ಬಳ್ಳಾರಿ, ಏ.11 : ನಗರದಲ್ಲಿ ಇಂದು ರಂಜಾನ್ ಪ್ರಾರ್ಥನೆ ಬಳಿಕ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ತಾವೂ ನಾಳೆ ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಯುಗಾದಿ, ರಂಜಾನ್
ಸುಖ ಶಾಂತಿ ಸಮೃದ್ಧಿ ಜನರಿಗೆ ನೀಡಲಿ ಎಂದ ಅವರು. ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಪ್ರಚಾರಕ್ಕೆ ಹೋದಲ್ಲೇಲ್ಲ ಮತದಾರರಿಂದ ಒಳ್ಳೆಯ ರೆಸ್ಪಾನ್ಸ್ ಇದೆ. ದೇಶಾದ್ಯಂತ ನಾಲ್ಕು ನೂರು ಸ್ಥಾನದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಕಳೆದ 2014ರಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದೆ. ಈಗ ಮತ್ತೆ ಗೆಲ್ಲುವ ವಿಶ್ವಾಸವಿದೆ.ನಾಳೆ ನಾಮಪತ್ರ ಸಲ್ಲಿಸಲಿದ್ದೇನೆ. ಪಕ್ಷದ ರಾಜ್ಯಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ಆನಂದ ಸಿಂಗ್, ಜೆಡಿಎಸ್ ಶಾಸಕ ನೇಮಿರಾಜ್ ನಾಯ್ಕ, ಶೃತಿ, ಗೋವಿಮನದ ಕಾರಜೋಳ, ಬಸನಗೌಎ ಪಾಟೀಲ್ ಯತ್ನಾಳ್, ಸೋಮಶೇಖರ ರೆಡ್ಡಿ, ದೇವೇಂದ್ರಪ್ಪ, ಲಕ್ಷ್ಮೀ ಅರುಣ, ವೈ.ಎಂ.ಸತೀಶ್ ಮೊದಲಾದವರು ಸೇರಿದಂತೆ ಹಲವು ನಾಯಕರು ಬರುತ್ತಿದ್ದಾರೆಂದರು.