂದರ ದಾಸರ ಆರಾಧನೆ ಮಹೋತ್ಸವ ನಿಮಿತ್ತ ಸಂಗೀತ ಸ್ಪರ್ಧೆ, ಪ್ರಭಂದ ಸ್ಪರ್ಧೆ ಗಳು ನಡೆದವು. ನಂತರ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ ನಡೆಯಿತು.