ಬಳ್ಳಾರಿ,ಫೆ.10 : ತಾಲೂಕಿನ ಮೋಕಾ ಗ್ರಾಮದಲ್ಲಿ ಅಲೆಮಾರಿ ಬುಡಕಟ್ಟು ಜನಪರ ಸೇವಾ ಸಂಘದ ವತಿಯಿಂದ ರಾಜ್ಯಾಧ್ಯಕ್ಷರಾದ ಬಿ.ಎಂ
ಮಾರೆಪ್ಪ ಅವರ ನೇತೃತ್ವದಲ್ಲಿ ಕುಂದು ಕೊರತೆಗಳ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಭೆಯಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯದ ಮುಖಂಡರು ಮಾತನಾಡಿದರು, ನಾವು ಈ ಭಾಗದಲ್ಲಿ ಸುಮಾರು 2005 ರಿಂದ 19 ವರ್ಷಗಳ ಕಾಲ ಮೋಕಾದ ಹಗರಿ ಪಕ್ಕದಲ್ಲಿ ವಾಸ ಮಾಡುತ್ತಿದ್ದೇವೆ ಇಲ್ಲಿ ಹಗರಿ ಬಂದರೆ ಮನೆಗಳು ಕೊಚ್ಚಿ ಹೋಗುತ್ತವೆ ಎಂಬ ಭಯದಿಂದ ವಾಸವಿದ್ದು ಜೀವನ ನಡೆಸುತ್ತಿದ್ದೇವೆ, ಆದರೆ ಈ ಭಾಗದಲ್ಲಿ ಚುನಾವಣೆ ಸಮಯ ಬಂದಾಗ ರಾಜಕೀಯ ನಾಯಕರು ಮತದಾನವನ್ನು ಕೇಳಿದಾಗ ಅವರಿಗೆ ನಾವು ಸಾಕಷ್ಟು ಮನವಿಗಳನ್ನು ಮಾಡಿದ್ದೇವೆ, ರಾಜಕೀಯ ನಾಯಕರು ಹಲವಾರು ಪಕ್ಷಗಳು ಭರವಸೆಗಳನ್ನು ನೀಡಿ ಹೋಗುತ್ತಾರೆ, ಹೊರತು ಮತ್ತೆ ಈ ಭಾಗಕ್ಕೆ ತಿರುಗಿ ನೋಡುವುದಿಲ್ಲ. ಅವರ ಕೊಟ್ಟ ಭರವಸೆಯಿಂದ ನಾವು ಇನ್ನೂ ನಿವೇಶನ ಇಲ್ಲದೆ ಮುರುಕು ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಆದರೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರು ಕರ್ನಾಟಕ ರಾಜ್ಯದ ಸಚಿವರು ಆದ ಬಿ.ನಾಗೇಂದ್ರ ರವರು ಮತ ಕೇಳಲು ಈ ಭಾಗಕ್ಕೆ ಬಂದಿದ್ದರು, ಈ ಚುನಾವಣಾ ಸಮಯದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದವರು ಸಚಿವ ನಾಗೇಂದ್ರ ಅವರಿಗೆ ಸಮಸ್ಯೆಗಳನ್ನು ತಿಳಿಸಿದರು. ತಕ್ಷಣವೇ ಸಚಿವ ನಾಗೇಂದ್ರ ಅವರು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಭರವಸೆಯನ್ನು ನೀಡಿದ್ದಾರೆ, ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ, ರಾಜ್ಯದ ಸುತ್ತ ಓಡಾಡುವ ಕಾರ್ಯದಲ್ಲಿದ್ದಾರೆ. ನಮ್ಮ ಸಮುದಾಯದ ನಾಯಕರಾದ ಬಿ.ಎಂ.ಮಾರೆಪ್ಪ ಅವರು ಸಚಿವ ಬಿ.ನಾಗೇಂದ್ರ ರವರಿಗೆ ಹತ್ತಿರದವರಾಗಿದ್ದಾರೆ ತಾವುಗಳು ಈ ಬುಡಕಟ್ಟು ಜನಾಂಗದ ಸಮಸ್ಯೆಗಳನ್ನು ಬೇಡಿಕೆಗಳನ್ನು ಸಚಿವರ ಮುಂದೆ ಇಟ್ಟು ಅವರ ಜೊತೆಗೆ ಜೊತೆಗೆ ಓಡಾಡಿ ಸರ್ಕಾರಕ್ಕೆ ಮುಟ್ಟಿಸಿ ಪರಿಹರಿಸಿ ಕೊಡಬೇಕೆಂದು ಮಾತನಾಡಿದರು.
ಇದೆ ವೇಳೆ ಕುಂದು ಕೊರತೆಗಳ ಸಭೆಯ ಕೇಂದ್ರ ಬಿಂದುಗಳಾದ ಅಲೆಮಾರಿ ಬುಡಕಟ್ಟು ಜನಪರ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಬಿ.ಎಂ.ಮಾರೆಪ್ಪ ಅವರು ಮಾತನಾಡಿ ನಾನು ಚಿಕ್ಕವಯಸ್ಸಿನಲ್ಲಿ ಈ ಭಾಗದಲ್ಲೆಲ್ಲಾ ನಿಮ್ಮ ಜೊತೆಗೆ ಓಡಾಡಿದಂತ ವ್ಯಕ್ತಿಯಾಗಿದ್ದೇನೆ, ಆದರೆ ನಾನು ತಮಗೆ ಏನಾದರೂ ಸಹಾಯ ಮಾಡಬೇಕು ಎಂದು ಇಂದು ಕುಂದು ಕೊರತೆಗಳ ಸಭೆಯನ್ನು ಮಾಡಲು ಬಂದಿದ್ದೇನೆ, ನನಗೆ ನನ್ನ ಅಣ್ಣನವರಾದ ಸಚಿವರಾದ ಮಾನ್ಯ ಬಿ.ನಾಗೇಂದ್ರಣ್ಣರವರು ಹತ್ತಿರದವರಾಗಿದ್ದಾರೆ ನೀವು ಹೋರಾಟಕ್ಕೆ ಸಹಕಾರ ಬೆಂಬಲವನ್ನು ನೀಡಬೇಕು ನಿಮಗೆ ಬೇಕಾದ ಸವಲತ್ತನ್ನು ತಂದುಕೊಡುವಲ್ಲಿ ಕಟುಬದ್ಧನಾಗಿರುತ್ತೇನೆ. ಸರ್ಕಾರದ ಸೌಲತ್ತುಗಳನ್ನು ತಂದು ಕುಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಎದೆತಟ್ಟಿ ಹೇಳಿದರು.
