ಬಳ್ಳಾರಿ, ಮಾ 6: ವಿಮ್ಸ ಆಸ್ಪತ್ರೆಯ ಪ್ರದೇಶದಲ್ಲಿರುವ ಬೀದಿ ವ್ಯಾಪಾರಿಗಳಿಗೆ ಬಳ್ಳಾರಿ ಪಾಲಿಕೆಯ ಅಧಿಕಾರಿಗಳು ವ್ಯಾಪಾರ ಮಾಡದಂತೆ ಸೂಚಿಸಿ ತೆರವು ಕಾರ್ಯಾಚರಣೆ ನಡೆಸ್ತಿರೋದಕ್ಕೆ,ಬೀದಿ ಬದಿ ವ್ಯಾಪಾರಿಗಳ ಸಂಘ ವಿರೋಧಿಸಿದೆ.ವಿಮ್ಸ್ ಆಸ್ಪತ್ರೆಯ ಸುತ್ತಲಿನ ಬೀದಿ ವ್ಯಾಪಾರಿಗಳು ಸುಮಾರು 10-12 ವರ್ಷಗಳಿಂದ ಅಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಅಲ್ಲಿ ಸುಮಾರು 80-100 ಬೀದಿ ವ್ಯಾಪಾರಿಗಳಿದ್ದಾರೆ. ಅವರಿಗೆಲ್ಲಾ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣ ಪತ್ರವನ್ನು ನೀಡಿದೆ.ವಿಮ್ಸ್ ಆಸ್ಪತ್ರೆಯ ಸುತ್ತಲಿನ ಬೀದಿಯಲ್ಲಿ ವ್ಯಾಪಾರ ಮಾಡಬಾರದು ಎಂದು ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ.
ಇಂದು ಬೆಳ್ಳಿಗ್ಗೆ ನಗರದ ಹಾವಂಭಾವಿ ಪ್ರದೇಶದಲ್ಲಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಗೃಹ ಕಚೇರಿಯಲ್ಲಿ ರಾಮುಲು ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು.ನಮಗೆ ಬಹಳ ಆತಂಕವಾಗಿದೆ. ನಾವು ಯಾವುದೇ ಅಪರಾಧ ಮಾಡಿಲ್ಲ. ನಾವು ಬೀದಿ ವ್ಯಾಪಾರಿಗಳ ಕಾನೂನಿನ ಪ್ರಕಾರ ವ್ಯಾಪಾರ ಮಾಡುತ್ತಿದ್ದೇವೆ ನಮ್ಮಿಂದ ತಪ್ಪಿದ್ದರೆ ದಯವಿಟ್ಟು ಸಭೆ ಕೆರೆದು ತಿಳಿಸಿ, ನಾವು ತಿದ್ದಿಕೊಳ್ಳುತ್ತೇವೆ. ಆದರೆ ಈ ರೀತಿ ದಿಡೀರ್ ಎತ್ತಂಗಡಿ ಮಾಡಿದರೆ ಹೇಗೆ? ಅಂಥಾ ತಮ್ಮ ಸಂಕಟವನ್ನು ರಾಮುಲು ಅವರಿಗೆ ತಿಳಿಸಿದರು.
ನಂತರ ಪಾಲಿಕೆಯ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಅಲ್ಲಿ ವ್ಯಾಪಾರ ಮಾಡುತಿದ್ದ ಎಲ್ಲಾ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮುಂದುವರಿಸಲು ಅವಕಾಶ ನೀಡಬೇಕು. ಬೀದಿ ವ್ಯಾಪಾರಕ್ಕೆ ತೊಂದರೆ ಆಗದ ರೀತಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು.150ಕ್ಕೂ ಅಧಿಕ ವ್ಯಾಪಾರಿಗಳ ಜೀವನೋಪಾಯದ ಮೇಲೆ ಇದು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ.ಇಂದಿನ ದಿನಗಳಲ್ಲಿ ಜೀವನ ಮಾಡೋದು ದುಸ್ಥರವಾಗಿದೆ.ಅಂಥದ್ದರಲ್ಲಿ ಅವರನ್ನು ತೆರವು ಮಾಡಸುತ್ತೀರೋದು ಎಷ್ಟರಮಟ್ಟಿಗೆ ಸರಿ.ದಿನನಿತ್ಯ ಆ ವ್ಯಾಪಾರಸ್ಥರು ದುಡಿದು ತಿಂದರೆ ಮಾತ್ರ ಅವರ ತುತ್ತೀನ ಚೀಲ ತುಂಬಬೇಕು.ಹೀಗಾಗಿ ಅವರ ಅಂಗಡಿಗಳು ತೆರವು ಮಾಡದಂತೆ ಕ್ರಮವಹಿಸಲು ಹೇಳಿದರು.
ಸುಮಾರು 50 ಕ್ಕೂ ಹೆಚ್ಚು ವ್ಯಾಪಾರಸ್ಥರ ತಮ್ಮ ಅಹವಾಲನ್ನು ಮಾಜಿ ಸಚಿವರಿಗೆ ನೀಡಿದರು. ನಂತರದಲ್ಲಿ ನಿಮ್ಮೇಲ್ಲರ ಜೋತೆಯಲ್ಲಿ ನಾನಿದ್ದೇನೆ ಅಂಥಾ ಅಭಯ ಹಸ್ತವನ್ನು ನೀಡಿದರು. ಇದೇವೇಳೆ ಪಾಲಿಕೆ ಸದಸ್ಯ ಗೊವಿಂದರಾಜ್ ಅವರು ಇದ್ದರು.