ಈ ಭಾಗದಲ್ಲಿ ನಿಮಗೆ ವಾಸ ಮಾಡಲಿಕ್ಕೆ ನಿವೇಶನ ಇಲ್ಲ, ಈ ಭಾಗದ ಸುಮಾರು 90 ಕುಟುಂಬಗಳಿಗೆ ನಿವೇಶನ ಮತ್ತು ವಾಸ ಮಾಡುವಂಥ ಜಾಗದಲ್ಲಿ ವಿದ್ಯುತ್ ಇಲ್ಲ, ಸರಿಯಾದ ರಸ್ತೆ ಇಲ್ಲ ನಿಮ್ಮ ಸಮಸ್ಯೆಗಳಿಗೆ ನಮ್ಮ ಜೊತೆ ಕೈಜೋಡಿಸಿದರೆ ಸಚಿವರ ಜೊತೆ ಮಾತನಾಡಿ ಸರ್ಕಾರದಿಂದ ಬರುವಂತ ಎಲ್ಲಾ ಯೋಜನೆಗಳನ್ನು ತಮಗೆ ತಲುಪಿಸುತ್ತೆನೆ ಎಂದು ಹೇಳಿದರು.
ನೀವೆಲ್ಲರೂ ಒಗ್ಗಟ್ಟಾಗಿ ಸೇರಿ ಒಂದು ದಿನಾಂಕವನ್ನು ನಿಗದಿ ಮಾಡಿ ಮಾನ್ಯ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸೋಣ ಅವರಿಗೆ ೧೫ ದಿನಗಳ ಕಾಲ ಅಥವಾ ಒಂದು ತಿಂಗಳ ಕಾಲ ಕಾಲಾವಕಾಶವನ್ನು ಕೊಡೋಣ, ಅಲ್ಲಿ ಸಮಸ್ಯೆ ಬಗ್ಗೆ ಹರಿಯದೆ ಹೋದರೆ, ಸಚಿವ ಬಿ.ನಾಗೇಂದ್ರ ರವರಿಗೆ ಮನವಿ ಪತ್ರವನ್ನು ಸಲ್ಲಿಸಿ ನಮ್ಮ ಎಲ್ಲಾ ಅಲೆಮಾರಿ ಜನಾಂಗದವರ ಸಮಸ್ಯೆಗಳನ್ನು ಪರಿಹರಿಸಿ ಎಂದು ಮನವಿ ಮಾಡಿಕೊಳ್ಳುವಲ್ಲಿ ಪ್ರಯತ್ನ ಮಾಡಿ ನಮ್ಮ ಸೌಲಭ್ಯಗಳನ್ನು ಪಡೆಯೋಣ ಎಂದು ಸಭೆಯಲ್ಲಿ ತಿಳಿಸಿದರು.
ಕೊನೆಗಳಿಗೆಯಲ್ಲಿ ಅಲೆಮಾರಿ ಬುಡಕಟ್ಟು ಜನಪರ ಸೇವಾ ಸಂಘದ ವತಿಯಿಂದ ಸನ್ಮಾನವನ್ನು ಹಿರಿಯರಿಗೆ ಮುಖಂಡರಿಗೆ ನಡೆಸಿಕೊಟ್ಟರು. ಬುಡ್ಗ ಜಂಗಮ ಸಮುದಾಯದ ಮುಖಂಡರಾದ ಸುಂಕಪ್ಪ ಮೋತಿ, ಅಂಡಿ ಜೋಗಿ ನಾಗೇಶ್, ಹುಸೇನಿ, ಸುಂಕಣ್ಣ, ಕೊಂಡಪಲ್ಲಿ ಈರಣ್ಣ ಅವರಿಗೆ ಗೌರವದ ಸನ್ಮಾನವನ್ನು ಸಲ್ಲಿಸಿ ಅಲೆಮಾರಿ ಬುಡಕಟ್ಟು ಜನಪರ ಸೇವಾ ಸಂಘದ ವತಿಯಿಂದ ಅಭಯ ಹಸ್ತವನ್ನು ನೀಡಿದರು.
ಈ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟು ಜನಪರ ಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಬ್ಬಣ್ಣ ಸಿಳ್ಳೆ ಕ್ಯಾತಸ್, ರಾಜ್ಯ ಉಪಾಧ್ಯಕ್ಷರಾದ ಹೊನ್ನಪ್ಪ, ಮೋತಿ ರಾಮುಡು, ಜಂಬಣ್ಣ ಸೇರಿದಂತೆ ಅಲೆಮಾರಿ ಬುಡಕಟ್ಟು ಸಮುದಾಯದ ಮುಖಂಡರು ಹಾಗೂ ಬಂಧುಗಳು ಉಪಸ್ಥಿತರಿದ್ದರು.